ಮಗು ಕಲಿಯುವ ಪರಿಸರ ಉತ್ತಮವಾಗಿರಬೇಕು: ಜಿ.ಎಂ.ಬಸವಲಿಂಗಪ್ಪ

0
11
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ: ಪ್ರತಿಯೊಂದು ಮಗು ನೈಸರ್ಗಿಕವಾಗಿ ಕಲಿಯುವಂತಾಗಬೇಕೆಂಬ ಗುರಿ ಪರಿಪೂರ್ಣವಾಗಬೇಕಾದರೆ ಕಲಿಸುವ ಪರಿಸರ ಉತ್ತಮವಾಗಿರಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಜಿ.ಎಂ.ಬಸವಲಿಂಗಪ್ಪ ಅಭಿಪ್ರಾಯ ಪಟ್ಟರು.

ತಾಲ್ಲೂಕಿನ ಸರ್ಕಾರಿ ದ್ಯಾಮನಕೊಪ್ಪದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ನಲಿಕಲಿ ಸಂಪನ್ಮೂಲ ಘಟಕದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಕುರಿತು ಮಾತನಾಡಿದರು. ‘ಪ್ರತಿಯೊಬ್ಬ ಶಿಕ್ಷಕ ಓದುಗನಾಗಬೇಕು. ಪಠ್ಯದಲ್ಲಿ ಬರುವ ಎಲ್ಲ ಅಂಶಗಳನ್ನು ಸಮರ್ಥವಾಗಿ ಮಕ್ಕಳಿಗೆ ಮನಮುಟ್ಟುವಂತೆ ತಿಳಿಯಪಡಿಸುವ ಕಲೆಯನ್ನು ಹೊಂದಿರಬೇಕು. ಅಂದಾಗ ಮಾತ್ರ ಕಲಿಕೆ ವೃದ್ಧಿಯಾಗಲು ಸಾಧ್ಯ. ಇಂದು ಶಿಕ್ಷಕ ಪಠ್ಯಪುಸ್ತಕದ ಆಶಯಕ್ಕೆ ತಕ್ಕುದಾಗಿ ಬೋಧನೆ ಮಾಡದೇ ಇರುವುದು ಶೋಚನೀಯ. ಇದು ಸುಧಾರಿಸಿಕೊಳ್ಳಬೇಕು. ಪ್ರತಿಯೊಬ್ಬ ಶಿಕ್ಷಕನ ಬೋಧನಾ ನೈಪುಣ್ಯವನ್ನು ಹೆಚ್ಚಿಸುವ, ಅವರ ಬೋಧನಾ ಕೌಶಲ್ಯಗಳನ್ನು ವಿಸ್ತರಿಸುವ ಕೆಲಸವನ್ನು ಮೇಲ್ ಹಂತದ ಅಧಿಕಾರಿಗಳು ನೋಡಿಕೊಳ್ಳಬೇಕು. ಅವರಲ್ಲಿ ಆತ್ಮಸ್ಥೆöÊರ್ಯವನ್ನು ತುಂಬುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಡಯಟ್‌ನ ಹಿರಿಯ ಉಪನ್ಯಾಸಕರಾದ ಎಂ.ಬಿ.ಅಂಬಿಗೇರ, ಸವಣೂರ ತಾಲ್ಲೂಕ ಕ್ಷೆÃತ್ರ ಶಿಕ್ಷಣಾಧಿಕಾರಿ ಸುಧಾಕರ್ ಅವರು ಅಭಿಪ್ರಾಯ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಗುಣಮಟ್ಟದ ಬಗ್ಗೆ ಚರ್ಚಿಸುತ್ತಾ ಶಾಲೆಯ ಮಕ್ಕಳ ಕಲಿಕಾ ಮಟ್ಟವನ್ನೂ ಚರ್ಚಿಸಲಾಯಿತು. ಕುಮಾರಿ ಚೈತ್ರಾ ತಳವಾರ ಎಂಬ ಮೂರನೇ ತರಗತಿಯ ವಿದ್ಯಾರ್ಥಿನಿಯು ಇಪ್ಪತ್ತರವರೆಗಿನ ಮಗ್ಗಿಗಳನ್ನು ಆಂಗ್ಲಭಾಷೆ ಮತ್ತು ಕನ್ನಡದಲ್ಲಿ ಹಿಮ್ಮುಖವಾಗಿ ಹೇಳಿದ್ದನ್ನು ಕಂಡು ಎಲ್ಲರೂ ಮೂಕವಿಸ್ಮಿತರಾದರು. ಶಾಲಾ ಕಲಿಕೆಯ ಗುಣಮಟ್ಟವನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸಿದರು.

ಉಪನ್ಯಾಸಕರಾದ ಶ್ರಿÃಮತಿ ಮಸೂದಾ, ಜ್ಞಾನೇಶ್ವರ, ಸಿ.ಪಿ.ಮೂಲಿಮನಿ, ಎನ್.ಜೆ.ಕುಲಕರ್ಣಿ, ಕ್ಷೆÃತ್ರ ಸಮನ್ವಯಾಧಿಕಾರಿಗಳಾದ ಬಿ.ಎಂ.ಬೇವಿನಮರದ, ಎಂ.ಎಫ್.ಬಾರ್ಕಿ, ಶಿವರಾಜ ಶೀಮಿಕೆರಿ, ಸಿ.ಎಸ್.ಭಗವಂತಗೌಡರ, ಜಗದೀಶ ಬಳಿಗಾರ, ನಾಗರಾಜ ಬಣಕಾರ, ಮಂಜುಳಾ ಚಂದ್ರಗಿರಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯೇಂದ್ರ ಯತ್ನಳ್ಳಿ, ಕಾರ್ಯದರ್ಶಿ ಬಿ.ಎಸ್.ಚಲ್ಲಾಳ, ಇ.ಸಿ.ಓ. ಸಿ.ಎಸ್.ಸನದಿ, ಬಿ.ಆರ್.ಪಿಗಳಾದ ಕೆ.ಟಿ.ವಡ್ಡರ್, ದೀಪಾ ಮೇಸ್ತಾ, ಸಂತೋಷ ಪೂಜಾರ್, ಮೇಲ್ಮುರಿ, ಕಮತರ, ಸಿ.ಆರ್.ಪಿ.ಗಳಾದ ಕುಮಾರ ಗೋಣಿಮಠ, ಎಸ್.ಡಿ.ದೊಡ್ಡಮನಿ, ಗಿರೀಶ್ ನೆಲ್ಲಿಕೊಪ್ಪ, ಮೌನೇಶ್ ಕಮ್ಮಾರ, ನಿರಂಜನ್ ಎಂ. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಬಿ.ಎಚ್.ಚನ್ನಗೌಡ್ರ, ಸದಸ್ಯರಾದ ಶಿವಪ್ಪ ಕುರಡಿ, ಸಿದ್ದಪ್ಪ ಕೊಪ್ಪದ, ಶೇಖಪ್ಪ ಕುರಡಿ, ಸಿದ್ದಪ್ಪ ಕುರಡಿ, ಶಶಿಧರ ಕುರಡಿ, ಪಂಚಪ್ಪ ನೆಗಳೂರ, ಎಸ್.ಯು.ಮಡ್ಲೂರ ಇತರರಿದ್ದರು. ಕ್ಷೆÃತ್ರ ಸಮನ್ವಯಾಧಿಕಾರಿ ಬಿ.ಎಂ. ಬೇವಿನಮರದ ಸ್ವಾಗತಿಸಿದರು ಮುಖ್ಯೊÃಪಾಧ್ಯಾಯ ಎಸ್.ಎಫ್. ಕಠಾರಿ ವಂದಿಸಿದರು.

loading...