ಮಳೆಗೆ ಕೊಚ್ಚಿ ಹೋದ ಸೇತುವೆ: ದುರಸ್ತಿಗೆ ಆಗ್ರಹ

0
12
loading...

ಕನ್ನಡಮ್ಮ ಸುದ್ದಿ-ರೋಣ: ಅಧಿಕಾರಿಗಳ ನಿರ್ಲಕ್ಷ್ಯತೆಯ ಪರಿಣಾಮದಿಂದ ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಲಿದ್ದಾರೆ. ಎರಡು ಗ್ರಾಮಗಳ ಮಧ್ಯದ ಸೇತುವೆ ಮಳೆಯಿಂದ ಕೊಚ್ಚಿ ಹೋಗಿ ಅಪಾಯಕ್ಕೆ ಎಡೆಮಾಡಿಕೊಟ್ಟಿದೆ. ಇಂತಹ ಸ್ಥಿತಿಯಲ್ಲಿ ನಿತ್ಯವೂ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದಿಂದ ಒಳರಸ್ತೆಯ ಬಾಸಲಾಪೂರ ಗ್ರಾಮದ ಮೂಲಕ ಹಿರೇಮಣ್ಣೂರ ಗ್ರಾಮಕ್ಕೆ ತಲುಪುವ ಒಳರಸ್ತಯಲ್ಲಿರುವ ಸೇತುವೆಯು ಕೊಚ್ಚಿ ಹೋಗಿ ಇನ್ನೇನು ಇಂದೋ ನಾಳೆಯಂಬಂತೆ ಉಳಿದ ಸೇತುವೆಯೂ ಕೊಚ್ಚಿ ಹೋಗುತ್ತದೆ ಎಂಬ ಆತಂಕ ಜನತೆಯಲ್ಲಿ ಮನೆಮಾಡಿದೆ.
ನಿತ್ಯ ರೈತರು ಕೈಯಲ್ಲಿ ಜೀವ ಹಿಡಿದುಕೊಂಡು ತಮ್ಮ ಜಮೀನುಗಳಿಗೆ ತೆರಳುತ್ತಲಿದ್ದಾರೆ. ಅದರಂತೆ ನಿತ್ಯ ವಾಹನಗಳ ಸಂಚಾರದಿಂದ ಉಳಿದ ಅವಶೇಷವೂ ಕೂಡಾ ಯಾವ ಸಮಯದಲ್ಲಿಯಾದರೂ ಎರಡು ಗ್ರಾಮಗಳ ಸಂಪರ್ಕವನ್ನು ನಿಲ್ಲಿಸಬಹುದು ಎಂಬ ಚಿಂತೆ ಎದುರಾಗಿದೆ.
ಇದು ಅಧಿಕಾರಿಗಳ ಬೇಜವಾಬ್ದಾರಿಯ ವರ್ತನೆಯಾಗಿದೆ. ಸೂಕ್ತ ಕ್ರಮವನ್ನು ಜರುಗಿಸಿ ಜನತೆಯ ಆತಂಕ ದೂರ ಮಾಡಿ ಎಂದು ಸಾರ್ವಜನಿಕರು ಆಕೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ರಸ್ತೆಯು ಪಟ್ಟಣಕ್ಕೆ ಸಮೀಪದ ಮಾರ್ಗವಾಗಿದ್ದು, ಜನಸಾಮಾನ್ಯರಿಗೆ ಇಲ್ಲಿಂದ ಸಂಚರಿಸಲು ಹೆಚ್ಚು ಅನುಕೂಲವಾಗಿದೆ. ಆದರೆ ರಸ್ತೆಯಲ್ಲಿ ತೆಗ್ಗು-ದಿಣ್ಣೆಗಳೆ ಹೆಚ್ಚು ಕಾಣಿಸುತ್ತಿವೆ. ಇಂತಹ ಸ್ಥಿತಿಯಲ್ಲಿ ಇದ್ದರೂ ಕೂಡಾ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಸುಮ್ಮನಿದ್ದಾರೆ. ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಲಿ.
ಸುರೇಶ ಹಕ್ಕಿ.

loading...