ಮಳೆಯ ಅಭಾವದಿಂದ…ಬೇವಿನ ಬೀಜ ಆರಿಸೋಕೆ ಮೊರೆ ಹೋದ ರೈತರು…!

0
12
loading...

ಧನ್ಯಕುಮಾರ ಧನಶೆಟ್ಟಿ
ಇಂಡಿ: ಮುಂಗಾರು ಮಳೆಯಿಲ್ಲದ ಕಾರಣ ಮತ್ತೇ ಬರಗಾಲದ ಛಾಯೆ ಮೂಡಿದೆ. ಆದರೆ ಬೇರೆ ರಾಜ್ಯಗಳಿಗೆ ಹೋಗಬೇಕಾದರೆ ಮಳೆ ಹೆಚ್ಚಾಗಿದ್ದು. ಇದರಿಂದ ದುಡಿಯುವವವರ ಕೈಗೆ ಉದ್ಯೋಗ ಇಲ್ಲದಂತಾಗಿದೆ. ಆದರೆ ಬೇವಿನ ಬೀಜವನ್ನು ಆರಿಸಿಕೊಂಡು ತಮ್ಮ ಜೀವನ ಸಾಗಿಸುವಂತಾಗಿದೆ.
ಬೇವು ಕಹಿ ಎಂಬುದು ಎಲ್ಲರಿಗೂ ಗೊತ್ತು ಬೇವು ಬದುಕಿಗೆ ಸಿಹಿಯಾಗುತ್ತದೆ ಎಂಬುದನ್ನು ಇಲ್ಲಿನ ಮತ್ತು ಈ ಭಾಗದ ಜನ ತೋರಿಸಿಕೊಟ್ಟಿದ್ದಾರೆ. ಸತತ ಬರಗಾಲದಿಂದ ತತ್ತರಿಸಿದ ಜನತೆಗೆ ಈ ಭಾರಿ ಆರಂಭದಲ್ಲಿ ಮಳೆ ಅಬ್ಬರಿಸಿ ನಂತರ ಕೈಕೊಟ್ಟಿದ್ದರಿಂದ ರೈತರು ಕೂಲಿ ಕಾರ್ಮಿಕರು ಹೊಟ್ಟಿ ತುಂಬಿಸಿಕೊಳ್ಳುವದೆ ಒಂದೆ ಸವಾಲಾಗಿತ್ತು. ಗುಳೆ ಹೊಗುವ ಕೆಲ ಜನರಿಗೆ “ಬೇವಿನ ಬೀಜ ಆಯ್ದುಕೊಳ್ಳುವಿಕೆ”ಒಂದು ಉದ್ಯೋಗ ನೀಡಿದಂತಾಗಿದೆ.
ಇವರಿಗೆ ಈಗ ಈ ಭಾಗದಲ್ಲಿ ಜುಲೈ ಮತ್ತು ಅಗಷ್ಟ ತಿಂಗಳಲ್ಲಿ ಬೇವಿನ ಕಾಯಿಯ ಸುಗ್ಗಿ ಬಂದಿದೆ ಬೇವಿನ ಕಾಯಿಯಾಗಿ, ಹಣ್ಣಾಗಿ ಹೇರಳವಾಗಿ ಸುರಿದು ಗಿಡದ ಕೆಳಗೆ ಉದರಿಬಿದ್ದಿರುವದರಿಂದ ಬೆವು ಆರಿಸುವವರಿಗೆ ಒಂದು ಕಾಯಕವಾಗಿದೆ ಕೂಲಿ ಕಾರರಿಗೆ ಅಲ್ಪ ಸ್ವಲ್ಪ ಆದಾಯ ಹೊಂದಿದೆ ಅನೂಕೂಲವು ಆಗಿದೆ ಬೇಸಿಗೆಯ ಬೇವಿನ ಮರದ ನೆರಳು ತಂಪು ಎನ್ನುವಂತೆ. ಬರಗಾಲದ ಬೇವಿನ ಕಾಯಿಯೆ ಜೀವನಾಧಾರವಾಗಿದೆ
ಸರಿಯಾಗಿ ಮಳೆ ಇಲ್ಲದೆ ಕೃಷಿ ಚಟುವಟಿಕೆಗಳು ನಿಂತಿವೆ. ಇದರಿಂದ ನಗರ ಪ್ರದೇಶದಡೆಗೆ ಮುಖ ಮಾಡಿದ್ದಾರೆ ಇನ್ನು ಕೆಲವರು ಉದ್ಯೋಗ ಅರಸಿ ನೆರ ರಾಜ್ಯ ಗೋವಾ,ಮಹಾರಾಷ್ಟ್ರ ಸೇರಿದಂತೆ ಮತ್ತಿತರೆಡೆಗೆ ಗುಳೆ ಹೊಗಿದ್ದಾರೆ.
ಇನ್ನು ಕೆಲವರು ಇಲ್ಲಿಯೆ ಉಳಿದುಕೊಂಡಿದ್ದಾರೆ ಅಂತಹವರು ಎಣ್ಣೆ, ಸೋಪು, ಔಷಧಿ, ಗೊಬ್ಬರ ಹಾಗೂ ಇನ್ನಿತರಗಳಿಗೆ ಉಪಯೋಗಿಸುವ ಬೇವಿನ ಬೀಜವನ್ನು ಆರಿಸಿ ತಂದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.ಪುಕ್ಕಟೆಯಾಗಿ ಸಿಗುವ ಬೇವಿನ ಬೀಜವನ್ನು ಆರಿಸಿ ತರುವ ಕಾಯಕದಲ್ಲಿ ಕೂಲಿಕಾರರು, ಕೃಷಿಕರು ಮತ್ತು ನಿರದ್ಯೋಗಿಗಳು ಕೈಜೋಡಿಸುತ್ತಿದ್ದಾರೆ.
ಈ ವರ್ಷ ಹೆಚ್ಚು ಜನ ಕೂಲಿಕಾರರು ಮತ್ತಿತರರು ಬೇವಿನ ಬೀಜ ಸಂಗ್ರಹಿಸಿ ಮಾರುಕಟ್ಟೆಗೆ ತರುತ್ತಿದ್ದಾರೆ. ಬೀಜವನ್ನು ನಾವು ಪ್ರತಿ ಡೆಬ್ಬಿ ಒಂದಕ್ಕೆ 70 ರೂ.ಯಂತೆ ಅವರಿಂದ ಕೊಳ್ಳುತ್ತಾರೆ. ಒಬ್ಬರು ಒಂದು ದಿನಕ್ಕೆ ಅತಿಹೆಚ್ಚು ಅಂದರೆ 15 ಡೆಬ್ಬಿ ಬೇವಿನ ಬೀಜ ಸಂಗ್ರಹಿಸುತ್ತಾರೆ. ಅವರು ಸಾವಿರ ರೂ. ಗಳಿಸುತ್ತಾರೆ ಇನ್ನು ಕೇಲವರು 200 ರಿಂದ 500 ರೂ ತನಕ ಹಣ ಪಡೆಯುತ್ತಾರೆ ಎಂದು ಬೇವು ಬೀಜ ಕೊಳ್ಳುವವರು ಹೇಳುತ್ತಾರೆ.
ಹೆಚ್ಚು ಬೀಜ ದರ ಅಷ್ಟೆ: ಕಳೆದ ಬಾರಿಗಿಂತ ಈ ಬಾರಿ ಈ ಬಾಗದಲ್ಲಿ ಬೆಸಿಗೆಯಲ್ಲಿ ಅಲ್ಪ ಮಳೆಯಿಂದ ಬೇವಿನ ಮರದಲ್ಲಿ ಹೆಚ್ಚು ಕಾಯಿ ಬಿಟ್ಟಿವೆ. ಈ ಸಲ ಬೇವಿನ ಬೀಜ ಆರಿಸುವ ಜನರಿಗೆ ರೂ 70 ಕ್ಕಿಂತ ಹೆಚ್ಚಿನ ದರ ಸಿಗುತ್ತದೆ ಎಂದು ಕೂಲಿಕಾರರು ನಿರಿಕ್ಷೀಸಿದ್ದರು ಆದರೆ ಕಳೆದ ವರ್ಷದಂತೆ ಒಂದು ಡಬ್ಬಿಗೆ ಅದೆ ದರ ರೂ 70 ನಂತೆ ಮುಂದು ವರೆದಿರುವದರಿಂದ ಕೂಲಿಕಾರರಿಗೆ ಸ್ವಲ್ಪ ನಿರಾಸೆ ಎನಿಸಿದರೆ ಈ ಬಾರಿ ಹೆಚ್ಚಿನ ದರ ಸಿಗುವ ನೀರಿಕ್ಷೆ ಇದೆ ಎಂದು ತಾಂಬಾ ಬೇವಿನ ಬೀಜ ಸಂಗ್ರಹಕಾರ ಗುಂಡಪ್ಪ ಕೊರಿವೆರ ತಿಳಿಸಿದರು. ಒಂದು ವಾರ ಈ ಸಂಗ್ರಹವಾದ ಬೀಜವನ್ನು ಮಹಾರಾಷ್ಟ್ರದ ಸಾಂಗೋಲಾಗೆ ಕಳುಹಿಸಲಾಗುತ್ತದೆ ಎನ್ನುತ್ತಾರೆ ಅವರು
ರಜೆಯಂದು ವಿದ್ಯಾರ್ಥಿಗಳು ಭಾಗಿ: ಶಾಲೆಯ ರಜೆ ದಿನದಂದು ವಿದ್ಯಾರ್ಥಿಗಳು ಪೋಷಕರ ಜೋತೆಗೆ ತೆರಳಿ ಬೇವಿನ ಮರದ ಕೆಳಗೆ ಬಿದ್ದಿರುವ ಬೀಜ ಸಂಗ್ರಹಿಸುವ ಕೆಲಸಮಾಡುತ್ತಿದ್ದು ಪೋಷಕರಿಗೆ ಸಹಾಯ ಮಾಡುತ್ತಾರೆ ಅದರೊಂದಿಗೆ ಆದಾಯ ತರುವ ಕೆಲಸಕ್ಕೆ ಪಾಲಕರಿಗೆ ಸಹಾಯಕರು ಆಗುತ್ತಿದ್ದಾರೆ. ಸದ್ಯಕ್ಕೆ ಬೇವಿನ ಮರದ ಕೆಳಗೆ ಬಿದ್ದಿರುವ ಬೀಜ ಸಂಗ್ರಹಿಸಿ ಕೊಳ್ಳುವವರಿಗೆ ಮಾರಾಟ ಮಾಡುವ ಕೃಷಿ ಮತ್ತು ಕೂಲಿಕಾರರಿಗೆ ಕೆಲಸ ನೀಡಿರುವದರಲ್ಲದೆ ಬದುಕಿಗೆ ಸಿಹಿ ಯಾಗಿರುವದಂತು ನಿಜವಾಗಿದೆ.

loading...