ಮಳೆ ಬಂದರೆ ಕೆಸರು ಗದ್ದೆಯಾಗುವ ರಸ್ತೆ

0
6
loading...

ಸಾವಳಗಿ: ರಸ್ತೆಯುದ್ದಕ್ಕೂ ತೆಗ್ಗು ದಿನ್ನೆಗಳು, ದೊಡ್ಡ ದೊಡ್ಡ ಕಂದಕಗಳು, ಸ್ವಲ್ಪ ಮಳೆಯಾದರೂ ಕಿಚಿ ಕಿಚಿ ರಸ್ತೆ, ವಾಹನಗಳ ಸಂಚಾರ, ಪಾದಾಚಾರಿಗಳ ಸಂಚಾರಕ್ಕೂ ಸಂಚಕಾರ ಎದುರಾದ ಘಟನೆಗಳು ನಡೆದಿವೆ. ಸಾವಳಗಿಯಿಂದ ಜಂಬಗಿ ಮೂಲಕ ಜಮಖಂಡಿ ೧೮ ಕಿ.ಮೀ ಇದೆ, ಹೆಚ್ಚಾಗಿ ಜನರು ಇದೆ ರಸ್ತೆ ಮೂಲಕ ಸಂಚಾರ ಆರಂಭಿಸಿದ್ದಾರೆ, ರಸ್ತೆ ೬ ಕಿ.ಮೀ ಸಂಚರಿಸಬೇಕಾದರೆ ಅರ್ಧ ತಾಸು ಬೇಕು, ಈ ರಸ್ತೆಯಲ್ಲಿ ಸಂಚರಿಸಿ ಪ್ರಯಾಣಿಕರು ಹೈರಾಣಾಗುತ್ತಾರೆ, ಇನ್ನು ರಾತ್ರಿ ವೇಳೆಯಲ್ಲಿ ಸಂಚರಿಸುವವರ ಕಷ್ಟ ಹೇಳತೀರದು.
ನಿತ್ಯದ ವ್ಯವಹಾರಗಳಿಗೆ ಜಮಖಂಡಿಗೆ ಹೋಗುವ ನೂರಾರು ಜನ ಇದೇ ಮಾರ್ಗವಾಗಿ ಸಂಚರಿಸುತ್ತಾರೆ, ವಿದ್ಯಾರ್ಥಿಗಳು ಸಹ ಶಾಲಾ-ಕಾಲೇಜಗಳಿಗೆ ಹದಗೆಟ್ಟಿರುವ ರಸ್ತೆಯಲ್ಲೆ ವಿದ್ಯಾರ್ಥಿಗಳು ಸಂಚರಿಸಬೇಕು, ರಸ್ತೆ ಹದಗೆಟ್ಟಿರುವದರಿಂದ ನಿಗದಿತ ವೇಳೆಯಲ್ಲಿ ತಲುಪದೆ ಪಡಬಾರದ ಕಷ್ಟಪಡುತ್ತಿದ್ದೆÃವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಅಲ್ಲಿನ ಗ್ರಾಮಸ್ಥರು.

ಹೈರಾಣಾಗಿ ಹೋಗಿ ಮಕ್ಕಳು ಶಿಕ್ಷಣ ಕಲಿಯುವುದು ಬಹಳ ಕಷ್ಠವಾಗುತ್ತಿದೆ, ಎಷ್ಟೊÃ ಕುಟುಂಬಗಳ ಬಾಲಕಿಯರು ಹೆಚ್ಚಿನ ವಿದ್ಯೆ ಕಲಿಸಲು ಮುಂದಾಗಿಲ್ಲಾ, ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದ ಪರಿಣಾಮ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತಿದೆ ಎಂದು ದೂರಿದರು.
ಸರಕಾರ ಗ್ರಾಮೀಣ ಪ್ರದೇಶಗಳ ರಸ್ತೆಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕೋಟ್ಯಾಂತರ ಅನುದಾನ ಬಿಡುಗಡೆ ಮಾಡುತ್ತಿದೆ, ಆದರೆ ವ್ಯವಸ್ಥೆ ಲೋಪದಿಂದಾಗಿ ಸರಕಾರದ ಯೋಜನೆಗಳು ದಿಕ್ಕು ತಪ್ಪುತ್ತಿವೆ ಎನ್ನುವುದಕ್ಕೆ ಈ ರಸ್ತೆ ನಿದರ್ಶನ. ಇನ್ನೂ ರಸ್ತೆ ದುರಸ್ಥಿಗಾಗಿ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತಂದರೂ ಏನು ಪ್ರಯೋಜವಾಗಿಲ್ಲ, ಈಗಾಗಲೆ ಈ ಮಾರ್ಗದಲ್ಲಿ ಸಂಚರಿಸಿದ ಎಷ್ಟೊÃ ವಾಹನ ಸವಾರರು ತೆಗ್ಗು ದಿನ್ನೆಯಲ್ಲಿ ಬಿದ್ದು ಕೈಕಾಲು ಮುರುದುಕೊಂಡು ಆಸ್ಪತ್ರೆ ಸೇರಿದ ಘಟನೆಯೂ ನಡೆದಿದೆ. ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದರೂ ಯಾರೂ ಕೇಳುವರಿಲ್ಲದಂತಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲು ಮುಂದಾಗದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

loading...