ಮಹದಾಯಿ ಜೀವಜಲವಾಗಿದ್ದು ಈ ಕುರಿತು ಸರ್ಕಾರಗಳು ಅನುಷ್ಠಾನ ಕೈಗೊಳ್ಳಲೇಬೇಕು: ಜೋಗಣ್ಣವರ

0
9
loading...

ಕನ್ನಡಮ್ಮ ಸುದ್ದಿ- ನರಗುಂದ: ಮಹದಾಯಿ ನಮ್ಮ ಜೀವಜಲವಾಗಿದ್ದು ಈ ಕುರಿತು ಸರ್ಕಾರಗಳು ಅನುಷ್ಠಾನ ಕೈಗೊಳ್ಳಲೇಬೇಕು. ಈ ವಿವಾದ ನ್ಯಾಯಮಂಡಳಿಯಲ್ಲಿದ್ದು ಇದರ ಕೊನೆ ತೀರ್ಪು ಬರುವ ಅಗಷ್ಟರೊಳಗಾಗಿ ತಿಳಿಯಲಿದೆ. ಅದುವರೆಗೂ ಮಹದಾಯಿಗಾಗಿ ನಡೆದ ಈ ಹೊರಾಟ ನಿಲ್ಲುವುದಿಲ್ಲ. ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಜು.1 ರಂದು ನರಗುಂದದಿಂದ ಬೆಂಗಳೂರ ಛಲೋ ಕಾರ್ಯಕ್ರಮ ಹಾಕಿಕೊಂಡು ತೆರಳುತ್ತಿದ್ದೇವೆಂದು ಮಹದಾಯಿ ಮಲಪ್ರಭಾ ಹೋರಾಟ ಸಮಿತಿ ಕೋಶಾಧ್ಯಕ್ಷ ಎಸ್.ಬಿ. ಜೋಗಣ್ಣವರ ತಿಳಿಸಿದರು.

ಮಹದಾಯಿ ನದಿ ಅನುಷ್ಟಾನ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನರಗುಂದದ ಹೋರಾಟ ಸಮಿತಿ ಸದಸ್ಯರು ಜು. 1 ರಂದು ಮುಖ್ಯಮಂತ್ರಿಗಳನ್ನು ಬೇಟಿಯಾಗಲು ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಧರಣಿ ವೇದಿಕೆಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದ ಅವರು, ಮಹದಾಯಿಗಾಗಿ 1082 ದಿನ ಹೋರಾಟ ಮುಂದುವರೆಸಲಾಗಿದೆ. ಈ ನೀರಿನ ಬೇಡಿಕೆ ಮತ್ತು ರೈತರ ಸಾಲಮನ್ನಾ ಹಾಗೂ ರೈತರ ಉತ್ಪನ್‍ಗಳನ್ನು ಬೆಂಬಲ ಬೆಲೆಯಲ್ಲಿ ಖರೀಧಿಸುವ ಕುರಿತು, ಇದುವರೆಗೂ ಮಹದಾಯಿ ಬೇಡಿಕೆಗಾಗಿ ಆಗ್ರಹಿಸಿ ನಡೆಸಿದ ರೈತರ ಧರಣಿಯಲ್ಲಿ 11 ರೈತರು ಸಾವನ್ನಪ್ಪಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಮಹದಾಯಿಗಾಗಿ ನಡೆದ ಹೋರಾಟ ಸಂದರ್ಭದಲ್ಲಿ ಮಡಿದ ರೈತರ ಕುಟುಂಬಗಳಿಗೆ ತಲಾ 5 ಲಕ್ಷರೂ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಆ ಭರವಸೆಯನ್ಣೂ ಈಡೇರಿಸಬೇಕೆಂದು ಮುಖ್ಯಮಂತ್ರಿ ಕುಮರಾಸ್ವಾಮಿಯವರನ್ನು ಬೇಟಿಯಾಗಿ ಆಗ್ರಹಿಸಲಾಗುವುದು ಎಂದು ತಿಳಿಸಿದರು. ಜು. 2 ರಂದು ರೈತರನ್ನು ಬೇಟಿಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಹೀಗಾಗಿ ಬೆಂಗಳೂರ ಛಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಹದಾಯಿ ಮಲಪ್ರಭಾ ಜೋಡಣಾ ಹೋರಾಟ ಸಮಿತಿ ಉಪಾಧ್ಯಕ್ಷ ರಮೇಶ ನಾಯ್ಕರ್, ರೈತ ಸೇನಾ ಕರ್ನಾಟಕ ತಾಲೂಕ ಘಟಕದ ಪರಶುರಾಮ ಜಂಬಗಿ, ಅರ್ಜುನ ಮಾನೆ, ವೆಂಕಪ್ಪ ಹುಜರತ್ತಿ, ಸುಬಾಷ್ ಗಿರಿಯಣ್ಣವರ, ಎಸ್.ಬಿ. ಕೊಣ್ಣೂರ, ಎ.ಪಿ. ಪಾಟೀಲ ಹಾಗೂ 40 ರೈತರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

loading...