ಮಹದಾಯಿ ವಿಷಯದಲ್ಲಿ ಸರ್ಕಾರಗಳು ರಾಜಕೀಯ ಮಾಡುತ್ತಿವೆ: ಚಂದ್ರಶೇಖರ

0
23
loading...

ಕನ್ನಡಮ್ಮ ಸುದ್ದಿ-ಹುನಗುಂದ: ರಾಜಕೀಯ ಲಾಭಕ್ಕಾಗಿ ರೈತರಿಗೆ ಮಹದಾಯಿ ನದಿ ನೀರಿನ ಮರಳು ಮಾಡುತ್ತಿರುವ ರಾಜಕೀಯ ಪಕ್ಷಗಳು. ರೈತರ ನಿರಂತರ ಹೋರಾಟಕ್ಕೆ ಕಿಂಚಿತ್ತು ಕಾಳಜಿ ಇಲ್ಲದಂತಾಗಿದೆ. ಸುಮಾರು 35 ರಿಂದ 40 ಟಿಎಂಸಿ ನೀರು ಮಹದಾಯಿ ನದಿಯಿಂದ ವ್ಯರ್ಥವಾಗುತ್ತಿದ್ದು ಅದನ್ನು ಮಲಪ್ರಭೆಗೆ ಜೋಡಿಸುವದರಿಂದ ಉತ್ತರ ಕರ್ನಾಟಕ ರೈತರ ಬದುಕು ಹಸನಾಗಲು ಸಾಧ್ಯವಿದೆ. ಈ ವಿಷಯದಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ರಾಜಕೀಯ ಮಾಡುತ್ತಿವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.
ಅವರು ತಾಲೂಕಿನ ಅಮರಾವತಿಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನೆಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತ ರೈತರ ಭವಣೆಯನ್ನು ಹೋಗಲಾಡಿಸಲು ಪ್ರತಿ ವರ್ಷ ಬಜೆಟ್‌ನಲ್ಲಿ 30 ರಿಂದ 50 ಸಾವಿರ ಕೋಟಿ ರೂ ನೀರಾವರಿಗಾಗಿ ಮೀಸಲಿಡಬೇಕು ಎಂದು ರೈತ ಸಂಘ ಮತ್ತು ರೈತರು ಒತ್ತಾಯಿಸಿದರು. ಯಾವ ಸರ್ಕಾರ ಕೂಡ ಅಷ್ಟು ದೊಡ್ಡ ಮೊತ್ತದ ಹಣವನ್ನು ಮೀಸಲಿರಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿ ಸಿ.ಎಂ ಕುಮಾರಸ್ವಾಮಿಯವರು 1.25 ಸಾವಿರ ಕೋಟಿ ಹಣವನ್ನು ರಾಜ್ಯ ನೀರಾವರಿಗಾಗಿ ಮೀಸಲಿರಿಸುತ್ತೆನೆಂದು ಹೇಳುತ್ತಿದ್ದು ಅವರ ಬಜೆಟ್‌ನವರಿಗೆ ಕಾಯ್ದು ನೋಡಬೇಕಾಗಿದೆ. ಇನ್ನು ಕೃಷ್ಣಾ ಕೊಳ್ಳದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ಅದರ ಬಗ್ಗೆ ಸರ್ಕಾರ ಗಮನ ಹರಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎನ್ನುವ ಸಿ.ಎಂ ಕುಮಾರಸ್ವಾಮಿಯವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಆದರೆ ಇಷ್ಟೊಂದು ರೈತರ ಬಗ್ಗೆ ಕಾಳಜಿ ಯಾಕೆ ಎನ್ನುವುದು ಮಾತ್ರ ಗೊತ್ತಾಗಬೇಕಾಗಿದೆ ಎಂದರು. ರೈತ ಸಂಘದಲ್ಲಿ ಯಾವುದೇ ಬಿನ್ನಮತವಿಲ್ಲ. ಸಮಸ್ಯೆಯನ್ನು ಆಧರಿಸಿ ಸಂಘಟನೆ ಹುಟ್ಟಿಕೊಳ್ಳುತ್ತಿದೆ. ಈಗಾಗಲೇ ದಕ್ಷಿಣ-ಕರ್ನಾಟಕದಲ್ಲಿ ಚುರುಕಿನ ಸಂಘಟನೆ ನಡೆಯುತ್ತಿದೆ. ಇಂದು ಜಾತಿಯಾಧಾರದ ಮೇಲೆ ರೈತ ಸಂಘ ಇಬ್ಭಾಗ ಮಾಡಲು ನೋಡುತ್ತಿದ್ದಾರೆ. ಆದರೆ ರೈತರೆಲ್ಲಾ ಅದಕ್ಕೆ ಕಿವಿಗೊಡಬಾರದು, ರೈತರಿಗೆ ಯಾವದೇ ಜಾತಿ, ಮತ, ಪಂಥ ಎನ್ನುವುದಿಲ್ಲ ರೈತರ ಕುಲ ಒಂದೇ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವರಾಜ ಕಾಂಬಳೆ, ಮಧುಸೂಧನ ತಿವಾರಿ, ತಾಲೂಕಾ ಅಧ್ಯಕ್ಷ ಮಲ್ಲನಗೌಡ ತುಂಬದ, ಕೃಷ್ಣಾ ಜಾಲಿಹಾಳ, ಜಡಿಯಪ್ಪ ದೇಸಾಯಿ, ಅಮರಾವತಿ ಘಟಕದ ಅಧ್ಯಕ್ಷ ಮಹಾಂತೇಶ ಐಹೊಳೆ, ಉಪಾಧ್ಯಕ್ಷರಾದ ಮಾಳಪ್ಪ ಕಂಬಳಿ, ಬಸಣ್ಣ ರಾಂಪೂರ, ಪ್ರಧಾನ ಕಾರ್ಯದರ್ಶಿ ಎಂ.ಎ.ಹಿರೇಮಠ, ಮಲ್ಲಯ್ಯ ಮುದುಟಗಿ, ಮಾಳಪ್ಪ ಗುಡಿಸಲಮನಿ, ಸಿದ್ದಪ್ಪ ಗೋನಾಳ, ಮಹಾಂತಪ್ಪ ಗೂಳಿ, ಯಲಗೂರದಪ್ಪ ಕೋಳೂರ, ಆರ್‌.ಜಿ.ರಡ್ಡೇರ, ನೂರಲಿ ನದಾಫ್‌ ಇತ್ತರರು ಉಪಸ್ಥಿತರಿದ್ದರು.

loading...