ಮಹಿಳೆ ಕೊಲೆ: ಶವ ಪತ್ತೆ

0
10
loading...

ಕನ್ನಡಮ್ಮ ಸುದ್ದಿ
ಚಿಕ್ಕೋಡಿ 24: ತಲೆಯ ಮೇಲೆ ಕಲ್ಲು ಹಾಕಿ ಮಹಿಳೆಯನ್ನು ಕೊಲೆ ಮಾಡಿ ಶವವನ್ನು ಕಬ್ಬಿನ ಗದ್ದೆಯಲ್ಲಿ ಎಸೆದಿರುವ ಘಟನೆ ತಾಲೂಕಿನ ಅಂಕಲಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಅನೈತಿಕ ಸಂಬಂಧ ಹೊಂದಿರುವ ಪ್ರೀಯಕರನಿಂದಲೇ ಪ್ರೇಯಸಿಯ ಕೊಲೆ ನಡೆದಿದೆ. ಮೃತಳನ್ನು ಅಂಕಲಿಯ ಲತಾ ಪರೀಟ್(35) ಎಂದು ಗುರುತಿಸಲಾಗಿದೆ. ಈ ಕುರಿತು ಅಂಕಲಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಲೆ ಆರೋಪಿಯ ಬಂಧನಕ್ಕಾಗಿ ಅಂಕಲಿ ಪೊಲೀಸ ಬಲೆ ಬೀಸಿದ್ದಾರೆ.
..

loading...