ಮಹೇಶಕುಮಾರ ಏಶಿಯನ್ ಚಾಂಪಿಯನ್‌ಶಿಪ್‌ಗೆ ಆಯ್ಕೆ

0
7
loading...

ಬೆಳಗಾವಿ: ಅಗಸ್ಟ ೨ ರಿಂದ ೩ ರವರೆಗೆ ಇರಾನ್ ದೇಶದ ತೆಹರಾನ್‌ನಲ್ಲಿ ನಡೆಯಲಿರುವ ಏಶಿಯನ್ ಚಾಂಪಿಯನ್‌ಶಿಪ್‌ನ ೫೭ ಕೆ.ಜಿ ತೂಕದ ಫ್ರಿÃಸ್ಟೆöÊಲ್ ವಿಭಾಗದಲ್ಲಿ ಕರ್ನಾಟಕ ರಾಜ್ಯದಿಂದ ಯುವ ಸಬಲೀಕರಣ ಮತ್ತು ಕ್ರಿÃಡಾ ಇಲಾಖೆಯ ಬೆಳಗಾವಿ ಕ್ರಿÃಡಾ ವಸತಿ ನಿಲಯದ ಕುಸ್ತಿ ಕ್ರಿÃಡಾಪಟುವಾದ ಕು. ಮಹೇಶಕುಮಾರ ಲಂಗೋಟಿ ಇವರು ಆಯ್ಕೆಯಾಗಿರುತ್ತಾರೆ.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್ ರವರು ಕು. ಮಹೇಶಕುಮಾರ ಲಂಗೋಟಿ, ಕುಸ್ತಿಪಟು ಇವರಿಗೆ ಬೆಳಗಾವಿ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಸನ್ಮಾನಿಸಿದರು ಮತ್ತು ಇರಾನ್ ದೇಶದಲ್ಲಿ ಜರುಗಲಿರುವ ಏಶಿಯನ್ ಚಾಂಪಿಯನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿಯನ್ನು ತರಲಿ ಎಂದು ಶುಭ ಹಾರೈಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ಎಸ್.ಬಿ.ಮುಳ್ಳಳ್ಳಿ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿಗಳಾದ ಶಂಕರಾನಂದ. ಬನಶಂಕರಿ, ಪ್ರೊÃಬೇಷನರಿ ಕೆ.ಎ.ಎಸ್ ಅಧಿಕಾರಿಗಳಾದ ಸಿದ್ರಾಮೇಶ್ವರ ಮತ್ತು ಶ್ರಿÃಮತಿ. ಅನ್ನಪೂರ್ಣಾ, ಯುವ ಸಬಲೀಕರಣ ಮತ್ತು ಕ್ರಿÃಡಾ ಇಲಾಖೆಯ ಉಪ ನಿರ್ದೇಶಕರಾದ ಸೀಬಿರಂಗಯ್ಯ, ಅರ್ಜುನ ಪ್ರಶಸ್ತಿ ವಿಜೇತ ಮುಕುಂದ ಕಿಲ್ಲೆÃಕರ, ಈಜು ತರಬೇತುದಾರರಾದ ಉಮೇಶ ಕಲಘಟಗಿ, ಕುಸ್ತಿ ತರಬೇತುದಾರರಾದ ಎ.ಆರ್.ಕೆ. ನಾಗರಾಜ ಹಾಗೂ ಕು. ಹಣಮಂತ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

loading...