ಮಾಜಿ ಸಂಸದೆ ರಮ್ಯಾ ವಿರುದ್ದ ಗಂಭೀರ ಆರೋಪ ಲೈಂಗಿಕ ಕಿರುಕುಳ ಆರೋಪ ಸುಳ್ಳು

0
43
loading...

ನವದೆಹಲಿ:ಕಾಂಗ್ರೆಸ್ ಸೋಶಿಯಲ್ ಮಿಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ತಾವು ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಲೈಂಗಿಕ ಕಿರುಕುಳವನ್ನು ಚಿರಾಗ್ ಪಟ್ನಾನಾಯಕ್ ಎನ್ನುವ ವ್ಯಕ್ತಿಯಿಂದ ಅನುಭವಿಸಿದ್ದೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸೋಶಿಯಲ್ ಟೀಂ ಮುಖ್ಯಸ್ಥೆ ರಮ್ಯಾ ವಿರುದ್ದ ಕೂಡ ಗಂಭೀರ ಆರೋಪ ಕೇಳಿ ಬಂದಿದ್ದು, ನಾನು ನನಗೆ ಆಗಿರುವ ದೌರ್ಜನ್ಯದ ಬಗ್ಗೆ ನಮ್ಮ ತಂಡದ ಮುಖ್ಯಸ್ಥೆಯಾಗಿದ್ದ ದಿವ್ಯ ಸ್ಪಂದನ (ರಮ್ಯಾ) ಅವರಿಗೆ ದೂರ ನೀಡಿದ್ದೆ, ಆದರೆ ಅವರು ಇವೆಲ್ಲವನ್ನು ನೋಡಿ,ನನಗೂ ಇದಕ್ಕೂ ಸಂಬಂಧವಿಲ್ಲದವರ ಹಾಗೇ ಇದ್ದರು ಎನ್ನುವ ಆರೋಪ ಮಾಡಿದ್ದಾರೆ.
ಲೈಂಗಿಕ ಕಿರುಕುಳ ಅನುಭವಿಸಿರುವ ಮಹಿಳೆ ಚಿರಾಗ್ ಪಟ್ನಾನಾಯಕ್ ವಿರುದ್ದ ನೀಡಿರುವ ದೂರಿನ ಅನ್ವಯ ದೆಹಲಿ ನಾರ್ತ್ ಅವಿನ್ಯೂ ಪೆÇÃಲಿಸರು ಸೆಕ್ಷನ್ ೩೫೪-ಂ ಹಾಗೂ ೫೦೯ ದೂರು ದಾಖಲಿಸಿಕೊಂಡು ಚಿರಾಗ್ ಪಟ್ನಾನಾಯಕ್ ವಿರುದ್ದ ಎಫ್ ಐ ಆರ್ ದಾಖಲು ಮಾಡಿದ್ದಾರೆ.
ಇನ್ನೂ ಮಹಿಳೆ ನೀಡಿರುವ ದೂರಿನಲ್ಲಿ ನೀಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಸೋಶಿಯಲ್ ಮಿಡಿಯಾದ ಮುಖ್ಯಸ್ಥೆ ರಮ್ಯಾ ಪ್ರತಿಕ್ರಿಯೆ ನೀಡಿದ್ದು, ದೂರಿನಲ್ಲಿ ಯಾವುದೇ ಹುರುಳಿಲ್ಲ, ಲೈಂಗಿಕ ಕಿರುಕುಳದ ಬಗ್ಗೆ ಆರೋಪ ಮಾಡಿರುವ ಮಹಿಳೆ ತಾನು ಕೆಲಸ ಬಿಟ್ಟು ಹೋಗುವ ವೇಳೆಯಲ್ಲಿ ತನಗೆ ಆರೋಗ್ಯದ ವಿಷಯಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಿ ಕೆಲಸದಿಂದ ಹೋಗಿದ್ದಾರೆ ಅಂತ ರಮ್ಯಾ ಹೇಳಿದ್ದಾರೆ.

loading...