ಮಾಜಿ ಸಚಿವ ರಮಾನಾಥ್ ರೈ ಸರ್ವಜ್ಞನಾ..?

0
30
loading...

ಮಾಜಿ ಸಚಿವ ರಮಾನಾಥ್ ರೈ ಸರ್ವಜ್ಞನಾ..?
ಬೆಂಗಳೂರು: ಸಂಸದ ಕಟೀಲ್ ಸೋಂಬೇರಿ ಎಂದು ರಮಾನಾಥ್ ರೈ ಹೇಳಿಕೆಗೆ ಸಂಸದ ನಳೀನ್ ಕುಮಾರ್ ಪಟೀಲ್ ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಳೀನ್ ಕುಮಾರ್, ಯಾರು ಸೋಂಬೇರಿ ಎಂಬುದನ್ನು ಕಳೆದ ಚುನಾವಣೆಯಲ್ಲಿ ಜನರು ತೋರಿಸಿದ್ದಾರೆ. ಜನರು ಅವರನ್ನು ಕಾಡಿಗೆ ಕಳುಹಿಸಿದ್ದಾರೆ.
ಕಳೆದ ೩೦ ವರ್ಷಗಳಲ್ಲಿ ತಾನು ಸಚಿವನಾಗಿದ್ದೆÃನೆ ಎನ್ನುವುದು ಅವರ ಸಾಧನೆ. ಎಲ್ಲಾ ವಿಷಯಗಳಲ್ಲಿ ರಮಾನಾಥ್ ರೈ ಸರ್ವಜ್ಞ ಎಂದು ತಿಳಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಂಸದ ನಳೀನ್ ಕುಮಾರ್ ಓರ್ವ ಸೋಮಾರಿ, ಇಂತಹ ಲೋಕಸಭಾ ಸದಸ್ಯರನ್ನು ನಾನು ನೋಡಿಲ್ಲ,ಯಾರೋ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ತಾವೇ ಮಾಡಿದ್ದಾಗಿ ನಳಿನ್ ಕುಮಾರ್ ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ್ ರೈ ವ್ಯಂಗ್ಯವಾಡಿದ್ದರು.

loading...