ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಿ: ಗುರುಮತ್ತೂರ

0
11
loading...

ಕನ್ನಡಮ್ಮ ಸುದ್ದಿ- ನರಗುಂದ: ಪ್ರಾಮಾಣಿಕತೆ ಎನ್ನುವುದನ್ನು ಕೆಲಸದಲ್ಲಿ ತೊಡಗಿದ ವ್ಯಕ್ತಿಗಳು ಮೈಗೂಡಿಸಿಕೊಳ್ಳುವುದು ಬಹು ಮಹತ್ವದ್ದು. ಅದರಲ್ಲಿಯೂ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ ವರ್ಗ ಮತ್ತು ಪೊಲೀಸ್ ಸಿಬ್ಬಂದಿ ಮೈಯೆಲ್ಲಾ ಕಣ್ಣಾಗಿ ಶ್ರಮವಹಿಸಿ ಕರ್ತವ್ಯ ನಿಷ್ಠತೆ ಹೊಂದುವುದು ಅಗತ್ಯವೆಂದು ಡಿವೈಎಸ್‍ಪಿ ಗುರುಮತ್ತೂರ ತಿಳಿಸಿದರು.

ನರಗುಂದ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಆಗಿ ಕಾರ್ಯನಿರ್ವಹಿಸಿದ್ದ ಎಚ್.ಬಿ. ತಳವಾರ ಅವರ ಸೇವಾ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಜೂ. 30 ರಂದು ಅವರನ್ನು ಪೊಲೀಸ್ ಠಾಣೆವತಿಯಿಂದ ಸತ್ಕರಿಸಿ ಬೀಳ್ಕೋಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಂತಿ,ಸುಭದ್ರತೆಗಾಗಿ ಕೆಲಸ ನಿರ್ವಹಿಸುವ ಪೊಲೀಸ್ ಸಿಬ್ಬಂಧಿಗಳು ಸದಾ ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು. ಸಮಾಜದ ಶಾಂತಿಗಾಗಿ ಅವರು ಹಗಲಿರುಳು ಶ್ರಮವಹಿಸಬೇಕು. ಪೊಲೀಸ್ ಇಲಾಖೆ ಬಹಳಷ್ಟು ಉತ್ತಮ ಕೆಲಸಗಳನ್ನು ಮಾಡುವತ್ತ ಕಾರ್ಯತತ್ಪರವಾಗಬೇಕಾಗುತ್ತದೆ. ನಿವೃತ್ತಿಗೊಂಡ ಪಿಎಸ್‍ಐ ಎಚ್.ಬಿ. ತಳವಾರ ತಮ್ಮ ಸೇವಾ ಅವಧಿಯಲ್ಲಿ ಕರ್ತವ್ಯನಿಷ್ಟೆಯಿಂದ ಅನೇಕ ಉತ್ತಮ ಸೇವೆ ಮಾಡಿದ್ದಾರೆ. ಅವರ ಮುಂದಿನ ವಿಶ್ರಾಂತಿ ಜೀವನ ಉತ್ತಮವಾಗಿ ಸಾಗಲಿ ಎಂದು ಅವರು ಶುಭಕೋರಿದರು.
ಸಿಪಿಐ ಎಸ್.ಸಿ. ಮೇಟಿ, ಗಿರೀಶ ರೋಡಕರ್, ನಿವೃತ್‍ಗೊಂಡ ಪಿಎಸ್‍ಐ ಎಚ್.ಬಿ. ತಳವಾರ ಹಾಗೂ ಸಾರ್ವಜನಿಕರಾದ ಬಸವರಾಜು ಸಾಬಳೆ, ರಾಘವೇಂದ್ರ ಗುಜಮಾಗಡಿ. ಚನ್ನು ನಂದಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಎಎಸ್‍ಐ ಎನ್.ಎಸ್. ಹೆಬಸೂರ, ಇನ್ನೋರ್ವ ಎಎಸ್‍ಐ ಆರ್.ಎಸ್. ಚೆನ್ನಶೆಟ್ಟಿ, ಎಚ್.ಎಸ್. ದಾಸರ, ಸಂತೋಷ ಡೋಣಿ, ನವೀನ ವಡ್ಡರ, ಮಹಂತೇಶ ಕೊಂಡಿಕೊಪ್ಪ, ಮಂಜು ಮಾದರ, ಎಫ್.ಎಸ್. ಸಂಗ್ರೇಶಿ, ಎಸ್.ಎನ್, ಚಿನ್ನಮಕಟ್ಟಿ, ಎಸ್.ಬಿ. ತಳವಾರ, ಎಸ್.ಪಿ. ಶಾಂತಪ್ಪನವರ, ಎನ್.ಕೆ. ಬಡ್ಡಿ, ವಾಸುರಡ್ಡಿ ಹೆಬ್ಬಾಳ ಉಪಸ್ಥಿತರಿದ್ದರು. ಎನ್.ವ್ಹಿ. ಕಿತ್ತಲಿ ನಿರ್ವಹಿಸಿದರು.

1

loading...