ಮಾದಕ ಪದಾರ್ಥಗಳ ಸೇವನೆಯಿಂದ ದೂರವಿರಿ

0
15
loading...

ಕಮತಗಿ : ಇಂದಿನ ಯುವಜನಾಂಗವು ಮಾದಕ ಪದಾರ್ಥಗಳ ದಾಸರಾಗಿ ಅವುಗಳನ್ನು ಅತಿಯಾಗಿ ಸೇವನೆಮಾಡುವುದರ ಮೂಲಕ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದು ಬಾಗಲಕೋಟ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿ.ವಾಯ್‌.ಪಾಟೀಲ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ಪದಾರ್ಥ ಸೇವನೆ ನಿಷೇಧ ದಿನದ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಮಾತನಾಡಿದರು. ಮದ್ಯಪಾನ,ತಂಬಾಕು,ಡ್ರಕ್ಸ,ದೂಮಪಾನ ಇವುಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದ ಮಾನಸಿಕ ಸೀಮಿತ ಕಳೆದುಕೊಳ್ಳುವುದರ ಜೊತೆಗೆ ದೈಹಿಕವಾಗಿ ಕೂಡಾ ಹೃದಯ ಕಾಯಿಲೆ,ಕಿಡ್ನಿ ವೈಫಲ್ಯತೆ,ಕ್ಯಾನ್ಸರದಂತಹ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಅಲ್ಲದೆ ಆರ್ಥಿಕ, ಸಾಮಾಜಿಕ, ಕೌಟಂಬಿಕ ಜೀವನವನ್ನು ಹಾಳು ಮಾಡುತ್ತವೆ.ಆದ್ದರಿಂದ ಯುವಜನಾಂಗವು ಇವುಗಳಿಂದ ದೂರವಿರುವುದರ ಮೂಲಕ ಉತ್ತಮ ಆರೋಗ್ಯಕ್ಕಾಗಿ ಹೆಚ್ಚು ಮಹತ್ವ ನೀಡಬೇಕು. ಮಾನಸಿಕ ಖಾಯಿಲೆಗಳು ಯಾರಿಗೆ ಬೇಕಾದರೂ ಬರಬಹುದು ಇವುಗಳಿಂದ ನರಳುತ್ತಿರುವರನ್ನು ಗುರುತಿಸಿ ಸೂಕ್ತ ಚಿಕತ್ಸೆ ನೀಡಿ ಅವರ ಕುಟುಂಬದವರು ಮತ್ತು ಸ್ನೇಹಿತರು ಪ್ರೀತಿ ಮತ್ತು ಪ್ರೋತ್ಸಹದಿಂದ ನೋಡಿಕೊಂಡಲ್ಲಿ ಅವರುಗಳು ಸುಖ ಶಾಂತಿ ನೆಮ್ಮದಿಯಿಂದ ಬಾಳಬಹುದಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಭಾಗ್ಯಶ್ರೀ ಕ್ಷತ್ರಿ ವಹಿಸಿದ್ದರು.
ಪಶುಪತಿ ಜಿಗಜಿನ್ನಿ, ಮಲ್ಲಪ್ಪ, ಕುಮಾರಗೌಡ ಪಾಟೀಲ, ಅರ್ಜುನ ದೊಡಮನಿ, ಎಚ್‌.ಬಿ.ಮೇಲಗಿರಿ, ಆರ್‌.ಎಸ್‌.ಭಾಪ್ರಿ, ಎಸ್‌.ಬಿ. ಗುಳೇದಗುಡ್ಡ, ಆರ್‌.ಎಮ್‌.ಜಮಖಂಡಿ, ಎಮ್‌.ಜಿ.ಬಡಗೇರ, ವಿ.ಎ.ದೇಶಪಾಂಡೆ, ಎಸ್‌.ಬಿ.ಬೊಮ್ಮನಹಳ್ಳಿ, ವಿಮಲಾ,ಎಸ್‌.ಡಿ.ಲಾಯದಗುಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

loading...