ಮಾರ್ಕ್ ಜುಕರ್‌ಬರ್ಗ್ ಈಗ ವಿಶ್ವದ ೩ನೇ ಶ್ರಿÃಮಂತ!

0
11
loading...

ನವದೆಹಲಿ: ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್‌ಬುಕ್ ಸಹ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜುಗರ್‌ಬರ್ಗ್ ವಿಶ್ವದ ೩ನೇ ಅತಿ ಶ್ರಿÃಮಂತ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಮೆರಿಕದ ಉದ್ಯಮ ಕ್ಷೆÃತ್ರದ ದಿಗ್ಗಜ ವಾರೆನ್ ಬಫೆಟ್ ಅವರನ್ನ ಹಿಂದಿಕ್ಕಿ ಜುಕರ್‌ಬರ್ಗ್ ಈ ಸ್ಥಾನ ಅಲಂಕರಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಬ್ಲೂಬರ್ಗ್ ಮಾಹಿತಿ ನೀಡಿದ್ದು, ಜುಕರ್‌ಬರ್ಗ್ ಒಟ್ಟು ೮೧.೬ ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ತಿಳಿಸಿದೆ. ಅಂದರೆ ಭಾರತೀಯ ಲೆಕ್ಕದಲ್ಲಿ ೫ ಲಕ್ಷದ ೬೧ ಸಾವಿರ ಕೋಟಿ ರೂ.
ಇನ್ನು ಅಮೆಜಾನ್ ಡಾಟ್ ಕಾಮ್ ಸಂಸ್ಥಾಪಕ ಜೆಫ್ ಬೆಜೋಸ್, ಮೈಕ್ರೊÃಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೆಟ್ಸ್ ನಂತರದ ಸ್ಥಾನದಲ್ಲಿ ಜೂಕರ್ ಬರ್ಗ್ ಇದ್ದಾರೆ. ಬ್ಲೂಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ, ಫೇಸ್‌ಬುಕ್ ಷೇರುಗಳ ಪ್ರಮಾಣ ೨.೬ರಷ್ಟು ಏರಿಕೆ ಕಂಡಿರುವುದು ಇದಕ್ಕೆ ಕಾರಣ. ಇದೇ ವರ್ಷದಲ್ಲಿ ಫೇಸ್‌ಬುಕ್ ಷೇರುಗಳ ಪ್ರಮಾಣ ಶೇ.೧೫ರಷ್ಟು ಏರಿಕೆ ಕಂಡಿದೆ.

loading...