ಮುಂಡರಗಿ ರೈಲು ಮಾರ್ಗಕ್ಕೆ ಆಗ್ರಹಿಸಿ ” ದೆಹಲಿ ಚಲೋ” ಕರಪತ್ರ ಬಿಡುಗಡೆ

0
8
loading...

ಕನ್ನಡಮ್ಮ ಸುದ್ದಿ- ಗದಗ: ಗದಗ ಮುಂಡರಗಿ, ಹಡಗಲಿ, ಹರಪನಹಳ್ಳಿ ರೈಲು ಮಾರ್ಗ ಕಾಮಗಾರಿಯನ್ನು ಕೇಂದ್ರ ಸರಕಾರ ಬೇಗ ಆರಂಭಿಸುವ ಮೂಲಕ ಉತ್ತರ ಕರ್ನಾಟಕದ ವ್ಯಾಪಾರಸ್ಥರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಒದಗಿಸಬೇಕೆಂದು ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯ ಕಲ್ಲಯ್ಯಜ್ಜನವರು ಆಗ್ರಹಿಸಿದರು.

ಅವರು ಶನಿವಾರ ಗದಗ ಜಿಲ್ಲಾ ಜನತಾ ದಳ (ಯು) ಮತ್ತು ಮುಂಡರಗಿ ತಾಲೂಕ ರೇಲ್ವೆÃ ಹೋರಾಟ ಸಮಿತಿ ಗದಗ, ಮುಂಡರಗಿ, ಹಡಗಲಿ, ಹರಪನಹಳ್ಳಿ ರೈಲು ಮಾರ್ಗ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಜುಲೈ ೧೬ ರಂದು ಹೊಸದೆಹಲಿಯ ಜಂತರ್‌ಮಂತರ್ ಎದುರಿಗೆ ಕೈಗೊಳ್ಳುವ ದೆಹಲಿ ಚಲೋ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಈ ಮಾರ್ಗದ ರೇಲ್ವೆÃ ಓಡಾಟ ಆರಂಭಕ್ಕೆ ಬಹು ವರ್ಷಗಳ ಬೇಡಿಕೆ ಇದ್ದು ಈ ಬಗ್ಗೆ ಕೇಂದ್ರ ಸರಕಾರ ಜನತೆಯ ಮತ್ತು ವ್ಯಾಪಾರಸ್ಥರ, ರೈತರ ಬೇಡಿಕೆಯನ್ನು ಮನ್ನಿಸಿ ಆದಷ್ಟು ಬೇಗನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಮಾತನಾಡಿದ ಗದಗ ಜಿಲ್ಲಾ ಜನತಾ ದಳ (ಯು) ಮತ್ತು ಮುಂಡರಗಿ ತಾಲೂಕ ರೇಲ್ವೆÃ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜ ದೇಸಾಯಿ ಗದಗ, ಮುಂಡರಗಿ, ಹಡಗಲಿ, ಹರಪನಹಳ್ಳಿ ರೈಲು ಮಾರ್ಗದ ಕುರಿತು ಹಲವು ವರ್ಷಗಳಿಂದ ಬೇಡಿಕೆಯ ಮನವಿ ಪತ್ರವನ್ನು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಸಲ್ಲಿಸುತ್ತ ಬಂದಿದ್ದು ಈ ಬಗ್ಗೆ ತೀವ್ರ ಹೋರಾಟ ನಡೆಸಿದ್ದಲ್ಲದೆ ಹಲವು ಬಾರಿಗೆ ದೆಹಲಿಯವರೆಗೂ ನಿಯೋಗದ ಮೂಲಕ ಹೋಗಿ ಮನವಿ ಸಲ್ಲಿಸಲಾಗಿದೆ ಎಂದರು. ಜುಲೈ ೧೬ ರಂದು ಹೊಸದೆಹಲಿಯ ಜಂತರ್‌ಮಂತರ್ ಎದುರಿಗೆ ಗದಗ, ಮುಂಡರಗಿ, ಹಡಗಲಿ, ಹರಪನಹಳ್ಳಿ ರೈಲು ಮಾರ್ಗ ಕಾಮಗಾರಿಯನ್ನು ಆರಂಭಿಸುವಂತೆ ಆಗ್ರಹಿಸಲು ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗದಗ ಜಿಲ್ಲಾ ಜನತಾ ದಳ (ಯು) ಮತ್ತು ಮುಂಡರಗಿ ತಾಲೂಕ ರೇಲ್ವೆÃ ಹೋರಾಟ ಸಮಿತಿಯ ಪದಾಧಿಕಾರಿಗಳು, ಹೋರಾಟಗಾರರು ಗಣ್ಯರು ದೆಹಲಿ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊÃಳ್ಳಲಿದ್ದಾರೆ ಎಂದರು. ಗದಗ ಜಿಲ್ಲಾ ಜೆಡಿಯು ಮಹಿಳಾ ಘಟಕದ ಅಧ್ಯಕ್ಷೆ ಶ್ರಿÃಮತಿ ಪುಷ್ಪಲತಾ ಮಾಡಲಗೇರಿ, ಮುಂಡರಗಿ ತಾಲೂಕ ರೇಲ್ವೆÃ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಚಂದ್ರು ಪೂಜಾರ, ಮುತ್ತಣ್ಣ ಪವಾಡಶೆಟ್ಟರ, ಗಣೇಶ ಚನ್ನಳ್ಳಿ, ಲಕ್ಷö್ಮಣ ಬೆಟಗೇರಿ ಸೇರಿದಂತೆ ಇತರರು ಈ ಸಂದರ್ಭದಲ್ಲಿದ್ದರು.

loading...