ಮುಂಬೈಯಲ್ಲಿ ವರುಣನ ಅಬ್ಬರ: ಜನಜೀವನ ಅಸ್ತವ್ಯಸ್ತ

0
18
loading...

ಮುಂಬೈ: ನಗರದಲ್ಲಿ ವರುಣ ಅಬ್ಬರ ಮುಂದುವರೆದಿದೆ. ನಿರಂತರ ಸುರಿಯಯುತ್ತಿರುವ ಮಳೆಯಿಂದ ಮುಂಬೈ ಜನತೆಗೆ ಸಂಕಷ್ಟ ಎದುರಾಗಿದೆ. ಅಂದೇರಿಯಲ್ಲಿದ್ದ ಸಂಪರ್ಕ ಸೇತುವೆ ಮಳೆಯಿಂದ ಕುಸಿದು ಬಿದ್ದಿದೆ. ಸೇತುವೆ ಕುಸಿದಿದ್ದರಿಂದ ಇಬ್ಬರಿಗೆ ಗಾಯಗೊಂಡಿದ್ದು, ನಾಲ್ಕು ವಾಹನಗಳಿಗೆ ಹಾನಿಯಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದು, ವಾಹನ ದಟ್ಟಣೆ ಹೆಚ್ಚಾಗಿದೆ. ಬೆಳ್ಳಂಬೆಳಗ್ಗೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರೈಲುಗಳು ತಡವಾಗಿ ಸಂಚರಿಸುತ್ತಿವೆ.
ತಾನೆ, ಗೋಟ್ಕೊಪುರ್, ಕುರ್ಲಾ, ದಾದರ್ ಸ್ಟೆÃಷನ್‌ಗಳಲ್ಲಿ ರೈಲಿಗಾಗಿ ಜನ ಗಂಟೆಗಟ್ಟಲೇ ಕಾಯುವಂತಾಗಿದೆ. ಮುಂಬೈ ನಗರದಲ್ಲಿ ೯೭ ಮಿ.ಮಿ ಮೆಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

loading...