ಮುಗಿಯದ ರಸ್ತೆ ಡಾಂಬರೀಕರಣ ಕಾಮಗಾರಿ: ಸಾರ್ವಜನಿಕರ ಆಕ್ರೋಶ

0
3
loading...

ಇಳಕಲ್ಲ : ನಗರದ ಪಂಪಣ್ಣಭಾವಿ ಹತ್ತಿರ ಕೈಗೊಂಡ ರಸ್ತೆ ಡಾಂಬರೀಕರಣ ಕಾಮಗಾರಿಯು ಸುಮಾರು ಒಂದು ತಿಂಗಳೇ ಕಳೇದರೂ ಇನ್ನೂ ಕಾಮಗಾರಿ ಮಾತ್ರ ಪೂರ್ಣಗೊಳ್ಳದ ಕಾರಣ ಇಲ್ಲಿನ ನಾಗರೀಕ ಆಕ್ರೋಶಕ್ಕೆ ಕಾರಣವಾಗಿದೆ.
ನಗರದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿರುವ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡುವಂತೆ ಇಲ್ಲಿನ ಜನರು ಗ್ರಾಮಸ್ಥರು ಬೇಡಿಕೆಯನ್ನು ಇಟ್ಟಿದ್ದರು. ಅವೈಜ್ಞಾನಿಕವಾಗಿ ನಿರ್ಮಾಣ ಮಾಡುವ ಸಲುವಾಗಿ ಕೇಲವು ಮನೆಗಳು ರಸ್ಥೆಯಿಂದ ಕೆಳಗೆ ಮುಚ್ಚಿಕೊಂಡು ಹೋಗುತ್ತಿದ್ದವು. ಈ ವಿಷಯವಾಗಿ ಗುತ್ತಿಗೆದಾರರಿಗೆ ಮಾತನಾಡಿದರೇ ನಮಗೆ ಇದೇ ರೀತಿ ಕೆಲಸ ಮಾಡಬೇಕೆಂದು ಹೇಳಿದ್ದಾರೆ. ಅದಕ್ಕೆ ನಾವೇನು ಮಾಡೋಕೆ ಆಗಲ್ಲ ಎಂದು ಹೇಳುತ್ತಿದ್ದಾರೆ. ಎಂದು ಹೇಳಿದರು.
ಈ ಕಾಮಗಾರಿಯನ್ನು ನಾಗರಾಜ ನಗರಿ ಪ್ರಶ್ನೆ ಮಾಡಿ ಈ ಕಾಮಗಾರಿಯನ್ನು ವೈಜ್ಞಾನಿಕವಾಗಿ ಕಾಮಗಾರಿ ಮಾಡುವುದಾದರೇ ಮಾಡಿ ಇಲ್ಲವೆಂದರೇ ಈ ಕಾಮಗಾರಿಯನ್ನು ಇಷ್ಟಕ್ಕೆ ನಿಲ್ಲಿಸಿ ಎಂದು ಹೇಳಿದ್ದರು ಇದಕ್ಕೇ ನಗರಸಭೆ ಸದಸ್ಯ ಪ್ರಶಾಂತ ಗೋಟುರ ಸಹ ಅವರು ಹೇಳುವುದು ಸರಿಯಾಗಿ ಇದೇ ಅವರು ಹೇಳಿದ ಹಾಗೆ ವೈಜ್ಞಾನಿಕವಾಗಿ ಕಾಮಗಾರಿ ಮಾಡಿ ಎಂದು ಸೂಚಿಸಿದರು.
ಸುಮಾರು ಒಂದು ತಿಂಗಳೇ ಕಳೆದರೂ ಈ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಇಲ್ಲಿಯ ವರೆಗೆ ಯಾವ ಅಧಿಕಾರಿಯೂ ಬರದ ಕಾರಣ ಇಲ್ಲಿನ ಜನರು ದಿನಾಲು ಕಾಲಿಗೆ ಕಲ್ಲುಗಳನ್ನೂ ನೆಡೆಸಿಕೊಂಡು ಕಷ್ಟವನ್ನು ಅನುಭವಿಸ ಬೇಕಾಗಿದೆ. ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಈ ಕಾಮಗಾರಿಯನ್ನು ಪೂರ್ಣಗೋಳಿಸಿ ಬೇಕೆಂದು ಇಲ್ಲಿನ ಜನರು ಮನವಿ ಮಾಡಿಕೊಂಡಿದ್ದಾರೆ.

loading...