ಮುಳಗಡೆಯ ಕೋಟೆ ಗೆ ಬಜೆಟ್‌ ಕೃಷ್ಣಾರ್ಪಣೆ..

0
13
loading...

.
ಡಿ.ಆನಂದ.
ಬಾಗಲಕೋಟೆ: ಸಮಿಶ್ರ ಸರ್ಕಾರದ ಮೊದಲು ಬಜೆಟ್‌ ಮಂಡನೆ ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಬಾಗಲಕೋಟೆ ಜಿಲ್ಲೆ ಜನತೆ ತೀವ್ರ ನಿರಾಶೆ ಮೂಡಿಸಿದ್ದಾರೆ. ಬಜೆಟ್‌ನಲ್ಲಿ ಬಾಗಲಕೋಟೆ ಜಿಲ್ಲೆಯ ಬಗ್ಗೆ ಯಾವುದೇ ಯೋಜನೆಗಳ ಬಗ್ಗೆ ಪ್ರಸ್ತಾವನೆ ಇಲ್ಲದ ಹಿನ್ನಲೆ ಆಶಾಭಾವನೆ ಇಟ್ಟುಕೊಂಡಿರುವ ಜನತೆಗೆ ನಿರಾಶೆ ಮೂಡಿಸಿದೆ.
ಮಂಡ್ಯ, ಹಾಸನ ಹಾಗೂ ರಾಮನಗರಕ್ಕೆ ಮಾತ್ರ ಬಜೆಟ್‌ನಲ್ಲಿ ಬಂಪರ್‌ ನೀಡಲಾಗಿದೆ. ಆದರೆ ಬಾಗಲಕೋಟೆ-ವಿಜಯಪುರ ಜಿಲ್ಲೆಗೆ ಮಾತ್ರ ಹೆಚ್ಚು ಪ್ರೋತ್ಸಾಹ ನೀಡದೆ ತಾರತಮ್ಯ ಎಸಗಲಾಗಿದೆ. ಕೃಷ್ಣೆ ಮೇಲ್ದಂಡೆ ಯೋಜನೆಯ ನೀರಾವರಿ ಹಾಗೂ ಪುನರ ವಸತಿ ಕಲ್ಪಿಸುವ ಬಗ್ಗೆ ಅವಳಿ ಜಿಲ್ಲೆಗಳಿಗೆ ಸಂಬಂಧ ಪಟ್ಟಿದೆ. ಆದರೆ ಈ ಯೋಜನೆ ಬಗ್ಗೆ ಬಜೆಟ್‌ನಲ್ಲಿ ಒಂದೇ ಒಂದು ಮಾಹಿತಿ ನೀಡಿಲ್ಲ. ಆಲಮಟ್ಟಿ ಜಲಾಶಯವು ಉತ್ತರ ಕರ್ನಾಟಕ ಜೀವನದಿ ಆಗಿದೆ. ಇಲ್ಲಿನ ನೀರಾವರಿ ಯೋಜನೆಗಳು ಐದು ಜಿಲ್ಲೆಗೆ ಅನುಕೂಲವಾಗಲಿದೆ. ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವನೆ ಮಾಡಿಲ್ಲ ಎಂಬುದು ಈ ಭಾಗದ ಜನತೆಗೆ ನಿರಾಶೆ.
ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ಅಭಿವೃದ್ದಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಪ್ರವಾಸಿ ತಾಣಗಳ ಅಭಿವೃದ್ದಿ, ಚಾಲುಕ್ಯ ಪ್ರಾಧಿಕಾರಿ, ಐಟಿ ತಂತ್ರಜ್ಞಾನ ಬೆಳವಣಿಗೆ, ಸಂತ್ರಸ್ಥರಿಗೆ ಉದ್ಯೋಗವಕಾಶಗಳನ್ನು ಹೆಚ್ಚಿಸಲು ಕೈಗಾರಿಕೆ ಬೆಳೆಸುವುದಕ್ಕೆ ಬಜೆಟ್‌ನಲ್ಲಿ ಒಂದೇ ಒಂದು ಪ್ರಸ್ತಾವನೆ ಇಲ್ಲಾ, ಜಿಲ್ಲೆಯಲ್ಲಿ ರೈತರು ನಂತರ ನೇಕಾರಿಕೆ ಉದ್ಯೋಗವನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ನೇಕಾರರ ಪರಿಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ನೇಕಾರಿಕೆ ಉದ್ಯೋಗ ಹೊಂದಿದವರು ಈಗಾಗಲೇ ವಿವಿಧ ಪ್ರದೇಶಗಳಿಗೆ ಉದ್ಯೋಗ ಅರಸಿಕೊಂಡು ಗುಳೆ ಹೋಗಿದ್ದಾರೆ. ಇಂತಹ ನೇಕಾರರ ಜೀವನವನ್ನು ಉತ್ತೇಜನ ಮಾಡುವಂತಹ ಯೋಜನೆಗಳು ಈ ಬಜೆಟ್‌ ಯಾವುದೇ ಇಲ್ಲಾ. ಹೀಗಾಗಿ ಇದೊಂದು ಅತಿ ನಿರಾಶಾದಾಯಕವಾಗಿದೆ ಎಂದು ನೇಕಾರರ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೃಷ್ಣ ಮೇಲ್ದಂಡೆ ಯೋಜನೆಯಿಂದಾಗಿ ಆಲಮಟ್ಟಿ ಆಣೆಕಟ್ಟಿನಲ್ಲಿ 525.256 ಮೀಟರು ನೀರು ಸಂಗ್ರಹವಾದ ಬಳಿಕ ಜಲಾಶಯದ ಹಿನ್ನೀರಿನಲ್ಲಿ ಮುಳಗಡೆ ಆಗಲಿರುವ ಬಾಗಲಕೋಟೆ ನಗರ ಸೇರಿದಂತೆ ಅವಳಿ ಜಿಲ್ಲೆಯ 22 ಗ್ರಾಮಗಳ ಮುಳಗಡೆ ಆಗಲಿದ್ದು, ಅವುಗಳ ಪುನರ ವಸತಿ ಕೇಂದ್ರಗಳು. ಪರಿಹಾರ ಧನ ಮತ್ತು ನೀರಾವರಿ ಯೋಜನೆಯನ್ನು ಅಭಿವೃದ್ದಿ ಪಡಿಸುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಕೊಪ್ಪಳ ಏತ ನೀರಾವರಿ ಯೋಜನೆ, ಹನಿ ನೀರಾವರಿ ಯೋಜನೆಗಳ ಬಗ್ಗೆ ಈ ಬಜೆಟ್‌ನಲ್ಲಿ ಮಾಹಿತಿ ನೀಡಿಲ್ಲ. ಒಟ್ಟಾರೆ ಬಾಗಲಕೋಟೆ ಜಿಲ್ಲೆಯು ರಾಜ್ಯದಲ್ಲಿ ಇದೆಯೋ ಇಲ್ಲವೋ ಎಂಬಂತೆ ಆಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಯಾವುದೇ ಹೊಸ ಯೋಜನೆ ಮತ್ತು ಮೊದಲು ಇದ್ದ ಯೋಜನೆ ಬಗ್ಗೆಯಾದರೂ ಬಜೆಟ್‌ ನಲ್ಲಿ ಮಂಡಣೆ ಆಗದೆ ಇರುವುದಕ್ಕೆ ಸಂತ್ರಸ್ಥರ ಆಶೆಗಳನ್ನು ಕೃಷ್ಣಾರ್ಪಣೆ ಮಾಡಿದ್ದಾರೆ ಎಂದು ಜನತೆಗೆ ನಿರಾಶೆಯಾಗಿದೆ.

loading...