ಮೂಲಭೂತ ಸೌಲಭ್ಯ ಒದಗಿಸುವಂತೆ ಮಹಿಳೆಯರಿಂದ ಪ್ರತಿಭಟನೆ

0
7
loading...

ಕನ್ನಡಮ್ಮ ಸುದ್ಧಿ- ರೋಣ: ಮೂಲಭೂತ ಸೌಲಭ್ಯವನ್ನು ಒದಗಿಸುವಂತೆ ಆಗ್ರಹಿಸಿ ಪಟ್ಟಣದ ೨೧ನೇ ವಾರ್ಡನ ಮಹಿಳೆಯರು ಪುರಸಭೆ ಕಾರ್ಯಾಲಯದ ಎದುರು ಪ್ರತಿಭಟನೆ ಏರ್ಪಡಿಸಲಾಯಿತು.

ಪಟ್ಟಣದಲ್ಲಿ ೬,೭,೮,೯ಹಾಗೂ ೨೧ನೇ ವಾರ್ಡಗಳಿಗೆ ಸಂಬಂಧಿಸಿದಂತೆ ನಿರ್ಮಿಸಲಾಗಿರುವ ಶೌಚಾಲಯದ ಅವ್ಯವಸ್ಥೆಯ ಕುರಿತು ತಿಳಿಸಿ ಕೂಡಲೇ ಸ್ವಚ್ಛತೆಯ ಕಾರ್ಯವು ನಡೆಯಬೇಕು ಎಂದು ಸಂಬಂಧಿಸಿದ ವಾರ್ಡ್ ಮಹಿಳೆಯರು ತಮ್ಮ ಆಕ್ರೊÃಶವನ್ನು ಪುರಸಭೆಯ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿದರು.
ನಂತರ ಶೌಚಾಲಯದ ಹತ್ತಿರ ತೆರಳಿ ಅಲ್ಲಿನ ವ್ಯವಸ್ಥೆಯನ್ನು ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳಿಗೆ,ಸದಸ್ಯರುಗಳಿಗೆ ತಿಳಿಸಿ ಅಲ್ಲಿನ ಸ್ವಚ್ಛತೆಯ ಪೌರ ಕಾರ್ಮಿಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸೌಮ್ಯಾ ಚಿತ್ರಗಾರ ಎಲ್ಲಡೆ ಸ್ವಚ್ಛಬಾರತದ ಅಭಿಯಾನವನ್ನು ನಡೆಸುತ್ತಲಿದ್ದು,ಶೌಚಾಲಯದ ಸ್ವಚ್ಛತೆಯು ಮರೀಚಿಕೆಯಾಗಿದೆ.ನಿತ್ಯ ಮಹಿಳೆಯರು ಹರಸಾಹಸವನ್ನೆÃ ಪಡುವಂತಾಗಿದೆ.ಸಮೃದ್ಧ ವಾತಾವರಣವನ್ನು ಹರಡಿಒಸುವ ನಿಟ್ಟಿನಲ್ಲಿ ಪುರಸಭೆಯು ಹಿಂದೆ ಉಳಿದಿದೆ ಎಂದು ಪುರಸಭೆಯ ಆಡಳಿತದ ವೈಖರಿಯನ್ನು ತಿಳಿಸಿದರು.
ಕಾಳವ್ವ ಜಡಿಮಠ ಮಾತನಾಡಿ ಪ್ರಮುಖವಾಗಿ ಶೌಚಾಲಯದಲ್ಲಿ ನೀರಿನ ಕೊರತೆಯು ಕಾಣುತ್ತಲಿದ್ದು,ಇದರಿಂದ ಸ್ವಚ್ಛತೆಯು ದೂರುಳಿದಿದೆ.ಅಲ್ಲಿ ಶೌಚಾಲಯದಲ್ಲಿ ಹುಳಗಳದೇ ಕಾಟವಾಗಿದೆ.ನೀರಿನಿಂದ ಸಮಗ್ರವಾಗಿ ತೊಳೆದಾಗ ಯಾವದೇ ತೊಂದರೆಯಿಲ್ಲದಂತಾಗುತ್ತದೆ.ಈ ವಾರ್ಡನ ಸಮಸ್ಯೆಯನ್ನು ಎಂದು ಬಗೆಹರಿಸುತ್ತಾರೋ ನೋಡಬೇಕಾಗಿದೆ.

ಪ್ರತಿಭಟಣೆ ನಿರತ ವಾರ್ಡನ ಮಹಿಳೆಯರಿಗೆ ಕೂಡಲೇ ಶೌಚಾಲಯದ ದುರವಸ್ಥೆಯನ್ನು ಸ್ವಚ್ಛಗೊಳಿಸಿ ನೆಮ್ಮದಿಯ ವಾತಾವರಣವನ್ನು ನೀಡುವ ನಿಟ್ಟಿನಲ್ಲಿ ಕ್ರಮವನ್ನು ಜರುಗಿಸುವೆ ಎಂದು ಪುರಸಭೆ ಮುಖ್ಯಾಧಿಕಾರಿ ಲಕ್ಷö್ಮಣ ಕಟ್ಟಿಮನಿ ಹೇಳಿದ ನಂತರ ಮಹಿಳೆಯರು ಪ್ರತಿಭಟಣೆಯನ್ನು ಹಿಂದಕ್ಕೆ ಪಡೆದರು.
ಪ್ರತಿಭಟಣೆಯಲ್ಲಿ ಮಹಿಳೆಯರಾದ ನೀಲಮ್ಮ ಬಸಗೌಡ್ರ,ರೇಣುಕಾ ಸೊಬರದ,ಸುಶೀಲಾ ಸೊಬರದ,ಅಡಿಯಮ್ಮ ಜಡಿಮಠ,ಕಾಳವ್ವ ಜಡಿಮಠ,ಶಾಯಿನಾ ಮುಲ್ಲಾ,ಲಲಿತಾ ಶಾಂತಗೇರಿಮಠ ಸೇರಿದಂತೆ ಇತರರು ಭಾಗವಹಿಸಿದ್ದರು.

—-
ಅಲ್ಲಿರುವ ಅವ್ಯವಸ್ಥೆಯನ್ನು ಹೇಳತೀರದು.ನಿತ್ಯವು ಹರಡುವ ಹುಳಗಳಿಂದ ಜೀವ ಜಿಮ್ಮೆನ್ನುತ್ತದೆ.ಸ್ವಚ್ಚತೆಯು ದೂರವೇ ಉಳಿದಿದೆ.ಇಂತಹ ಸಂಧಿಘ್ಧ ಪರಸ್ಥಿತಿಯಲ್ಲಿ ವಾಡ್ನ ಮಹಿಳೆಯರು ಯಾತನೆಯನ್ನು ಅನುಭವಿಸುತ್ತಲಿದ್ದೆÃವೆ.ಈ ಪರಸ್ಥಿತಿಯನ್ನು ಸರಿ ಪಡಿಸಿ ನೆಮ್ಮದಿಯ ವಾತಾವರಣವನ್ನು ನಿರ್ಮಿಸಬೇಕು ಎಂಬುದು ನಮ್ಮ ಆಶಯವಾಗಿದೆ.

ದ್ರಾಕ್ಷಾಯಿಣಿ ಪೋಲಿಸಪಾಟೀಲ(ವಾರ್ಡನ ಮಹಿಳೆ)

loading...