ಮೂವರು ಸಹೋದರಿಯರ ಮೇಲೆ ಐವರು ಕಾಮುಕರು ಅತ್ಯಾಚಾರ

0
16
loading...

ಬೆಂಗಳೂರು: ತಮಿಳುನಾಡಿನಲ್ಲಿ 11ರ ಬಾಲೆಯ ಮೇಲೆ 22 ಜನರಿಂದ ನಡೆದ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೀನ ಕೃತ್ಯ ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ಬಡ ಕುಟುಂಬದ ಮೂವರು ಸಹೋದರಿಯರ ಮೇಲೆ ಐವರು ಕಾಮುಕರು ಅನೇಕ ತಿಂಗಳುಗಳವರೆಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಬಯಲಾಗಿದೆ.
ಮೈಸೂರಿನ ಉದಯಗಿರಿ ಪೆÇಲೀಸ್ ಠಾಣೆ ವ್ಯಾಪ್ತಿಯ 16, 17 ಹಾಗೂ 18 ವರ್ಷ ವಯಸ್ಸಿನ ಮೂವರು ಸಹೋದರಿಯರ ಮೇಲೆ ಹಲವು ತಿಂಗಳುಗಳಿಂದ ಐವರಿಂದ ಲೈಂಗಿಕ ದೌರ್ಜನ್ಯ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂಲದ ಆರೋಪಿ ಅಬಾನ್(30)ಎಂಬಾತನನ್ನು ಬಂಧಿಸಲಾಗಿದೆ. ಈತನ ಸಹಚರರಾದ ಭಟ್ಕಳ, ಮಂಗಳೂರು ಹಾಗೂ ಬೆಂಗಳೂರು ಮೂಲದ ಐವರಿಂದ ದುಷ್ಕೃತ್ಯ ನಡೆದಿದೆ.
ಘಟನೆ ಹಿನ್ನೆಲೆ:ಈ ಮೂವರು ಸಂತ್ರಸ್ತ ಸಹೋದರಿಯರಿಗೆ ಪಕ್ಕದ ಮನೆಯ ವ್ಯಕ್ತಿಯೋರ್ವ ಪರಿಚಯ ಮಾಡಿಕೊಂಡು ಪುಸಲಾಯಿಸಿ ಮನೆಯಿಂದ ಕರೆದುಕೊಂಡು ಹೋಗಿದ್ದಾನೆ.
ಬಳಿಕ ಈತ ತನ್ನ ಸ್ನೇಹಿತರ ಸಹಾಯದೊಂದಿಗೆ ಬಾಲಕಿಯರನ್ನು ಬೆಂಗಳೂರು, ಮಂಗಳೂರು ಹಾಗೂ ಮಂಡ್ಯದಲ್ಲಿ ಅವರನ್ನು ಸುತ್ತಾಡಿಸಿದ್ದಾನೆ. ಆದರೆ ಹೆಣ್ಣುಮಕ್ಕಳು ಒಂದು ತಿಂಗಳಾದರೂ ಮರಳಿ ಬಾರದ ಕಾರಣ ಅವರ ತಾಯಿ ಎನ್‍ಜಿಒ (ಒಡನಾಡಿ ಸೇವಾ ಸಂಸ್ಥೆ)ಗೆ ದೂರು ನೀಡಿದ್ದರು. ಬಳಿಕ ಉದಯಗಿರಿ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಬಗ್ಗೆ ತನಿಖೆ ಕೈಗೊಂಡ ಪೆÇಲೀಸರು ಸಂತ್ರಸ್ತ ಸಹೋದರಿಯರನ್ನು ಪತ್ತೆಹಚ್ಚಿ ರಕ್ಷಿಸಿದ್ದಾರೆ. ಬಳಿಕ ಅವರನ್ನು ಸಮಾಲೋಚನೆ ಮತ್ತು ಪುನರ್ವಸತಿಗಾಗಿ ಎನ್‍ಜಿಒಗೆ ಕಳುಹಿಸಲಾಗಿತ್ತು. ನಂತರ ಮೂವರಿಂದಲೂ ತಮಗಾದ ದೌರ್ಜನ್ಯದ ಬಗ್ಗೆ ಪೆÇಲೀಸರು ಮಾಹಿತಿ ಕಲೆಹಾಕಿದ್ದರು.
ನಂತರ ಆರೋಪಿ ಅಬಾನ್‍ಗೆ ಸಂತ್ರಸ್ತ ಬಾಲಕಿಯೋರ್ವಳಿಂದ ಪೆÇಲೀಸರು ಫೆÇೀನ್ ಕರೆ ಮಾಡಿಸಿದ್ದಾರೆ. ತಕ್ಷಣ ಆರೋಪಿ ಇರುವ ಸ್ಥಳವನ್ನು ಪತ್ತೆ ಹಚ್ಚಿ ಬಲೆಗೆ ಬೀಳಿಸಲಾಗಿದೆ. ಬಂಧಿತ ಆರೋಪಿಯನ್ನು ಹೆಚ್ಚಿನ ತನಿಖೆಗೆ ಮೈಸೂರಿಗೆ ಕರೆತರಲಾಗಿದೆ.
ಇನ್ನು ತಮಗೆ ವೇಶ್ಯಾವಾಟಿಕೆಗೂ ಕೂಡ ಒತ್ತಾಯಿಸಲಾಗಿತ್ತು ಎಂದು ಎನ್‍ಜಿಒ ಸಮಾಲೋಚನೆ ವೇಳೆ ಬಾಲಕಿಯರು ಹೇಳಿದ್ದಾರೆ.ಈ ಬಗ್ಗೆ ಉದಯಗಿರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

loading...