ಮೆಟ್ರೊಗೆ ೨೦೦ಕೋಟಿ ಕೊಟ್ಟ ಇನ್ಫೊಸಿಸ್

0
9
loading...

ಬೆಂಗಳೂರು:ಇನ್ಫೊÃಸಿಸ್ ಫೌಂಡಷನ್ ಮೆಟ್ರೊÃ ಕಾಮಗಾರಿಗೆ ಸಹಾಯ ಮಾಡಲು ಮುಂದಾಗಿದ್ದು,ಕೋನಪ್ಪನ ಅಗ್ರಹಾರ ಮೆಟ್ರೊÃ ಹಳಿ ನಿರ್ಮಾಣಕ್ಕೆ ೧೦೦ ಕೋಟಿ ರೂ. ಹಾಗೂ ನಿಲ್ದಾಣಕ್ಕೆ ೧೦೦ ಕೋಟಿ ರೂ.ಸಹಾಯ ನೀಡುವುದಾಗಿ ಇನ್ಪೊÃಸಿಸ್ ಸ್ಥಾಪಕ ನಾರಾಯಣ ಮೂರ್ತಿ ಪತ್ನಿ ಸುಧಾಮೂರ್ತಿ ಅವರು ತಿಳಿಸಿದ್ದಾರೆ.
ಇಂದು ಮುಖ್ಯಮಂತ್ರಿಗಳ ಕೃಷ್ಣಾ ನಿವಾಸಕ್ಕೆ ಭೇಟಿ ನೀಡಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಕೋನಪ್ಪನ ಅಗ್ರಹಾರ ಮೆಟ್ರೊÃ ಕಾಮಕಾರಿಗೆ ಸಹಾಯ ಮಾಡುವ ಕುರಿತು ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಸಿಎಂ ಹೆಚ್.ಡಿ. ಕುಮಾರಸ್ವಾಮಿ, ಇದೇ ತಿಂಗಳ ೧೯ ರಂದು ವಿಧಾನಸೌಧದಲ್ಲಿ ಸರ್ಕಾರ ಮತ್ತು ಇನ್ಫೊÃಸಿಸ್ ನಡುವೆ ತಿಳವಳಿಕೆಯ ಸ್ಮರಣಿಕೆ ಒಪ್ಪಂದ ನಡೆಯಲಿದೆ.ಇನ್ಪೊÃಸಿಸ್ ಸಂಸ್ಥೆ ಅನೇಕ ಒಳ್ಳೆ ಕೆಲಸ ಮಾಡುತ್ತಿದೆ. ಈ ಮೂಲಕ ಇನ್ಪೊÃಸಿಸ್ ಫೌಂಡೇಶನ್ ಇತರ ಕಂಪನಿಗಳಿಗೆ ಮಾದರಿ ಆಗಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಸುಧಾಮೂರ್ತಿ, ಗಳಿಸಿರುವ ಹಣ ಸಾರ್ವಜನಿಕರ ಸದುಪಯೋಗವಾಗಬೇಕು. ಜನಸಾಮಾನ್ಯರಿಗೆ ಅನುಕೂಲ ಆಗಲಿ ಎಂಬುದು ನಮ್ಮ ಉದ್ದೆÃಶ. ಇದರಲ್ಲಿ ಬೇರೆ ಯಾವುದೇ ಉದ್ದೆÃಶ ಇಲ್ಲ. ಆಡದೇ ಮಾಡುವವನು ರೂಢಿಯೊಳಗೆ ಉತ್ತಮನು ಎಂದು ವಿವರಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ನಮ್ಮ ಕಡೆಯಿಂದ ಎಷ್ಟು ಆಗುತ್ತೊÃ ಅಷ್ಟು ಸಹಕಾರ ಕೊಡುತ್ತೆÃವೆ ಎಂದು ತಿಳಿಸಿದರು.

loading...