ಮೇಸ್ತ ಸಾವಿನ ತನಿಖೆ ಒತ್ತಾಯಿಸಿ ಕೈಗೊಂಡ ಉಪವಾಸ ಸತ್ಯಾಗ್ರಹ ಅಂತ್ಯ

0
16
loading...

ಕನ್ನಡಮ್ಮ ಸುದ್ದಿ-ಹೊನ್ನಾವರ: ಮಂದಗತಿಯಲ್ಲಿ ಸಾಗುತ್ತಿರುವ ಪರೇಶ ಮೇಸ್ತನ ಸಾವಿನ ತನಿಖೆಯನ್ನು ಸಿ.ಬಿ.ಐ. ತೀವ್ರ ಗತಿಯಲ್ಲಿ ಮಾಡಿ ತಕ್ಷಣ ವರದಿಯನ್ನು ಸರಕಾರಕ್ಕೆ ನೀಡುವಂತೆ ಒತ್ತಾಯಿಸಿ ಹೊನ್ನಾವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಗದೀಪ ಎನ್‌. ತೆಂಗೇರಿಯವರ ನೇತ್ವತ್ತದಲ್ಲಿ ನಡೆದ ಒಂದು ದಿನದ ಉಪವಾಸ ಸತ್ಯಾಗ್ರಹ ಇಂದು ಅಂತ್ಯಗೊಂಡಿತು.
ಇಂದು ಮುಂಜಾನೆ ಉಪವಾÀಸ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಹೊನ್ನಾವರ ಉಪ.ತಹಶೀಲ್ದಾರ ಸತೀಶ ಗೌಡ ಹೊನ್ನಾವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಗದೀಪ ಎನ್‌.ತೆಂಗೇರಿ ಮತ್ತು ಇತರಿಗೆ ಎಳೆನೀರು ನೀಡುವುದರ ಮೂಲಕ ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ ಅಂತ್ಯ ಹಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೊನ್ನಾವರ ಬ್ಲಾಕ್‌ ಕಾಂಗ್ರೆಸ್‌ಅಧ್ಯಕ್ಷ ಜಗದೀಪ ಎನ್‌. ತೆಂಗೇರಿ ಅತ್ಯಂತ ಶಾಂತ ರೀತಿಯಿಂದ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಾನು ಮತ್ತು ನನ್ನ ಸಂಗಡಿಗರು ಮಾಡಿ ಕೇಂದ್ರ ಸರಕಾರಕ್ಕೆ ಎಚ್ಚರಿಸಿದ್ದೇವೆ. ಇನ್ನು ಹದಿನೈದು ದಿನಗಳ ಒಳಗಾಗಿ ಸಿ.ಬಿ.ಐ ಪರೇಶ ಮೇಸ್ತ ಸಾವಿನ ತನಿಖೆಯ ವಿವರ ಜನತೆಗೆ ನೀಡಬೇಕು. ಪರೇಶ ಮೇಸ್ತ ಕುಟುಂಬಕ್ಕೆ ನ್ಯಾಯ ನೀಡಬೇಕು ಇಲ್ಲದಿದ್ದಲ್ಲಿ ಪೂರ್ವ ನಿಗದಿಯಂತೆ ಮುಂದಿನ ದಿನದಲ್ಲಿ ಹೊನ್ನಾವರ ಒಂದ್‌ ಮತ್ತು ಕಾರವಾರ ಚಲೋ ಮೂಲಕ ನ್ಯಾಯಕ್ಕಾಗಿ ಒತ್ತಾಯಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕನ್ನಡಾಭಿಮಾನಿ ಸಂಘದ ಅಧ್ಯಕ್ಷ ಉದಯರಾಜ್‌ ಮೇಸ್ತ, ಜಿಲ್ಲಾ ಮಹಿಳಾ ಅಧ್ಯಕ್ಷ ತಾರಾ ಗೌಡ, ಮುಂಖಡರಾದ ಸುರೇಶ ರುಕ್ಕು, ತುಳಸಿ ನಗರ, ನಾಗರಾಜ್‌ ಮೇಸ್ತ, ಮೋಹನ ಮೇಸ್ತ, ಪ. ಪಂ.ಅಧ್ಯಕ್ಷ ರಾಜಶ್ರೀ ನಾಯ್ಕ,ಉಪಾಧ್ಯಕ್ಷ ಶರಾವತಿ ಮೇಸ್ತ, ಸದಸ್ಯರಾದ ರವಿಂದ್ರ ನಾಯ್ಕ, ತುಳಸಿದಾಸ್‌ ಪುಲ್ಕರ್‌ ,ಜಮಿಲಾ ಶೇಖ, ಮಂಜುನಾಥ ಖಾರ್ವಿ, ಸುರೇಶ ಮೇಸ್ತ, ಆಗ್ನೇಲ್‌ ಡಾಯಸ್‌, ಹುಸೇನ್‌ ಬಾದ್ರಿ, ದಾಮೋದರ ನಾಯ್ಕ,ಇಸ್ಮಾಯಿಲ್‌ ಶೇಖ ಇನ್ನು ಮುಂತಾದವರು ಉಪಸ್ಥಿತರಿದರು.

loading...