ಮೊದಲ ಬಾರಿಗೆ 37,000 ಗಡಿ ದಾಟಿದ ಸೆನ್ಸೆಕ್ಸ್

0
8
loading...

ಮುಂಬೈ: ಇದೆ ಮೊದಲ ಬಾರಿಗೆ ಮುಂಬೈ ಷೇರು ಮಾರುಕಟ್ಟೆ ಮತ್ತೆ ಸಾರ್ವಖಾಲಿಕ ದಾಖಲೆ ಮಾಡಿದೆ, 37,000 ದಾಖಲೆ ನಿರ್ಮಾಣ ಮಾಡಿ ಈ ಹಿಂದಿನ ದಾಖಲೆಗಳನ್ನು ಹಿಂದಿಕ್ಕಿದೆ.
ಕಳೆದ ಮೂರು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿರುವ ಬಿಎಸ್ ಇ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 37 ಸಾವಿರ ಗಡಿ ದಾಟಿದ್ದು, ನಿಫ್ಟಿ ಕೂಡ 11 ಸಾವಿರ ಗಡಿ ದಾಟಿದೆ. ಪ್ರಸ್ತುತ ಬಿಎಸ್ ಇ ಸೆನ್ಸೆಕ್ಸ್ ಶೇ.042ರಷ್ಟು ಏರಿಕೆಯೊಂದಿಗೆ 37,014.65 ಅಂಕಗಳಲ್ಲಿ ವಹಿವಾಟು ನಡೆಸುತ್ತಿದ್ದು, 40.20 ಅಂಕಗಳ ಏರಿಕೆಯೊಂದಿಗೆ 11, 100 ಅಂಕಗಳಿಗೇರಿದೆ.
ಇನ್ನು ಇಂದಿನ ವಹಿವಾಟಿನಿಂದ ಪ್ರಮುಖವಾಗಿ ಬಂಡವಾಳ ಸರಕು ಕ್ಷೇತ್ರ, ಎಫ್ ಎಂಸಿಜಿ, ರಿಯಲ್ ಎಸ್ಟೇಟ್ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಷೇರುಗಳಿಗದೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಪ್ರಮುಖವಾಗಿ ದೇಶೀಯ ಹೂಡಿಕೆದಾರರೇ ಈ ಕ್ಷೇತ್ರದ ಷೇರುಗಳ ಮೇಲೆ ಭರವಸೆ ಇಟ್ಟು ಖರೀದಿ ಮಾಡುತ್ತಿರುವುದರಿಂದ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗಿದೆ.
ಸಂಸ್ಥೆಗಳ ಮೊದಲ ತ್ರೈಮಾಸಿಕ ವರದಿಗಳ ಸಕಾರಾತ್ಮಕ ಅಂಶ ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಎಸ್ ಬಿಐ, ಭಾರ್ತಿ ಏರ್ಟೆಲ್, ಟಾಟಾ ಮೋಟಾರ್ಸ್, ಐಟಿಸಿ, ಕೋಲ್ ಇಂಡಿಯಾ, ಎಲ್ ಅಂಡ್ ಟಿ, ಒಎನ್ ಜಿಸಿ, ಎಚ್ ಡಿಎಫ್ ಸಿ ಬ್ಯಾಂಕ್, ಆರ್ ಎಎಲ್, ಮಾರುತಿ, ಎಮ್ ಅಂಡ್ ಎಂ, ಬಜಾಜ್ ಆಟೊ, ಇಂಡಸ್ ಇಂಡ್ ಬ್ಯಾಂಕ್, ಕೋಟಕ್ ಬ್ಯಾಂಕ್ ಸಂಸ್ಥೆಗಳು ಲಾಭಾಂಶ ಕಂಡಿವೆ.

loading...