ಯಾವ ಇಲಾಖೆಗೆ ಯಾವ ರಸ್ತೆ ಬರಲಿವೆ:ಬೋರ್ಡ್ ಅಳವಡಿಸುವಂತೆ ಮೇಯರ್ ಅಧಿಕಾರಿಗಳಿಗೆ ಸೂಚನೆ

0
32
loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ರಸ್ತೆಗಳಲ್ಲಿ‌ ಬಿದ್ದಿರುವ‌ ತಗ್ಗು ಗುಂಡಿಗಳಿಂದ ಆಗುವ‌ ಅನಾಹುತಗಳಿಂದ ಸಾರ್ವಜನಿಕರ ಕೆಂಗಣ್ಞಿಗೆ ವಿನಾಕಾರಣ ಮಹಾನಗರ ಪಾಲಿಕೆಗೆ ಗುರಿಯಾಹುತ್ತದೆ. ಆದ್ದರಿಂದ‌ ಯಾವ‌ ರಸ್ತೆ ಯಾವ ಇಲಾಖೆಗೆ ಬರುತ್ತದೆ ಎಂಬುವದರ ಬಗ್ಗೆ ಫಲಕಗಳನ್ನು ಅಳವಡಿಸಬೇಕೆಂದು ಪಾಲಿಕೆ ಮೇಯರ ಬಸಪ್ಪಾ ಚಿಕ್ಕಲದಿನ್ನಿ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಶನಿವಾರದಂದು ಪಾಲಿಕೆ ಸಭಾಂಗಣದಲ್ಲಿ ಮಳೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕೈಗೊಂಡ ಸಭೆಯಲ್ಲಿ ಅಧಿಕಾರಿಗಳ ತಿಳಿಸಿದರು.

ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಹದಗೆಟ್ಟಿವೆ ಎಲ್ಲಂದರಲ್ಲಿ ತಗ್ಗು ಗುಂಡಿಗಳು ಬಿದ್ದಿವೆ.ಪಿಡ್ಲ್ಯೂಡಿ, ಕ್ಯಾಟೋನ್ಮೇಂಟ್ ಇಲಾಖೆಯವರಿಗೆ ಬರುವ ರಸ್ತೆಗಳಲ್ಲಿ ಏನೇ‌ ಅನಾಹುತವಾದರು ಅದಕ್ಕೆ ಸಾರ್ವಜನಿಕರು ಪಾಲಿಕೆ
ಬೆರಳು ಮಾಡಿ‌ ತೊರಿಸುತ್ತಿದ್ದಾರೆ.

ಎಲ್ಲ ಇಲಾಖೆಗಳ ರಸ್ತೆಯ ತಗ್ಗು ಗುಂಡಿಗಳಿಂದ ಆಗುವ ಅನಾಹುತಗಳಿಗೆ ಮಹಾನಗರ ಪಾಲಿಕೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಆದ್ದರಿಂದ ಯಾವ ಇಲಾಖೆಗೆ ಯಾವ ರಸ್ತೆಗಳು ಬರಲಿವೆ ಎಲ್ಲಿಂದ ಪ್ರಾರಂಭ ಎಲ್ಲಿಯವರೆ ಪೂರ್ಣ ಗೊಳ್ಳಲಿದೆ ಎಂಬುವುದನ್ನು ಬೋರ್ಡ್
ಅಳವಡಿಸಿ ಇದು ಸಾರ್ವಜನಿಕರಿಗೂ ಸಹ ತಿಳಿಯುತ್ತದೆ ಎಂದು ಹೇಳಿದರು.

ಅಲ್ಲದೆ‌ ನಗರದ ಗುಂಡಿ ಮುಚ್ಚಲು ಡಿಸಿಯವರಿಗೆ ವಿಶೇಷ ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಉಪಮೇಯರ ಮದುಶ್ರೀ ಪುಜಾರಿ, ಪಾಲಿಕೆ ಆಯುಕ್ತ ಶಶೀಧರ ಕುರೇರ, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ‌ ಸದಸ್ಯರು, ಹೆಸ್ಕಾಂ, ಪಿಡ್ಲ್ಯೂಡಿ, ಕ್ಯಾಂಟೋನ್ಮೆಂಟ ಅಧಿಕಾರಿಗಳು ಉಪಸ್ಥಿತರಿದ್ದರು.

loading...