ಯುವಕ ಕಾಣೆ

0
9
loading...

ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ಯುವಕ ಈರಯ್ಯ ತಂ: ಕಲ್ಲಯ್ಯ ಹಿರೇಮಠ (೨೧) ಮೇ ೧೮ ೨೦೧೮ರಂದು ೧೦-೩೦ಗಂಟೆಗೆ ಬಸವನಬಾಗೇವಾಡಿಯ ಗುಬ್ಬಾ ಆಸ್ಪತ್ರೆಯಿಂದ ಹೊರಗೆ ಹೋಗಿ ಬರುತ್ತೆÃನೆ ಅಂತಾ ಹೇಳಿ ಹೋದವನು ಪರತ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ ಅಂತಾ ಕಾಣೆಯಾದ ಯುವಕನ ತಂದೆ ಕಲ್ಲಯ್ಯ ಹಿರೇಮಠ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಜುಲೈ ೩ರಂದು ಪ್ರಕರಣ ದಾಖಲಿಸಿದ್ದು ಗುನ್ನಾ ನಂಬರ: ೨೦೧/೨೦೧೮ ಕಲಂ ನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಯುವಕ ಮನೆಯಿಂದ ಹೋಗುವಾಗ ನೀಲಿ ಬಣ್ಣದ್ದ ಚೌಕಳಿ ಪೂಲ್ ತೋಳಿನ ಅಂಗಿ ಹಾಗೂ ನಾಶಿ ಬಣ್ಣದ ಪ್ಯಾಂಟ ಧರಿಸಿದ್ದು, ಸಾಧಾಗೆಂಪು ಬಣ್ಣ, ದುಂಡು ಮುಖ, ಕರಿ ಕೂದಲು ಇದ್ದು ೫ಪೂಟ ೨ಇಂಚು ಇದ್ದು ಕನ್ನಡ ಭಾಷೆ ಮಾತನಾಡುತ್ತಾನೆ ಕಾಣೆಯಾದ ಮನುಷ್ಯನ ಬಗ್ಗೆ ಠಾಣಾ ಹದ್ದಿನಲ್ಲಿ ಯಾವದಾದರೂ ಉಪಯುಕ್ತ ಮಾಹಿತಿ ಇದ್ದಲ್ಲಿ ಜಿಲ್ಲಾ ನಿಸ್ತಂತು ಕೇಂದ್ರ ವಿಜಯಪುರ ೦೮೩೫೨-೨೫೦೮೪೪, ಬ.ಬಾಗೇವಾಡಿ ಡಿ.ಎಸ್.ಪಿ ಆಫೀಸ್ ೦೮೩೫೮-೨೪೫೨೩೩, ಸಿಪಿಐ ಆಫೀಸ್ ೦೮೩೫೮-೨೪೫೨೪೪, ಬ.ಬಾಗೇವಾಡಿ ಪೋಲಿಸ್ ಠಾಣೆ ೦೮೩೫೮-೨೪೫೩೩೩ ದೂರವಾಣಿ ಸಂಖ್ಯೆಗಳಿಗೆ ತಿಳಿಸಲು ಕೋರಿದ್ದಾರೆ.

loading...