ಯುವತಿ,ಆಕೆ ಸಹೋದರಿ ಮೇಲೆ ಅತ್ಯಾಚಾರಕ್ಕೆ ಯತ್ನ

0
13
loading...

ಬೆಂಗಳೂರು: ಯುವತಿಯು ತನ್ನನ್ನು ಪ್ರೀತಿಸುತ್ತಿಲ್ಲ ಎಂದು ಯುವಕನೊಬ್ಬ ಆಕೆ ಸಂಚರಿಸುತ್ತಿದ್ದ ರಿಕ್ಷಾಕ್ಕೆ ತನ್ನ ಪಿಕಪ್ ವಾಹನ ಡಿಕ್ಕಿ ಹೊಡೆಸಿ, ಯುವತಿ ಮತ್ತು ಆಕೆಯ ಸಹೋದರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲುವಿನಲ್ಲಿ ನಡೆದಿದೆ.
ಆರೋಪಿ ಥಾಮಸ್ ಎಂಬಾತನನ್ನು ಪೆÇಲೀಸರು ಬಂಧಿಸಿದ್ದಾರೆ.ಯುವತಿಯರು ಆಟೋ ರಿಕ್ಷಾದಲ್ಲಿ ಅಣೆಯೂರುನಿಂದ ಗಂಡಿ ಬಾಗಿಲುವರೆಗೆ ತೆರಳುವಾಗ ಈ ಘಟನೆ ನಡೆದಿದೆ.
ಆರೋಪಿ ಥಾಮಸ್ ತನ್ನ ಪಿಕಪ್ ವಾಹನದಲ್ಲಿ ರಿಕ್ಷಾವನ್ನು ಹಿಂಬಾಲಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ್ದ.ರಿಕ್ಷಾ ಮಗುಚಿ ಬಿದ್ದಾಗ ಥಾಮಸ್ ರಿಕ್ಷಾ ಚಾಲಕನ ಕೈಗೆ ಕಚ್ಚಿ ಯುವತಿಗೆ ನೀನು ನನ್ನನ್ನು ಪ್ರೀತಿ ಮಾಡುವುದಿಲ್ಲವಾ ಎಂದು ಹೇಳಿ ಕುತ್ತಿಗೆ ಒತ್ತಿ ಹಿಡಿದಿದ್ದಾನೆ. ಆಗ ಬಿಡಿಸಲು ಬಂದ ಯುವತಿಯ ಸಹೋದರಿ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಇಬ್ಬರ ಮೇಲೂ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಬಗ್ಗೆ ಪ್ರಕರಣದ ಮಾಹಿತಿ ಪಡೆದ ಪೆÇಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

loading...