ಯೋಧನ ಕುಟುಂಬಕ್ಕೆ ಅಗತ್ಯ ನೆರವು

0
6
loading...

ಅಮೀನಗಡ: ಇತ್ತೀಚೆಗೆ ಸೇನಾ ಟೆಂಟ್‌ನಲ್ಲಿ ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟ ಸಮೀಪದ ರಕ್ಕಸಗಿ ಗ್ರಾಮದ ಯೋಧ ಪಾಪಣ್ಣ ಯರನಾಳ ಅವರ ಮನೆಗೆ ಜೆಡಿಎಸ್‌ ಜಿಲ್ಲಾಧ್ಯಕ್ಷ ಎಸ್‌.ಆರ್‌.ನವಲಿಹಿರೇಮಠ ಭೇಟಿ ನೀಡಿ ಕುಟುಂಬ ಸಾಂತ್ವನ ಹೇಳಿದರು.
ಯೋಧನ ರಕ್ಕಸಗಿಯಲ್ಲಿನ ಮನೆಗೆ ಮಂಗಳವಾರ ಭೇಟಿ ನೀಡಿದ ಎಸ್‌ಆರ್‌ಎನ್‌ ಪೌಂಡೇಶನ್‌ ಸಂಸ್ಥಾಪಕ, ಜೆಡಿಎಸ್‌ ಜಿಲ್ಲಾಧ್ಯಕ್ಷ ಎಸ್‌.ಆರ್‌.ನವಲಿಹಿರೇಮಠ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ದೇಶ ಕಾಯುವ ಅವರ ಧೈರ್ಯ ಮೆಚ್ಚುವಂತದ್ದು. ಅವರ ಕುಟುಂಬದ ಸದಸ್ಯರೂ ಸಹ ಅಷ್ಟೇ ಧೈರ್ಯದಿಂದ ಮಕ್ಕಳನ್ನು ಸೇನೆಗೆ ಕಳುಹಿಸಿರುತ್ತಾರೆ. ಇಂಥ ಅವಧಿಯಲ್ಲಿ ದುರ್ಘಟನೆ ನಡೆದು ಪಾಪಣ್ಣ ಮೃತಪಟ್ಟಿದ್ದು ನಮ್ಮೆಲ್ಲರಿಗೂ ತುಂಬಲಾರದ ನಷ್ಟವಾಗಿದೆ. ಕುಟುಂಬ ಸದಸ್ಯರಿಗೆ ದೇವರು ದು:ಖ ಭರಿಸುವ ಶಕ್ತಿ ನೀಡಲಿ ಎಂದರು.
ಇಬ್ಬರೂ ಹೆಣ್ಣು ಮಕ್ಕಳ ಹೆಸರಿನಲ್ಲಿ ಎಸ್‌ಆರ್‌ಎನ್‌ ಪೌಂಡೇಶನ್‌ ವತಿಯಿಂದ ತಲಾ 50 ಸಾವಿರ ರೂ. ಬ್ಯಾಂಕ್‌ನಲ್ಲಿ ಠೇವಣಿ ಇಡುವುದಾಗಿ ಭರವಸೆ ನೀಡಿದರು. ಅದಲ್ಲದೆ ಸರಕಾರದಿಂದ ಬರಬೇಕಾದ ಪರಿಹಾರದ ಕುರಿತು ಸಿಎಂ ಅವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ವಕೀಲರಾದ ವೆಂಕಟೇಶ ದೇಶಪಾಂಡೆ, ವಿರೇಶ ದಮ್ಮೂರಮಠ, ಮಂಜು ಬಸರಿಗಿಡದ, ಶಿವಪ್ರಸಾದ ಗದ್ದಿ, ಮಲಿಕಸಾಬ ಇತರರು ಇದ್ದರು.

loading...