ರವಾಂಡ ದೇಶಕ್ಕೆ ಭಾರತ ನೆರವು

0
10
loading...

ಕೈಗಾಲಿ: ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರಮೋದಿ ರವಾಂಡ ಅಧ್ಯಕ್ಷ ಪೌಲ್ ಕಾಗಾಮೆ ಅವರೊಂದಿಗೆ ರಕ್ಷಣೆ, ವ್ಯಾಪಾರ, ಕೃಷಿ ವಲಯದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು.
ಭಾರತ ರವಾಂಡ ದೇಶಕ್ಕೆ ಸುಮಾರು 200 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಸಾಲದ ನೆರವನ್ನು ಪ್ರಕಟಿಸಿತು.
ರವಾಂಡ ದೇಶಕ್ಕೆ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದು, ಅಲ್ಲಿನ ಅಧ್ಯಕ್ಷ ಪೌಲ್ ಕಾಗಾಮೆ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ನರೇಂದ್ರಮೋದಿ ರುವಾಂಡದಲ್ಲಿ ಭಾರತ ಸದ್ಯದಲ್ಲಿಯೇ ಕಾರ್ಯಾಚರಣೆ ಆರಂಭಿಸಲಿದೆ ಎಂದು ತಿಳಿಸಿದರು.
ರವಾಂಡದಲ್ಲಿ ಹೈ ಕಮೀಷನ್ ತೆರೆಯಲಾಗುವುದು, ಇದು ಉಭಯ ರಾಷ್ಟ್ರಗಳ ಸರ್ಕಾರಗಳ ನಡುವಿನ ಸಂವಹನಕ್ಕೆ ಸಾಧ್ಯವಾಗುವುದು ಮಾತ್ರವಲ್ಲದೇ, ರಾಯಬಾರಿಗಳು, ಪಾಸ್ ಪೊರ್ಟ್, ವೀಸಾ, ಮತ್ತಿತರ ಸೌಲಭ್ಯಗಳನ್ನು ದೊರಕಿಸಿಕೊಡಲಿದೆ ಎಂದು ಮೋದಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

loading...