ರಸ್ತೆಬದಿ ಡಬ್ಬ ಅಂಗಡಿ ವ್ಯಾಪರಸ್ಥರಿಗೆ ಅನುಕೂಲ ಕಲ್ಪಿಕೊಡುವಂತೆ ಮನವಿ

0
7
loading...

ಕನ್ನಡಮ್ಮ ಸುದ್ದಿ-ಯಲಬುರ್ಗಾ: ಕೊಪ್ಪಳ ರಸ್ತೆಗೆ ಹೊಂದಿಕೊಂಡಿರುವ ನೂರಾರು ಸಣ್ಣ ಪುಟ್ಟ ಡಬ್ಬ ಅಂಗಡಿ ವ್ಯಾಪರಸ್ಥರು ರಸ್ತೆ ಬದಿ ಡಬ್ಬ ಅಂಗಡಿ ಇಟ್ಟುಕೊಂಡು ತಮ್ಮ ಜೀವನ ನಡೆಸುತ್ತಾ ಬಂದಿದ್ದು,ಈಗ ರಸ್ತೆ ಅಗಲಿಕರಣದಿಂದ ಅಂಗಡಿಗಳನ್ನು ತೆರವುಗೊಳಿಸುವಂತೆ ತಿಳಿಸಿದ್ದರಿಂದ ತುಂಬಾ ತೊಂದರೆಯಾಗುತ್ತಿದ್ದು,ನಮಗೆ ನ್ಯಾಯ ಒದಗಿಸಿಕೊಡುವಂತೆ ಸ್ಥಳಿಯ ಪಪಂ ಮುಖ್ಯಾಧಿಕಾರಿ ನಾಗೇಶ ಅವರಿಗೆ ಸೋಮವಾರ ವ್ಯಾಪರಸ್ಥರು ಮನವಿ ಸಲ್ಲಿಸಿದರು.

ಯಲಬುರ್ಗಾ ಪಟ್ಟಣದಲ್ಲಿ ಹಲವಾರು ವರ್ಷಗಳಿಂದಲೂ ಸಣ್ಣ ಪುಟ್ಟ ಡಬ್ಬ ಅಂಗಡಿಕಾರರು ತಮ್ಮ ಉಪಜೀವನಕ್ಕಾಗಿ ಡಬ್ಬ ಅಂಗಡಿಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಾ ಬಂದಿದ್ದು,ಇದರಲ್ಲಿ ಹೆಚ್ಚಾಗಿ ಬಡ ಕುಟುಂಬಗಳೇ ಜೀವನ ಸಾಗಿಸುತ್ತಿದ್ದಾರೆ.ಆದರೆ ರಸ್ತೆ ಅಗಲಿಕರಣಕ್ಕಾಗಿ ಡಬ್ಬ ಅಂಗಡಿಗಳನ್ನು ತಗೆಯುವಂತೆ ಸೂಚಿಸಿದ್ದು,ಇದರಿಂದಾಗಿ ಬಡ ಕುಟುಂಬಗಳು ಬಿದಿ ಪಾಲಾಗುತ್ತಿದ್ದೇವೆ.ಅದ್ದರಿಂದ ರಸ್ತೆ ಅಗಲಿಕರಣಕ್ಕೆ ನಮದ್ದೇನು ವಿರೋಧವಿಲ್ಲ.ಅಭಿವೃದ್ದಿಗೆ ನಮದು ಕೂಡಾ ಸಹಕಾರವಿದೆ.ಈ ರಸ್ತೆಯಲ್ಲಿ ಸ್ವಲ್ಪು ಅಂತರದಲ್ಲಿಯೇ ನಮ್ಮ ಡಬ್ಬ ಅಂಗಡಿಗಳನ್ನು ಇಟ್ಟುಕೊಳ್ಳುವದಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನಾಗೇಶ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಬದಲ್ಲಿ ಶಿವಮೂರ್ತಿ ಇಟಗಿ,ಶಂಕರ ಭಾವಿಮನಿ,ವಸಂತ ಭಾವಿಮನಿ,ವೀರಯ್ಯ ಶಿವಪ್ಪಯ್ಯನಮಠ,ಮಲ್ಲಿಕಾರ್ಜುನ ಹಡಪದ,ಇಸ್ಲಾಸಾಬ ನಾಲಬಂದ,ಶರಣಯ್ಯ ಹಿರೇಮಠ, ಮಹಾದೇವಪ್ಪ ಹಡಪದ,ಕೃಷ್ಣಮೂರ್ತಿ ಜಾಲಗಾರ, ರುದ್ರೇಶ ಮಾರನಾಳ,ಬಸವರಾಜ,ಸಿದ್ದಪ್ಪ,ಶಿವಲಿಲಾ,ಮಹಾಂತೇಶ,ಹನಮಂತ ಬಣಕಾರ,ಸೇರಿದಂತೆ ನೂರಾರು ಡಬ್ಬ ಅಂಗಡಿ ವ್ಯಾಪರಸ್ಥರು ಭಾಗವಹಿಸಿದ್ದರು.

loading...