ರಸ್ತೆ ಅಪಘಾತ: ಓರ್ವ ಮಹಿಳೆ ಸಾವು

0
13
loading...

ಕನ್ನಡಮ್ಮ ಸುದ್ದಿ-ಹುನಗುಂದ: ಇಲ್ಲಿನ ರಾಜ್ಯ ಹೆದ್ದಾರಿ 20ರ ನಾಗೂರ ಕ್ರಾಸ್‌ ಬಳಿ ತರಕಾರಿ ಹೇರಿಕೊಂಡು ಅಮೀನಗಡ ಕಡೆಗೆ ಹೊರಟಿದ್ದ ಟಂಟಂ ವಾಹನವು ರಸ್ತೆ ಅಪಘಾತ ಸಂಭವಿಸಿ ಮಹಿಳೆಯೋರ್ವಳು ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ.
ರವಿವಾರ ಬೆಳಿಗ್ಗೆ ಕುಷ್ಟಗಿ ತಾಲೂಕಿನ ಷಡಲಗೇರಿ ಗ್ರಾಮದ ಟಂಟಂ ವಾಹನವು ಚಾಲಕ ಸೇರಿ 7ಜನ ಮತ್ತು ತರಕಾರಿ ತುಂಬಿಕೊಂಡು ಸಮೀಪದ ಬನ್ನಿಹಟ್ಟಿಯಿಂದ ಅಮೀನಗಡ ತರಕಾರಿ ಮಾರುಕಟ್ಟೆಗೆ ಹೊರಟಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಲ್ಲಿಗೆ ಅಪ್ಪಳಿಸಿ ವಾಹನ ಪಲ್ಟಿಯಾಗಿ ಬನ್ನಿಹಟ್ಟಿ ಗ್ರಾಮದ ಗಂಗವ್ವ ಯಮನೂರಪ್ಪ ವಾಲೀಕಾರ (45) ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಚಾಲಕ ಸೇರಿ 6ಜನ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಸಿಪಿಐ ಕರುಣೇಶಗೌಡ ಮತ್ತು ಎಸ್‌ಐ ಶರಣಬಸಪ್ಪ ಆಜೂರ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

loading...