ರಸ್ತೆ ಗುಂಡಿ ಮುಚ್ಚುವಂತೆ ಏಕಾಂಗಿ ಪ್ರತಿಭಟನೆ

0
37
loading...

ಕನ್ನಡಮ್ಮ ಸುದ್ದಿ-ಬೆಳಗಾವಿ:ನಗರದಲ್ಲಿ ಮೇಲಿಂದ ಮೇಲೆ ರಸ್ತೆ ಗುಂಡಿಗಳನ್ನು‌ ಮುಚ್ಚುವಂತೆ ವಿನೂತನ ಪ್ರತಿಭಟನೆ ನಡೆಯುತ್ತಿದ್ದು, ಈಗ ಮತ್ತೊಬ್ಬರಿಂದ ರಸ್ತೆಯಲ್ಲಿ ಕುಳಿತು ಏಕಾಂಗಿ ಪ್ರತಿಭಟನೆ ಮೂಲಕ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತದೆ.

ನಗರದ ರಸ್ತೆ ಗಳಲ್ಲಿ ಬಿದ್ದಿರುವ ತಗ್ಗು ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಮಿಷನ ಸೇವಾ ಸಮಿತಿ ರಾಜ್ಯಾಧ್ಯಕ್ಷ ಮಹಾದೇವ ದರೆಣ್ಣವರ ಬೆಳಿಗ್ಗೆ 6 ಗಂಟೆಯಿಂದ ಕಾಂಗ್ರೇಸ್ ರಸ್ತೆಯಲ್ಲಿ ಕುಳಿತು ಏಕಾಂಗಿ ಪ್ರತಿಭಟನೆ ನಡೆಸಿದ್ದಾನೆ.

ಸುರಿಯುತ್ತಿರುವ ಮಳೆಯಿಂದ ಹಾಗೂ ಕಳೆದ ಒಂದು ವರ್ಷದಿಂದ ನಗರದ ಪ್ರಮುಖ ರಸ್ತೆ ಗಳಾದ ಕಾಂಗ್ರೆಸ್ ರಸ್ತೆ, ಕ್ಯಾಂಪ್‌ ರಸ್ತೆ,ತರಕಾರಿ ಮಾರುಕಟ್ಟೆ ರಸ್ತೆ, ಹಿಂದವಾಡಿ,ವಡಗಾವಿ, ಪೀರನವಾಡಿ,ಕೆಎಲ್ ಇ ರಸ್ತೆ, ಕೇಂದ್ರ ಬಸ್ ನಿಲ್ದಾಣ,ಇಂದಿರಾ ನಗರ,ಸಾಂಬ್ರಾ ಹಾಗೂ ಕಿಲ್ಲಾ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳು ಹದಗೆಟ್ಟಿವೆ‌ ಎಲ್ಲಂದರಲ್ಲಿ‌ ತಗ್ಗು ಗುಂಡಿಗಳಿಂದ ವಾಹನ ಸವಾರರು ಪರದಾಡುವಂತಾಗಿದೆ.ಅಲ್ಲದೆ‌ ಕಳೆದ ಎರಡು ತಿಂಗಳಲ್ಲಿ ಅನೇಕ ಬೈಕ‌ ಸವಾರರು ಅಪಘಾತಗಳಾಗಿವೆ ಆದ್ದರಿಂದ ತಕ್ಷಣ ನಗರದ ಎಲ್ಲ‌ ರಸ್ತೆಗಳಲ್ಲಿ‌ಬಿದ್ದಿರುವ‌ ಗುಂಡಿಗಳನ್ನು‌ ಮುಚ್ಚಬೇಕೆಂದು ಒತ್ತಾಯಿಸಿ ಪ್ರತಿಭಟನೆ‌‌ ನಡೆಸಿದ್ದಾರೆ.

loading...