ರಸ್ತೆ ಮೇಲೆ ಮುಳ್ಳುಗಂಟಿಗಳದ್ದೆ ದರಬಾರು: ಮೂಖವಿಸ್ಮಿತರಾದ ಜನಪ್ರತಿನಿಧಿಗಳು

0
6
loading...

ಕನ್ನಡಮ್ಮ ಸುದ್ದಿ- ಮಹಾಲಿಂಗಪೂರ: ರಸ್ತೆ ಪಕ್ಕದ ನಿವಾಸಿಗಳು ರಸ್ತೆ ಮೇಲೆ ಕಂಟಿ ಹಾಕುವುದರ ಮೂಲಕ ಸಾರ್ವಜನಿಕರ ಸಂಚಾರ ಬಂದ್‌ ಮಾಡಿದ ಘಟನೆ ಗ್ರಾಮದ ತೋಟದ ವಸ್ತಿಯ ದಾಸನಕೊಡಿ ರಸ್ತೆಯಲ್ಲಿ ನಡೆದಿದೆ.
ಸಮೀಪದ ಢವಳೇಶ್ವರ ಗ್ರಾಮದ ತೋಟದ ಜನರಿಗಾಗಿ ಸರ್ಕಾರದ ಅನುದಾನದಲ್ಲಿ ಕಳೆದ ಒಂದುವರ್ಷದ ಹಿಂದೆ ಸಿಸಿ ಕಾಂಕ್ರೇಟ್‌ ರಸ್ತೆಯನ್ನು ಮುತ್ತಪ್ಪ ಲೋಕುರ ಹೊಲದಿಂದ ಮಾದಪ್ಪ ಹನಗಂಡಿ ಅವರ ಮನೆವರೆಗೆ ಅಂದಾಜು 800 ಮೀಟರ್‌ ಅಂತರದ ರಸ್ತೆ ನಿರ್ಮಿಸಲಾಗಿತ್ತು.
ಇದೆ ರಸ್ತೆಯ ಮೂಲಕ ಇಲ್ಲಿನ ನೂರಾರು ಜನರು ದಿನಂಪ್ರತಿ ಸಂಚರಿಸುತ್ತಿದ್ದು. ಮಹಾಲಿಂಗಪೂರ ಪಟ್ಟಣಕ್ಕೆ ಹೋಗಿಬರುವ ಹಾಗೂ ಮಕ್ಕಳು ಶಾಲೆಗೆ ತೆರಳುವ ಪ್ರಮುಖ ರಸ್ತೆಯಿದಾಗಿದೆ. ಕಳೆದ ಹಲವು ದಿನಗಳಿಂದ ರಸ್ತೆ ಮೆಲೆ ಮುಳ್ಳುಗಂಟಿಗಳನ್ನು ಹಾಕಿ, ರಸ್ತೆ ಬಂದ್‌ ಮಾಡಿದರ ಪರಿಣಾಮದಿಂದ ಸದರಿ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದೆ. ವಿಪರ್ಯಾಸವೆಂದರೇ ಸ್ಥಳಿಯ ಜನಪ್ರತಿನಿಧಿಗಳನ್ನು ಸಾರ್ವಜನಿಕರ ಇಂತಹ ಸಮಸ್ಯೆಯನ್ನು ನೋಡಿಯೂ ನೊಡದ ಹಾಗೇ ಸುಮ್ಮನೆ ಕುಳಿತಿರುವದು ಹಲವು ಸಂಶಯಗಳಿಗೆ ಕಾರಣವಾಗಿದೆ. ಇನ್ನಾದರೂ ಮುಳ್ಳುಗಂಟಿಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಿಗಳಿಗೆ ಅನುವು ಮಾಡಿಕೊಡಬೇಕೆಂಬುದು ಪ್ರಜ್ಞಾವಂತ ಸಾರ್ವಜನಿಕರ ಒತ್ತಾಯವಾಗಿದೆ.

loading...