ರಾಜಕೀಯ ನಾಯಕರ ಇಚ್ಚಾಸಕ್ತಿಯ ಕೊರತೆ ಕನ್ನಡ ಭಾಷೆಗೆ ಸದಾ ಅನ್ಯಾಯ :ಡಾ.ಗುರಿಕಾರ

0
8
loading...

ಕನ್ನಡಮ್ಮ ಸುದ್ದಿ- ನರೇಗಲ್ಲ: ರಾಜಕೀಯ ನಾಯಕರ ಇಚ್ಚಾಸಕ್ತಿಯ ಕೊರತೆಯಿಂದಾಗಿ ಕನ್ನಡ ನಾಡಿಗೆ ಹಾಗೂ ಕನ್ನಡ ಭಾಷೆಗೆ ಸದಾ ಅನ್ಯಾಯವಾಗುತ್ತಿದೆ ಪರಿಣಾಮ ದೇಶ್ಯಾದ್ಯಂತ ಕನ್ನಡಿಗರ ಕಡೆಗಣನೆ ಆಗುತ್ತಿದೆ ಎಂದು ತಾಲ್ಲೂಕ ಕಸಾಪ ನಿಕಟ ಪೂರ್ವ ಅಧ್ಯಕ್ಷ ಡಾ. ಶಿವರಾಜ ಗುರಿಕಾರ ಹೇಳಿದರು.

ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಶನಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ಯ ವತಿಯಿಂದ ನಡೆದ 1ನೇ ತಿಂಗಳ ಸಾಹಿತ್ಯ ಚಿಂತನಗೋಷ್ಠಿಯಲ್ಲಿ ಅವರು ಮಾತನಾಡಿದರು, ಪಕ್ಷಭೇದ ಮರೆತು ನಾಡು, ನುಡಿ ಎಂದು ಸೇವಾ ಮನೋಭಾವನೆಯಿಂದ ರಾಜಕಾರಣಿಗಳು ದುಡಿಯಲು ಮುಂದಾಗಿದ್ದರೆ ಕುಡಿಯುವ ನೀರಿಗಾಗಿ ವರ್ಷನಾಗಟ್ಟಲೇ ಹೋರಾಟ ಮಾಡುವ ಅವಶ್ಯಕತೆ ಇರಲಿಲ್ಲ. ಇದೇ ಹೋರಾಟದ ಪರಿಸ್ಥಿತಿ ಆಂಧ್ರಪ್ರದೇಶ ಅಥವಾ ತಮಿಳುನಾಡಿನಲ್ಲಿ ನಡೆದಿದ್ದರೆ ರಾಷ್ಟ್ರವೇ ಅಲ್ಲೋಲ-ಕಲ್ಲೋಲ ಆಗುತ್ತಿತ್ತು ಯಾಕೆಂದರೆ ಅಲ್ಲಿನ ಭಾಷಿಕರು ರಾಜ್ಯದ ಸಮಸ್ಯೆ ಎಂದು ಬಂದಾಗ ಪಕ್ಷಭೇದ ಮರೆತು ಹೋರಾಡಿ ತಮ್ಮ ಹಕ್ಕನ್ನು ಪಡೆದುಕೊಳ್ಳುತ್ತಾರೆ. ಅವರನ್ನಾದರು ನೋಡಿ ನಮ್ಮ ಪ್ರತಿನಿಧಿಗಳು ಕಲಿತೊಳ್ಳಬೇಕು ಎಂದರು.

ಕಾವೇರಿಯಿಂದಾ ಗೋದಾವರಿಯವರೆಗೆ ಹರಡಿದ್ದ ನಮ್ಮ ನಾಡು ಇತರರ ದಾಳಿ, ದಬ್ಬಾಳಿಕೆಯಿಂದ ಮಹಾರಾಷ್ಟ್ರಕ್ಕೆ ಸೊಲ್ಲಾಪುರ, ಕೇರಳಕ್ಕೆ ಕಾಸರಗೋಡ ಹೀಗೆ ಹಲವಾರು ಪ್ರದೇಶಗಳನ್ನು ಕಳೆದುಕೊಂಡಿದ್ದೆವೆ ಎಂದು ವಿಷಾದ ವ್ಯಕ್ತಪಡಿಸಿದರು. ಇಂಗ್ಲೀಷ್ ವ್ಯಾಮೋಹದಿಂದಾಗಿ ಜನರು ಕನ್ನಡಭಾಷೆಯ ಬಳಕೆಯನ್ನು ಕಡಿಮೆ ಮಾಡುತ್ತಿದ್ದಾರೆ. ಯುವ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಕನ್ನಡವನ್ನು ಪ್ರೀತಿಸಲು ಪ್ರೇರೇಪಿಸಬೇಕು ಅವರಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸುವ ಕೆಲಸಗಳು ನಡೆಯಬೇಕಾಗಿದೆ. ಕನ್ನಡಿಗರೆಲ್ಲರೂ ಕನ್ನಡಾಭಿಮಾನ ಬೆಳೆಸಿಕೊಂಡು ಕನ್ನಡ ಭಾಷೆಯನ್ನು ಉಳಿಸುವ ಪಣ ತೊಟ್ಟಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.

ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಇಂಗ್ಲಿಷ್ ಭಾಷೆ ನಮ್ಮ ಕನ್ನಡ ಭಾಷೆಗೆ ಬೆಳಕಾಗವಂತೆ ಬಳಸಬೇಕು ವಿನಹ ಬೆಂಕಿಯಾಗುವಂತಲ್ಲ. ಪೇಶ್ವೆ ಆಳ್ವಿಕೆಯಲ್ಲಿ ಮರಾಠ ಶಾಲೆಗಳಿಂದ ಕೂಡಿದ್ದ ಧಾರವಾಡ ಜಿಲ್ಲಾ ಬಿ.ಎಂಶ್ರೀ ಅವರ ಕೇವಲ ಒಂದು ಉಪನ್ಯಾಸದಿಂದ ಕನ್ನಡ ಶಾಲೆಗಳಾಗಿ ಪರಿವರ್ತನೆಗೊಂಡವು. ಆದ್ದರಿಂದ ಈ ರೀತಿಯ ಕಾರ್ಯಕ್ರಮಗಳು ಗ್ರಾಮದ ಪ್ರತಿ ಓಣಿಯಲ್ಲಿ ಆಯೋಜನೆ ಮಾಡಿ ಜಾಗೃತಿಗೊಳಿಸುವ ಕಾರ್ಯಗಳು ಪ್ರತಿ ತಿಂಗಳ ಒಂದು ದಿನ ನಡೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ರೋಣ, ಗಜೇಂದ್ರಗಡ ತಾಲ್ಲೂಕ ಅಧ್ಯಕ್ಷ ಐ.ಎ.ರೇವಡಿ ಮಾತನಾಡಿ, ಏಕೀಕರಣಗೊಂಡ ನಂತರ ಕರ್ನಾಟಕ ಸಾಕಷ್ಟು ಪ್ರಗತಿ ಸಾಧಿಸಿದ್ದರು ಸಹ ಕನ್ನಡ ಭಾಷೆಗೆ, ಸಂಸ್ಕøತಿಗೆ ಸಾಕಷ್ಟು ತೊಂದರೆ ಅಪಾಯಗಳು ಇವೆ. ಭಾಷೆಯ ಅಭಿವೃದ್ದಿಗೆ, ಸಂಸ್ಕøತಿ, ಸಾಹಿತ್ಯದ ರಕ್ಷಣೆಗೆ ಕಸಾಪ ಯಾವತ್ತಿಗೂ ಸಿದ್ದವಿರುತ್ತದೆ. ಆಸಕ್ತಿ ಸಾಹಿತಿಗಳನ್ನು, ಬರಹಗಾರರನ್ನು, ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸಗಳನ್ನು ಸಹ ಕಸಾಪ ಮಾಡುತ್ತಿದೆ. ಪೂಜ್ಯರ ಮಾರ್ಗದರ್ಶನದಂತೆ ಇನ್ನುಮುಂದೆ ನರೇಗಲ್ಲನಲ್ಲಿ ತಿಂಗಳ ಕೊನೆಯ ಶನಿವಾರ ಚಿಂತನಾಗೋಷ್ಠಿಗಳನ್ನು ನಡೆಸಲಾಗುವುದು ಎಂದು ಭರವಸೆಯನ್ನು ನೀಡಿದರು.

ಶಿಕ್ಷಕ ಎಫ್.ಎನ್.ಹುಡೆದ ಉಪನ್ಯಾಸ ನೀಡಿದರು, ಸನ್ಮಾನೋತ್ತರವಾಗಿ ನಿವೃತ್ತ ಶಿಕ್ಷಕ ಎಂ.ಎಸ್.ಧಡೆಸೂರಮಠ ಮಾತನಾಡಿದರು.

ಈ ಸಂದರ್ಭದಲ್ಲಿ ಸೇವಾನಿವೃತ್ತ ಶಿಕ್ಷಕ ಎಂ.ಎಸ್.ಧಡೆಸೂರಮಠ, ಅಂತರಾಷ್ಟ್ರೀಯ ಅಟ್ಯಾಪಟ್ಯಾ ಆಟಗಾರ್ತಿಯರಾದ ಚೈತ್ರಾ ಬಂಡಿವಡ್ಡರ, ಜ್ಯೋತಿ ಬಿಸನಳ್ಳಿ ಹಾಗೂ ಪಿಯು ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕಗಳಿಸಿದ ಗ್ರಾಮೀಣ ಪ್ರತಿಭೆ ಅರ್ಪಿತಾ ಮಲ್ಲನಗೌಡರ ಅವರನ್ನು ಸನ್ಮಾನಿಸಲಾಯಿತು.

ನಿಂಗಪ್ಪ ಮಡಿವಾಳರ ಸ್ವಾಗತಿಸಿದರು, ಎಂ.ಎಸ್.ಮಕಾನದರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರು ರಾಥೋಡ್ ನಿರೂಪಿಸಿ ವಂದಿಸಿದರು. ಕೆ.ಐ.ಬಿಸನಳ್ಳಿ, ಸಿ.ಆರ್.ಪಿ.ಬಸವರಾಜ ಕುರಿ, ಮಹಾದೇವ ಬೇವಿನಕಟ್ಟಿ, ಕೆ.ಜಿ.ಸಂಗಟಿ, ಎ.ಕೆ.ಒಂಟಿ, ಶರಣಪ್ಪ ಬೇವಿನಕಟ್ಟಿ, ಎಸ್.ವಿ.ಹಳ್ಳಿಕೇರಿ, ಎಲ್.ಎಲ್.ಯಂಕಾನಾಯಕ, ಸಿ.ಕೆ.ಬಡಿಗೇರ ಇತರರು ಇದ್ದರು.

loading...