ರಾಹುಲ್‌ ಗಾಂಧಿಗೆ ಹಕ್ಕು ಚ್ಯುತಿ ನೋಟಿಸ್‌: ಸಂಸದ ಜೋಶಿ

0
5
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಸಂಸತ್‌ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮಾಡಿರುವ ವರ್ತನೆ ಬಾಲಿಶತನದ್ದಾಗಿದ್ದು, ಆ ಕಾರಣ ಹಕ್ಕು ಚ್ಯುತಿ ನೋಟಿಸ್‌ ನೀಡಲಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದರು.
ಅವರು ದಾಸ್ತಿಕೊಪ್ಪ ಹೆನ್ನೆರಡುಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ತಾಲೂಕು ಕಾರ್ಯಕಾರಿಣಿಯಲ್ಲಿ ಕಾರ್ಯಕರ್ತರನ್ನುದ್ದೆಶಿಸಿ ಮಾತನಾಡಿದರು.
ರಾಹುಲ್‌ ಗಾಂಧಿ ಸಂಸತ್ತನಲ್ಲಿ ಮೂರ್ಖತನಕ್ಕೆ ಮಿತಿಯೇ ಇಲ್ಲ ಎಂಬ ರೀತಿಯಲ್ಲಿ ನಡೆದುಕೊಂಡರು. ಫ್ರಾನ್ಸ್‌ ದೇಶದ ಜತೆಗಿನ ರೆಫಲ್‌ ಒಪ್ಪಂದ ಮೋದಿ ಆಡಳಿತದಲ್ಲಿ ನಡೆದೇ ಇಲ್ಲ. ಅದು ಕಾಂಗ್ರೆಸ್‌ ಸರಕಾರ ಇದ್ದ ಅವಧಿಯಲ್ಲಿ ಆದ ಒಪ್ಪಂದ ಎಂಬ ಸಾಮಾನ್ಯ ಅರಿವು ರಾಹುಲ್‌ ಗಾಂಧಿಗೆ ಇಲ್ಲದೆ ಇರುವುದು ನಾಚಿಕೇಡಿನ ಸಂಗತಿಯಾಗಿದೆ ಹಾಗೂ ಪ್ರಧಾನಿ ಮೋದಿ ಸರಕಾರ ಅಸ್ಥಿರಗೊಳಿಸುವ ವಿರೋಧ ಪಕ್ಷ ಗಳ ಪ್ರಯತ್ನ ನಡೆಯಲಿಲ್ಲ, ವಿಶ್ವಾಸ ಮತ ಗೆದ್ದ ಮೋದಿ ಸರಕಾರ ಮತ್ತಷ್ಟು ಸಶಕ್ತವಾಗಿದೆ ಎಂದರು. ಮೋದಿ ಸರಕಾರಕ್ಕೆ ಬಡವರ,ದೀನ ದಲಿತರ,ಕೂಲಿಕಾರರ ಎಳ್ಗೆಯ ಸ್ಪಷ್ಟವಾದ ಗುರಿ ಇದೆ ಎಂದು ತಿಳಿಸಿದರು. ಆದರೆ ಪ್ರತಿಪಕ್ಷ ಗಳಿಗೆ ಹೇಗಾದರು ಮಾಡಿ ಅಧಿಕಾರ ಪಡೆಯುವುದೊಂದೇ ಗುರಿಯಾಗಿದೆ ಎಂದು ಆರೋಪಿಸಿದರು. ಆ.15ಕ್ಕೆ ಮೋದಿ ಸರಕಾರ ಆಯುಷ್ಯಮಾನ ಭಾರತ ಎಂಬ ಯೋಜನೆ ತರಲಿದ್ದು ಆ ಮೂಲಕ ದೇಶದಲ್ಲಿ 10ಕೋಟಿ ಬಡ ಕುಟುಂಬಗಳಿಗೆ ಆರೋಗ್ಯ ಸಂಬಂಧಿ ಚಿಕಿತ್ಸೆಗಾಗಿ 5 ಲಕ್ಷ ರೂಪಾಯಿವರೆಗಿನ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು. ಶಾಸಕ ನಿಂಬಣ್ಣವರ ಮಾತನಾಡಿ ಸಂಸತ್‌ನಲ್ಲಿ ಮೋದಿ ಸರಕಾರ ವಿಶ್ವಾಸಮತದಲ್ಲಿ ಗೆಲ್ಲುವ ಮೂಲಕ ಪ್ರತಿಪಕ್ಷ ಗಳಿಗೆ ತೀವ್ರ ಹಿನ್ನಡೆಯಾಗಿದೆ.ಮುಂಬರುವ ಸಂಸತ್‌ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಕಾರ್ಯಕರ್ತರು ಸಂಘಟಿತ ಪ್ರಯತ್ನ ಮಾಡಬೇಕು ಎಂದರು.
ವಿಧಾನ ಸಭಾ ಅಧಿವೇಶನದಲ್ಲಿ ಕಲಘಟಗಿ ಕ್ಷೇತ್ರದ ಸಮಗ್ರ ನೀರಾವರಿಗೆ ಹಾಗೂ ಸಾಲಮನ್ನಾ ಕಾರಣ ಕೆಲ ಅನುದಾನ ಹಿಂದೆಪಡೆಯುವುದನ್ನು ನಿಲ್ಲಿಸ ಬೇಕು ಎಂದು ಸರಕಾರವನ್ನು ಆಗ್ರಹಿಸಿರುವುದಾಗಿ ತಿಳಿಸಿದರು.

loading...