ರೇಲ್ವೆ ನಿಲ್ದಾಣ ಅಭಿವೃದ್ಧಿ ಪಡೆಸುವಂತೆ ಮನವಿ

0
14
loading...

ರೇಲ್ವೆ ನಿಲ್ದಾಣ ಅಭಿವೃದ್ಧಿ ಪಡೆಸುವಂತೆ ಮನವಿ
ಕನ್ನಡಮ್ಮ ಸುದ್ದಿ-ಬೆಳಗಾವಿ:ಪಂಢರಪುರವು ಅತ್ಯಂತ ಜನಪ್ರಿಯ ಯಾತ್ರಾ ಕೇಂದ್ರ. ಹುಬ್ಬಳಿ ಅಥವಾ ಬೆಳಗಾವಿಯಿಂದ ಫಂಡರಪುರಕ್ಕೆ ವಿಶೇಷ ರೈಲು ಆರಂಭಿಸಬೇಕು ಹಾಗೂ ರೇಲ್ವೆ ನಿಲ್ದಾಣವನ್ನು ಅಭಿವೃದ್ಧಿ ಪಡೆಸಬೇಕೆಂದು ನೂತನ ರೇಲ್ವೆ ವ್ಯವಸ್ಥಾಪಕರಿಗೆ ನಾಗರಿಕ ಕೌನ್ಸಿಲ ವತಿಯಿಂದ ಸತೀಶ ತೆಂಡಲುಕರ ಮನವಿ ಸಲ್ಲಿಸಿದರು.
ರವಿವಾರ ನಗರದ ರೇಲ್ವೆ ನಿಲ್ದಾಣದ ನೂತನ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿದ ಸುಧೀರ ಕುಲಕರ್ಣಿ ಅವರಿಗೆ ರೇಲ್ವೆ ನಿಲ್ದಾಣ ಸುಧಾರಣೆ ಒತ್ತು ನೀಡುವಂತೆ ಮನವಿ ಸಲ್ಲಿಸಿದರು.ರೇಲ್ವೆ ನಿಲ್ದಾಣದ ಪ್ಲಾಟ ಪಾರ್ಮ ನಂ ೨ ಮತ್ತು ೩ ರಲ್ಲಿ ಮಹಿಳೆಯರಿಗೆ ಮತ್ತು ಹಿರಿಯರಿಗೆ ಶೌಚಾಲಯ ತೊಂದರೆಯಿದ್ದು ಅಲ್ಲಿ ಶೌಚಾಲಯ ನಿರ್ಮಿಸಬೇಕು,ಹಿರಿಯರಿಗೆ ಅನುಕೂಲಲತೆಗಾಗಿ ಆರಂಭಿಸಿರುವ ಲಿಪ್ಟ್ ಕಾರ್ಯ ಬಹಳ ನಿಧಾನ ಗತಿಯಲ್ಲಿ ನಡೆದಿದ್ದು ಇದನ್ನು ಆದಷ್ಟೂ ಬೇಗ ಮುಗಿಸಿ ಹಿರಿಯ ನಾಗರಿಕರಿಗೆ ಅನುಕೂಲ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದರು.
ಮನವಿ ಸ್ವಿÃಕರಿಸಿ ಮಾತನಾಡಿದ ನೂತನ ನಿಲ್ದಾಣ ವ್ಯವಸ್ಥಾಪಕ ಸುಧೀರ ಕುಲಕರ್ಣಿ ನಾಗರಿಕ ಕೌನ್ಸಿಲ ಅವರ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಿ ಆದಷ್ಟೂ ಬೇಗ ನಿಲ್ದಾಣದ ಅಭಿವೃದ್ಧಿ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಸವರಾಜ್ ಜಾವಾಲಿ,ಸೆವಂತಿಲಾಲ್ ಶಾ,ಅರುಣ್ ಕುಲಕರ್ಣಿ ಸೇರಿದಂತೆ ಇತರರು ಇದ್ದರು.

loading...