ರೈತರಿಗೆ ಸೂಕ್ತ ರಸಗೊಬ್ಬರ ವಿತರಿಸಿ

0
16
loading...

ಕನ್ನಡಮ್ಮ ಸುದ್ದಿ-ಸವಣೂರ: ರಸಗೊಬ್ಬರಗಳನ್ನು ರೈತರಿಗೆ ಸರಿಯಾದ ವೇಳೆಯಲ್ಲಿ ವಿತರಣೆ ಮಾಡದೆ ಒಂದು ವಾರಕ್ಕೂ ಹೆಚ್ಚಿನ ದಿನಗಳನ್ನು ತೆಗೆದುಕೊಂಡು ರೈತರಿಗೆ ಗೊಬ್ಬರ ವಿತರಣೆಯಲ್ಲಿ ಕಾಲಹರಣ ಮಾಡಿದ್ದೀರಿ.ಸರಕಾರ ನಿಗದಿ ಪಡಿಸಿದ ಗೊಬ್ಬರದ ದರದಕ್ಕಿಂತಲೂ ಹೆಚ್ಚಿನ ದರಕ್ಕೆ ಖಾಸಗಿ ಮಾರಾಟ ಮಳಿಗೆಗಳಲ್ಲಿ ಮಾರಾಟವಾಗುತ್ತಿದೆ. ರೈತರು ಆಧಾರ್ ಕಾರ್ಡ್ ತೆಗೆದುಕೊಂಡು ಬಯೋಮೇಟ್ರಿಕ್ ಮೂಲಕ ಗೊಬ್ಬರ ತೆಗೆದುಕೊಂಡರೆ ಸಬ್ಸಿಡಿ ರೈತರಿಗೆ ಮುಟ್ಟಿಸುವ ಮಹಾತ್ವಕಾಂಕ್ಷಿ ಯೋಜನೆ ರೋಪಿಸಿದ ಕೇಂದ್ರ ಸರಕಾರಕ್ಕೆ ಕ್ಯಾರೆ ಎನ್ನುತ್ತಿಲ್ಲ. 10 ರೈತರು ಆಧಾರ್ ಕಾರ್ಡಗೆ 50 ಜನಕ್ಕೆ ವಿತರಣೆ ಮಡಿ ಖಾಸಗಿ ವ್ಯಾಪಾರಸ್ಥರಿಗೆ ಲಾಭ ನೀಡಿದ್ದೀರಿ ಎಂದು ಸಹಾಯಕ ಕೃಷಿ ನಿರ್ದೇಶಕ ಎನ್.ಎಫ್ ಕಟೇಗೌಡ್ರಗೆ ಶಾಸಕ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡರು.
ತಾಲೂಕು ಪಂಚಾಯತ ಸಭಾ ಭವನದಲ್ಲಿ ಬುಧವಾರ ಜರುಗಿದ ಕ್ಷೇತ್ರದ ಅಭಿವೃಧ್ಧಿ ಕಾರ್ಯಗಳ ತ್ರೈಮಾಸಿಕ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಹಿಂದಿನ ಮೂರು ವರ್ಷಗಳ ಕಾಲ ಬರಗಾಲವಿದ್ದರೂ ಸಹ ಅಧಿಕಾದಿಕರಿಗಳ ವೈಫಲ್ಯತೆಗಳಿಂದ ರೈತರಿಗೆ ನ್ಯಾಯುತವಾಗಿ ದೊರಕಬೇಕಾದ ಬೆಳೆ ವಿಮೆಯ ಫಲ ದೊರೆತಿಲ್ಲ. ಪ್ರಸಕ್ತ ವರ್ಷ ಇದೆ ಮನೋಭಾವ ಮುಂದುವರೆದರೆ ಅಧಿಕಾರಿಗಳು ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ. ಈ ಹಿಂದೆ ತಾಲೂಕಿನ 22 ಗ್ರಾ.ಪಂ. ವ್ಯಾಪ್ತಿಯ ರೈತರು ಬೆಳೆ ವಿಮೆ ಮಾಡಿಸಿದರೂ ಸಹ ಕೇವಲ 6 ಗ್ರಾ.ಪಂ. ವ್ಯಾಪ್ತಿಯ ರೈತರಿಗೆ ಶೇಂಗಾ ಬೆಳೆಯ ವಿಮಾ ಪರಿಹಾರ ದೊರೆತಿದೆ. ಇದಕ್ಕೆ ಸಮೀಕ್ಷೆಯ ಲೋಪವೆ ಮುಖ್ಯ ಕಾರಣವಾಗಿದೆ ಎಂದರು.
ಸಭೆಗೆ ಕೃಷಿ ಚಟುವಟಿಕೆಗಳ ವಿವರಣೆ ನೀಡಿದ ಸಹಾಕ ಕೃಷಿ ನಿರ್ದೇಶಕ, ಈ ಬಾರಿ ತಾಲೂಕಿನಾದ್ಯಾಂತ ಉತ್ತಮ ಮಳೆಯಾಗಿದೆ ಇದರಿಂದ ರೈತರು ಶೇ. 90 ರಷ್ಟು ಬೋಮಿಯಲ್ಲಿ ಬಿತ್ತನೆ ಮುಗಿಸಿದ್ದಾರೆ. ರೈತರು ಈ ಭಾರಿ ಬಿಟಿ ಹತ್ತಿ, ಶೇಂಗಾ ಹಾಗೂ ಗೋವಿನ ಜೋಳ ಬೇಲೆ ಆದ್ಯತೆ ನೀಡಿದರು. ಸೋಯಾ 4 ಸ್ಥಾನದಲ್ಲಿದೆ ಎಂದರು. ಗೋಬ್ಬರ ಹಾಗೂ ಯಾವುದೇ ಬಿಜಗಳಿಗೆ ಕೊರತೆ ಇಲ್ಲ ರೈತರಿಗೆ ಬಯೋಮೆಟ್ರಕ್ ಮೂಲಕ ಗೊಬ್ಬರ ವಿತರಣೆಯಾದರೆ ಅವ್ಯವಹಾರ ತಪಲು ಸಾಧ್ಯವೆಂದು ಶಾಸಕರು ಹೇಳಿದರು.
ತಾಲೂಕಿನಲ್ಲಿಯೆ ಎಲ್ಲ ವ್ಯವಸಾಯ ಸೇವಾ ಸಂಘಗಳನ್ನು ಆರ್ಥಿಕವಾಗಿ ಶಸಕ್ತಗೊಳ್ಲಿಸಲು ಯಾವು ಕ್ರಮ ಕೈಗೊಳ್ಳಲಾಗಿದೆ ಎಂದರು. ಪ್ರಶ್ನೆ ಮಾಡಿದಾಗ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾದರು. ಕೃಷಿ ಹೊಂಡಗಳನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಲು ಕೃಷಿ ಇಲಾಖೆ ಗಮನ ಹರಿಸಬೇಕೆಂದರು.
ತಾಲೂಕು ವೈದ್ಯಾಧಿಕಾರಿ ಸತೀಶ ಎ.ಆರ್ ಮಾತನಾಡಿ, ತಾಲೂಕಿನಲ್ಲಿ ಪ್ರಸಕ್ತ ವರ್ಷ 17 ಕುಷ್ಟ ರೋಗಿಗಳನ್ನು ಪತ್ತೆ ಮಾಡಲಾಗಿದೆ ಎಂದಾಗ ಶಾಸಕರು ಈ ಕುರಿತಾಗಿ ತೀವ್ರ ಕಳವಳ ವ್ಯಕ್ತ ಪಡಿಸಿದರು. ಈ ಬಗ್ಗೆ ಶಾಲಾ ಮಟ್ಟದಲ್ಲಿಯೆ ಸಮೀಕ್ಷಾ ಕೆಲಸ ಆರಂಭಿಸಲಾಗಿದ್ದು, ಶಿಕ್ಷಣ ಇಲಾಖೆ ಸಹಕಾರ ಪಡೆದುಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಈ ರೋಗ ಶೇ. 9 ಪ್ರಮಾಣದಲ್ಲಿ ಇದ್ದÀರೆ ತಾಲೂಕಿನಲ್ಲಿ ಶೆ 16 ರಷ್ಟು ಇರುವದನ್ನು ಸಭೆಗೆ ತಿಳಿಸಿದರು. ಆರೋಗ್ಯ ಕೇಂದ್ರಗಳಲ್ಲಿ 32 ಎ.ಎನ್.ಎಂ ಸಿಬ್ಬಂದಿ ಕೊರತೆ ಇರುವುದನ್ನು ಗುತ್ತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸರಕಾರ ಆದೇಶ ನೀಡಿದರೆ ಮಾತ್ರ ಈ ಕೊರತೆ ನಿಗುವುÀದೆಂದು ಸ್ಪಷ್ಟ ಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಸ್,ಸುದಾಕರ ಮಾತನಾಡಿ, 119 ಶಾಲಾ ಕೊಣೆಗಳು ಶೀಥಿಲಗೊಂಡಿದ್ದು, ಅವುಗಳನ್ನು ಕೆಡವಲು ಕ್ರಮ ಜರುಗಿಸುವುದಾಗಿ ಹೇಳಿದರು. 95 ಶಿಕ್ಷಕರ ಕೊರತೆ ಇದ್ದು ಈಗಾಗಲೇ 90 ಅಥಿತಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಉರ್ದು ಪಠ್ಯ ಪುಸ್ತಕಗಳ ಕೊರತೆ ಇದೆ ಪ್ರಸಕ್ತ ವರ್ಷದ ಸಮವಸ್ತ್ರ ಶಾಲಾ ಬ್ಯಾಗ್, ನೋಟ ಪುಸ್ತಕ ಪೂರೈಕೆ ಯಾಗಿಲ್ಲವೆಂದು ಸಭೆಗೆ ವಿವರಿಸಿದರು.
ಮಾತೃಪೂರ್ಣ ಯೋಜನೆಗೆ ಮಾತೆಯ ಸ್ಪಂದನೆ ಇಲ್ಲವೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೇಳಿ 565 ಮಕ್ಕಳ ಭಾಗ್ಯ ಲಕ್ಷ್ಮೀ ಬಾಂಡಗಳು ಪೂರೈಕೆಯಾಗಿಲ್ಲವೆಂದು ಸಭೆಗೆ ಹೇಳಿದರು
ತೋಟಗಾರಿಕಾ, ಲೋಕೋಪಯೋಗಿ, ಆಹಾರ ಮತ್ತು ನಾಗರಿಕ ಪೂರೈಕೆ, ಪಶುಪಾಲನಾ ಇಲಾಖೆ, ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು.
ಸಭೆಯ ಚರ್ಚೆಯಲ್ಲಿ ತಾಪಂ ಅಧ್ಯಕ್ಷ ನಾಗೇಶ ಮೋತೆ, ಉಪಾಧ್ಯಕ್ಷೆ ಜಯಶೀಲಾ ರೋಟಿಗವಾಡ, ಜಿ.ಪಂ. ಸದಸ್ಯರಾದ ರಮೇಶ ದುಗ್ಗತ್ತಿ, ನೀಲವ್ವ ಚೌಹಾಣ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಚ್.ಅಮರಾಪೂರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

loading...