ರೋಟರಿ ಗದಗ ಸೆಂಟ್ರಲ್ ಸಂಸ್ಥೆಯ ಸೇವೆ ಶ್ಲಾಘನೀಯ : ಡಾ. ಚಂದ್ರಶೇಖರ ಶ್ರೀ

0
7
loading...

ಕನ್ನಡಮ್ಮ ಸುದ್ದಿ- ಗದಗ: ಅವಕಾಶ ವಂಚಿತರ ಸೇವೆಯಲ್ಲಿ ತೊಡಗಿಕೊಂಡಿರುವ ರೋಟರಿ ಗದಗ ಸೆಂಟ್ರಲ್ ಸಂಸ್ಥೆಯ ಸೇವೆ ಶ್ಲಾಘನೀಯವಾಗಿದೆ ಎಂದು ಕಾಶೀಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರರು ತಿಳಿಸಿದರು. ಬೆಟಗೇರಿ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನ (ಶರಣಬಸವೇಶ್ವರ ನಗರ)ದಲ್ಲಿ ಜರುಗಿದ ರೋಟರಿ ಗದಗ ಸೆಂಟ್ರಲ್ ಸಂಸ್ಥೆಯ 2018-19 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನಿಧ್ಯವನ್ನು ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಜಗತ್ತಿನಲ್ಲಿ ಭ್ರಷ್ಟಾಚಾರ ಎಲ್ಲ ಕ್ಷೇತ್ರಗಳಲ್ಲಿ ತುಂಬಿಹೋಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳು ಕೆಲವೇ ಕೆಲವು ಉಳಿದುಕೊಂಡಿವೆ. ಅಂಥಹದರಲ್ಲಿ ರೋಟರಿ ಸಂಸ್ಥೆ ಒಂದಾಗಿದೆ ಎಂದು ಶ್ರೀಗಳು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಗದಗ ರೋಟರಿ ಸೆಂಟ್ರಲ್ ಸಂಸ್ಥೆಯು ಗದಗ ಪರಿಸರದಲ್ಲಿ ಇನ್ನೂ ಜನೋಪಕಾರಿ ಕಾರ್ಯನಿರ್ವಹಿಸಿ ಪ್ರತಿಯೊಬ್ಬರ ಪ್ರೀತಿ ಪಾತ್ರವಾಗಲಿ ಎಂದು ಶ್ರೀಗಳು ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಲ್ಲಿ ಆಶೀರ್ವದಿಸಿದರು.

ರಾಜ್ಯ ಮಾಜಿ ಮಾಹಿತಿ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ರೋಟರಿ ಸದಸ್ಯರಾದ ಡಾ. ಶೇಖರ ಸಜ್ಜನರ ಅವರು ಪದಾಧಿಕಾರಿಗಳಿಗೆ ಅಧಿಕಾರ ಗ್ರಹಣದ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಬೋಧಿಸಿ ಜಗತ್ತಿನ 150 ದೇಶಗಳಲ್ಲಿ ಕಳೆದ 113 ವರ್ಷಗಳಿಂದ ರೋಟರಿ ಸಂಸ್ಥೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದೆ. ರೋಟರಿ ಸಂಸ್ಥೆಯಲ್ಲಿ ಅಂದಾಜು 12 ಲಕ್ಷ ಸದಸ್ಯರು ಅವಿರತವಾಗಿ ಮತ್ತು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ರೋಟರಿ ಗದಗ ಸೆಂಟ್ರಲ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿರಿಯ ವರ್ತಕ ಮಂಜುನಾಥ ಐ. ಬೇಲೇರಿ ಅವರು ಮಾತನಾಡಿ ಸಮುದಾಯ ಸೇವೆ, ಅಂಗವಿಕಲರ ಕಲ್ಯಾಣ, ಪರಿಸರ ಸಂರಕ್ಷಣೆ, ಆರೋಗ್ಯ ಸೇವೆ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಸಮಗ್ರವಾಗಿ ತಮ್ಮ ಅಧಿಕಾರಾವಧಿಯಲ್ಲಿ ಅನುಷ್ಠಾನಗೊಳಿಸುವುದಾಗಿ ತಿಳಿಸಿದರು. ಮತ್ತು ಎಲ್ಲ ಜನಪರ ಕಾರ್ಯಕ್ರಮ ಗಳಿಗೆ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಾಯ, ಸಹಕಾರ ನೀಡಬೇಕೆಂದರು.

ರೋಟರಿ ಗದಗ ಸೆಂಟ್ರಲ್ ಸಂಸ್ಥೆಯ ಕಾರ್ಯದರ್ಶಿ ದಶರಥರಾಜ ಜಿ. ಕೊಳ್ಳಿ ಅವರು ಅಧಿಕಾರ ಸ್ವೀಕರಿಸಿ ಗದಗ ರೋಟರಿ ಸೆಂಟ್ರಲ್ ಸಂಸ್ಥೆಯು ಹಮ್ಮಿಕೊಂಡಿರುವ ಜನಪರ ಸೇವೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದೆಂದರು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಬಾಬಣ್ಣ ಶಾಬಾದಿಮಠ, ರೋಟರಿ ಕ್ಲಬ್ ಹಿರಿಯ ಸದಸ್ಯ ಎಸ್. ಐ. ಅಣ್ಣಗೇರಿ, ಮೋಹನ ಹುಲಕೋಟಿ, ಶಶಿಧರ ದಿಂಡೂರ, ಡಾ. ಉಮೇಶ ಪುರದ, ಕೃಷ್ಣಾ ಹಂಜಗಿ, ಪಿ. ವ್ಹಿ. ಹೆಗಡೆ, ಆರ್. ಬಿ. ದಾನಪ್ಪಗೌಡರ, ರಾಜು ಗುಡಿಮನಿ, ಟಿ. ಎಸ್. ಪಾಟೀಲ, ಮಧು ಪುಣೇಕರ, ಪ್ರಕಾಶ ಉಗಲಾಟ, ರಾಜು ಕುರುಡಗಿ, ವಿ. ಕೆ. ಗುರುಮಠ, ಜ್ಯೋತಿ ಕಮತ, ಎಂ.ಎಂ. ಬಡ್ನಿ, ಡಾ. ವ್ಹಿ. ಸಿ. ಶಿರೋಳ, ರಘುನಾಥ ತುಕ್ಕಾ, ವ್ಹಿ. ಸಿ. ಬಳ್ಳೊಳ್ಳಿ, ಬಿ. ಐ. ಬಂಗಾರಶೆಟ್ಟರ, ಸಂಗಮೇಶ ದಿಂಡೂರ, ಡಾ. ಸಿ.ಬಿ. ಹಿರೇಗೌಡರ, ಎಸ್. ಸಿ.ಲಕ್ಕುಂಡಿ, ಜೆ. ಎಚ್. ಶೆಟ್ಟರ್, ಗಂಗಾಧರ ಹಿರೇಮಠ, ಎಸ್. ಎಂ. ಮಾರನಬಸರಿ, ಎಂ. ಐ. ಬೇಲೇರಿ, ಎಸ್. ಎಂ. ಅಂಗಡಿ, ಡಾ.ಪಿ. ಎಚ್.ಶೇಖರ, ಪ್ರೊ. ಬಿ. ಐ. ಹಿರೇಮಠ, ಸುದರ್ಶನ ಹಾನಗಲ್ಲ, ಡಿ. ಎನ್. ಪೋಲಿಸಪಾಟೀಲ, ವಿಜಯಕುಮಾರ ಹಿರೇಮಠ, ಎಚ್. ವ್ಹಿ. ಶೆಟ್ಟಿ, ಎಸ್. ಎಂ. ಕೊಟಗಿ, ಮಲ್ಲಿಕಾರ್ಜುನ ಚಂದಪ್ಪನವರ, ಡಾ. ಪ್ರಭು ಗಂಜಿಹಾಳ, ಚೇತನ ಅಂಗಡಿ, ಬಿ. ಎನ್. ಯರನಾಳ, ಎಂ. ಬಿ. ಚನ್ನಪ್ಪಗೌಡರ, ವ್ಹಿ. ಎಸ್. ಶಿವಕಾಳಿಮಠ, ಈಶಣ್ಣ ಗದ್ದಿಕೇರಿ, ಅರುಣಕುಮಾರ ಚವ್ಹಾಣ, ರಾಜು ಕಂಠಗೊಂಡಣ್ಣವರ, ರಾಜು ಮುಧೋಳ, ಸದಾಶಿವ ಮದರಿಮಠ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕುಮಾರಿ ವರ್ಷಾ ಬ್ಯಾಹಟ್ಟಿ ಸ್ವಾಗತ ಗೀತೆ ಪ್ರಸ್ತುತಪಡಿಸಿದರು. ಎಸ್. ಐ. ಅಣ್ಣಿಗೇರಿ ಸ್ವಾಗತಿಸಿದರು. ರಾಜು ರೋಖಡೆ ವರದಿ ವಾಚನ ಮಾಡಿದರು. ಎಂ.ಎಸಿ. ಐಲಿ ನಿರೂಪಿಸಿದರು.

loading...