ಲಂಕೇಶ ಹತ್ಯಾ ಪ್ರಕರಣದಲ್ಲಿ ಹೇಳಿಕೆ ಕಾರ್ಯ ಖಂಡನೆ

0
10
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಇಲ್ಲಿನ ರಾಷ್ಟ್ರೀಯ ಹಿಂದೂ ಆಂದೋಲನ ಮತ್ತು ಹಿಂದೂ ಜನಜಾಗೃತಿ ಸಮಿತಿ ಸಂಘಟನೆ ವತಿಯಿಂದ ನಿಯೋಗವು ಶನಿವಾರ ತಾಲೂಕ ಕಚೇರಿಗೆ ತೆರಳಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಹಾಗೂ ರಾಜಪಾಲರಿಗೆ ಬರೆದ ಮನವಿಪತ್ರಗಳನ್ನು ಸಲ್ಲಿಸಿದರು.
ಹಿಂದೂಗಳ ಶೃದ್ಧಾಕೇಂದ್ರಗಳಾದ ದೇವಸ್ಥಾನಗಳನ್ನು ಸರಕಾರ ವಶಕ್ಕೆ ಪಡೆಯಬಾರದು. ಹಜ್‌ ಹೌಸ್‌ಗೆ ಟಿಪ್ಪು ಸುಲ್ತಾನ ಹೆಸರನ್ನು ನಾಮಕರಣ ಮಾಡುವ ಪ್ರಸ್ತಾವನೆಯನ್ನು ಕರ್ನಾಟಕ ಸರಕಾರ ರದ್ದುಪಡಿಸಬೇಕು. ಗೌರಿ ಲಂಕೇಶ ಹತ್ಯಾ ಪ್ರಕರಣದಲ್ಲಿ ಅಮಾಯಕ ಯುವಕರನ್ನು ಬಂಧಿಸಿ ಚಿತ್ರಹಿಂಸೆ ನೀಡಿ ಹೇಳಿಕೆ ಪಡೆಯುವ ವಿಶೇಷ ತನಿಖಾ ದಳದ ಕಾರ್ಯವನ್ನು ಖಂಡಿಸಲಾಯಿತು. ಹಾಗೂ ನಿಷ್ಪಕ್ಷ ತನಿಖೆ ನಡೆಸುವಂತೆ ಆಗ್ರಹಿಸಲಾಯಿತು.
ಒಂದು ಕಡೆ ಸಾಮ್ಯವಾದಿ ಸಂಘಟನೆಗಳು ಹಿಂದುತ್ವವಾಗಿ ಮುಂಖಂಡರ/ಕಾರ್ಯಕರ್ತರ ಹತ್ಯೆಯನ್ನು ಮಾಡುತ್ತಿದೆ ಮತ್ತು ಮತ್ತೊಂದು ಕಡೆ ಅವರ ಪಾಪದ ಹತ್ಯೆಯ ಪ್ರಕರಣದಲ್ಲಿ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಗೌರಿ ಲಂಕೇಶ ಹತ್ಯೆ ಪ್ರಕರಣದ ಆರೋಪವನ್ನು ಹಿಂದುತ್ವವಾದಿ ಸಂಘಟನೆಗಳ ಮೇಲೆ ಹಾಕುತ್ತಿರುವುದು ಗಮನಕ್ಕೆ ಬರುತ್ತದೆ. ರಕ್ತ ಕ್ರಾಂತಿಯ ಇತಿಹಾಸ ಇರುವ ಸಾಮ್ಯವಾದಿ ವಿಚಾರಸರಣಿಯ ನಕ್ಸಲರ ಬೆದರಿಕೆಯೂ ಗೌರಿ ಲಂಕೇಶರವರಿಗೆ ಇತ್ತು ಎಂದು ಸ್ವತಃ ಗೌರಿಯ ಸಹೋದರ ಇಂದ್ರಜೀತ ಲಂಕೇಶರವರು ಪ್ರಾರಂಭದಲ್ಲಿ ಸಂಶಯ ವ್ಯಕ್ತ ಪಡಿಸಿದ್ದರು. ಆದರೆ ಉದ್ದೇಶಪೂರ್ವಕವಾಗಿ ಈ ಆಯಾಮದಿಂದ ತನಿಖೆಯನ್ನು ಮಾಡಲು ತನಿಖಾ ಸಂಸ್ಥೆಗಳು ದುರ್ಲಕ್ಷ ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ.
ಹಾಗಾಗಿ ಗೌರಿ ಹತ್ಯೆಯ ಹಿಂದೆ ನಕ್ಸಲರ ವಿಷಯದಲ್ಲಿ ಕೂಲಂಕುಷ ತನಿಖೆಯಾಗಬೇಕು ಮತ್ತು ರಾಜಕೀಯ ಲಾಭ ಪಡೆಯಲು ಆಮಾಯಕರನ್ನು ಬಲಿಪಶು ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತೇವೆ.
ಸಮಿತಿಯ ತಾಲೂಕಾ ಸಮನ್ವಯಕ ವಿಠೋಬಾ ಮಾಳಸೆಕರ, ಧರ್ಮರಾಜ ಪಾಟೀಲ, ವಿನೋದ ಗಿಂಡೆ, ಜಯಕರ್ನಾಟಕ ಸಂಘಟನೆಯ ವಿಲಾಸ ಕಣಗಲಿ, ರಾಜು ಹುಳಸರ, ಸಂಜು ಶೆಟ್ಟಿ, ಮೋಹಿನಿ ವಂದುರಕರ, ಕಾಂಚನಾ ರಜಪೂತ, ಅಭಿ ಮಸೂರಕರ ಮೊದಲಾದವರಿದ್ದರು.

loading...