ಲೋಕಸಭಾ ಚುನಾವಣೆ ಟಿಕೇಟ್ ಹಂಚಿಕೆ ಸಮನ್ವಯ ಸಮಿತಿಗೆ ಬಿಟ್ಟಿದ್ದು: ಸಚಿವ ಕೃಷ್ಣೆ ಬೈರೆಗೌಡಾ

0
18
loading...

ಲೋಕಸಭಾ ಚುನಾವಣೆ ಟಿಕೇಟ್ ಹಂಚಿಕೆ ಸಮನ್ವಯ ಸಮಿತಿಗೆ ಬಿಟ್ಟಿದ್ದು: ಸಚಿವ ಕೃಷ್ಣೆ ಬೈರೆಗೌಡಾ

ಕನ್ನಡಮ್ಮ ಸುದ್ದಿ- ಬೆಳಗಾವಿ: ಲೋಕಸಭಾ ಚುನಾವಣೆ ಟಿಕೇಟ್ ಹಂಚಿಕೆ ಯಾವ ಪಕ್ಷಕ್ಕೆ ಎಷ್ಟು ಎಂಬುವುದಕ್ಕೆ ತೀರ್ಮಾನಿಸಿಲ್ಲ. ಸಮನ್ವಯ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣೆ ಬೈರೆಗೌಡಾ ಹೇಳಿದರು.

ಅವರು ನಗರದ‌ಪ್ರವಾಸಿ ಮಂದಿರಕ್ಕೆ ಬೆಳಿಗ್ಗೆ 11 ಗಂಟೆಗೆ ಆಗಮಿಸಿ ಮಾತನಾಡಿ, ಲೋಕಸಭಾ ಚುನಾವಣೆಗೆ ಕಾಂಗ್ರಸ್ ಎಷ್ಟು ಟಿಕೇಟ್ ಜೆಡಿಎಸ್ ಗೆ ಎಷ್ಟು ಟಿಕೇಟ್ ಎಂಬುವುದನ್ನು ಇನ್ನು ತೀರ್ಮಾನಿಸಿಲ್ಲ.ಸಮನ್ವಯ ಸಮಿತಿಯಲ್ಲಿ ತಿರ್ಮಾನಿಸಲಾಗುತ್ತದೆ. ಆದರೆ ಹೊಂದಾಣಿಕೆಯಿಂದ ರಾಜ್ಯದ ಕೆಲ ಕ್ಷೇತ್ರಗಳಲ್ಲಿ ಹಿನ್ನಡೆಯಾಗಲಿದೆ ಎಂದರು.

ಮಠಾದೀಶರ ಪ್ರತ್ಯೇಕ ರಾಜ್ಯದ ಕೂಗಿಗೆ ಪ್ರತಿಕ್ರಿಯಿಸಿ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ಬೇದ ಬಾವವಿಲ್ಲ.ನಾವು ಅಖಂಡ ಕರ್ನಾಟಕದವರು ಪ್ರತ್ಯೇಕ ರಾಜ್ಯ ಕೂಗಿನಿಂದ‌ ಸಮಸ್ಯೆಗಳು ಉಲ್ಬಣವಾಗುತ್ತವೆ.ವಿನಹಾ ಸಮಸ್ಯೆ ಪರಿಹಾರವಾಗುವುದಿಲ್ಲ.  ಅಲ್ಲದೆ ಭಾವನೆಗಳನ್ನು ಕೆರಳಿಸುವ ಪ್ರಯತ್ನವಾಗುತ್ತದೆ. ಆದ್ದರಿಂದ ಆಗಿರುವ‌ ತಪ್ಪುಗಳನ್ನು‌ ಸರಿ‌ ಪಡಿಸುವ ಪ್ರಯತ್ನ ಮಾಡೋಣಬೇಕಾಗಿದೆ‌ ಎಂದು ಹೇಳಿದರು.

loading...