ವಚನ ಸಾಹಿತ್ಯದ ಉಳಿವಿಗೆ ಹಗಲಿರುಳು ಶ್ರಮಿಸಿದವರು ಹಳಕಟ್ಟಿ

0
22
loading...

ಆಲಮಟ್ಟಿ: ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರಲ್ಲಿ ಗುಣಗ್ರಾಹಿತ್ವ-ಸಮಾಜ ಕಳಕಳಿ ಅಪಾರ. ವಚನಗಳ ಪರಿಮಳಯುಕ್ತ ಚಿಂತನೆ ಆಗಾಧ. ಸಾಹಿತ್ಯ ಹಾಗೂ ಸಾಂಸ್ಕ್ರತಿಕ ಪ್ರಜ್ಞೆಯನು ಸಾಕ್ಷಿಕರಿಸಿ ವಚನಾಭಿರುಚಿ ಜನತೆಯಲ್ಲಿ ಮೂಡಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯ ಬಿ.ಎನ್‌.ಗುಣದಾಳ ಅಭಿಪ್ರಾಯಿಸಿದರು.
ಸ್ಥಳೀಯ ಆರ್‌.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ 138ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು. ಶರಣ ಸಂಸ್ಕೃತಿಯ ಇತಿಹಾಸದಲ್ಲಿ ಬೆರೆತು ಹೋಗಿರುವ ಈ ಮಹಾಚೇತನ ಆದರ್ಶ ಶರಣ ಸಂಸ್ಕೃತಿಯ ಹರಿಕಾರರಾಗಿದ್ದಾರೆ. ಬಸವಾದಿ ಶರಣರ ವಚನಸಾರ-ವಚನ ಗ್ರಂಥಗಳು ಪುಣ್ಯಾತ್ಮ ಹಳಕಟ್ಟಿಯವರಿಂದ ಪುನರುಜ್ಜೀವನ ಪಡೆದಿವೆ. ವಚನಗಳ ಅನುವಾದದ ಕೈಂಕರ್ಯಕ್ಕೆ ಶ್ರೀಕಾರ ಹಾಕಿದವರಲ್ಲಿ ಮೊದಲಿಗರಾಗಿರುವ ಅವರು ವಚನಗಳ ಮೌಲಿಕತೆಯು ವಿಶ್ವಕ್ಕೆ ತಿಳಿಸಿಕೊಟ್ಟಿದ್ದಾರೆ. ಉತ್ಕಟ ಇಚ್ಛೆಯ ಸಾಮಾನ್ಯವ್ಯಕ್ತಿ ಅಸಾಮಾನ್ಯರಾಗಿ ಮರೆಯಾಗಿ ಜನಮಾನಸದಲ್ಲಿ ಇಂದಿಗೂ ನೆಲೆಯೂರಿದ್ದಾರೆ. ಕಾರಣ ವಚನಗಳ ಮೂಲಕವೇ ಜನರಲ್ಲಿ ಹೊಸತನದ ಅರಿವು ಮೂಡಿಸಲು ಹಗಲಿರುಳು ತಡಕಾಡಿ ಶ್ರಮಿಸಿರುವುದು. ವಚನಸಾಹಿತ್ಯಕ್ಕೆ ತಮ್ಮನ್ನು ತಾವು ಅರ್ಪಿತರಾಗಿ ಕ್ರಿಯಾಶಿಲತೆಯಿಂದ ಕಾಯಕ ನಿರ್ವಹಿಸಿರುವ ಹಳಕಟ್ಟಿಯವರಸೇವೆ ಅನನ್ಯ ಅಲ್ಲದೇ ಸದಾಕಾಲಕ್ಕೂ ಸ್ಮರಣಾರ್ಹರು ಎಂದು ಗುಣದಾಳ ಹಳಕಟ್ಟಿಯವರು ವ್ಯಕ್ತಿತ್ವ ಬಣ್ಣಿಸಿದರು.
ಗುಪ್ತ ನಿಧಿಯಂತೆ ಭೂಮಿಯೊಳಗೆ ಹುದುಗಿಟ್ಟದ ವಚನ ಸಾಹಿತ್ಯವನ್ನು ಅಂಜನಸಿದ್ದರಾಗಿ ಡಾ.ಹಳಕಟ್ಟಿಯವರು ಹೊರತಗೆದಿದ್ದಾರೆ. ಅವರೊಬ್ಬ ಶ್ರೇಷ್ಠ ಅನುಭಾವ ಸಂಪತ್ತಿನ ಒಡೆಯರಾಗಿದ್ದಾರೆ ಎಂದು ಹೇಳಿದವರು ಮಠಮಾನ್ಯಗಳ ಕತ್ತಲು ಕೋಣೆಗಳಲ್ಲಿ, ಭಕ್ತರ ಮನೆಯ ಜಗುಲಿ-ಮಾಡು-ಸಂದೂಕುಗಳಲಿ ನಶಿಸಿ ಹೋಗುತ್ತಿದ್ದ ಶರಣರ ಅಮೂಲ್ಯ ವಚನ ನಿಧಿಯನ್ನು ಪತ್ತೆ ಮಾಡಿ ಕನ್ನಡ ನಾಡಿಗೆ ನೀಡಿರುವುದರಿಂದ ವಚನಗಳು ಇಂದು ಜೀವಂತವಾಗಿ ನೋಡಲು-ಕೇಳಲು ಲಭ್ಯವಾಗಿವೆ ಕಾರಣ ಇಂತಹ ವಿಶ್ವಮಾನ್ಯ ವ್ಯಕ್ತಿಯ ಬದುಕು-ಸಾಧನೆಯ ವಿಚಾರಧಾರೆಗಳು ಇಂದಿನ ನಮ್ಮ ಯುವಪೀಳಿಗೆಗೆ ತಿಳಿಸುವ ಕೊಡುವುದು ಅವಶ್ಯಕವಾಗಿದೆ ಎಂದು ಬಿ.ಎನ್‌.ಗುಣದಾಳ ನುಡಿದರು.
ಹಿರಿಯ ಶಿಕ್ಷಕ ಎಸ್‌.ಐ.ಗಿಡ್ಡಪ್ಪಗೋಳ.ಫ.ಗು.ಹಳಕಟ್ಟಿ ಅವರು ಶರಣರ ಜೀವನದ ಮೌಲ್ಯಗಳುಳ್ಳ ಗ್ರಂಥಗಳನ್ನು, ಪ್ರಾಚೀನ ಕಾಲದ ಹಳೆಯ ಅಪಾರ ಸಂಖ್ಯೆಯ ತಾಡೋಲೆಗಳನ್ನು ಸಮಗ್ರವಾಗಿ ಅಧ್ಯಯನಗೈದು ಬಳಿಕ ಪರಿಷ್ಕರಿಸಿ ತಮ್ಮದೆ ಕೈ ಬರಹದಿಂದ ಅಮೂಲ್ಯ ವಚನನಿಧಿಗಳನ್ನು ತಯಾರಿಸಿ ಸಮಾಜಕ್ಕೆ ನೀಡಿರುವುದು ಸ್ಮರಣೀಯವಾಗಿದೆ ಎಂದರು.
ಎಸ್‌.ಎಚ್‌.ನಾಗಣಿ, ಸಮಾಜಮುಖಿ ಕಾರ್ಯಕ್ಕೆ ಸದಾ ಹಳಕಟ್ಟಿಯವರು ಹಂಬಲಿಸುತ್ತಿದ್ದರು. ವಚನಮಾತೆಗಾಗೆ ಇಡೀ ತಮ್ಮ ಬದುಕನ್ನೆ ಮೀಸಲಿಟ್ಟು ವಚನ ಭಂಡಾರವನ್ನು ಉಳಿಸಿದ್ದಾರೆ ಎಂದರು.
ಈ ವೇಳೆ ಜಿ.ಆರ್‌. ಜಾಧವ, ರಾಜಕುಮಾರ ರಾಠೋಡ, ಬಿ.ಪಿ ಲಮಾಣೀ, ಫಕ್ಕೀರಪ್ಪ ನಾಯ್ಕರ, ಗೋಪಾಲ ವಡ್ಡರ ಮೊದಲಾದವರು ಉಪಸ್ಥಿತರಿದ್ದರು.
ನೇತ್ರಾ, ರಂಜನಿ ಸಂಗಡಿಗರು ಪ್ರಾರ್ಥಿಸಿದರು. ಎಸ್‌.ಆಯ್‌.ಗಿಡ್ಡಪ್ಪಗೋಳ ಸ್ವಾಗತಿಸಿದರು. ಆರ್‌.ಪಿ.ಸಂತರ ನಿರೂಪಿಸಿದರು. ಎಸ್‌.ಎಚ್‌.ನಾಗಣಿ ವಂದಿಸಿದರು.

loading...