ವನಮಹೋತ್ಸವ ಪ್ರತಿಯೊಬ್ಬರ ಮನೆಯಲ್ಲಿ ಹಬ್ಬವಾಗಲಿ: ಸುಜಾತಾ

0
6
loading...

ಕನ್ನಡಮ್ಮ ಸುದ್ದಿ-ಶಿಗ್ಗಾವಿ: ಅಭಯಾರಣ್ಯಗಳು ಮನುಷ್ಯನ ದುರಾಸೆಗೆ ಹಾಗೂ ಬೆಂಕಿಗೆ ಆಹುತಿಯಾಗಿ ಬರಿದಾಗುತ್ತಿವೆ ಇದರಿಂದ ಜಗತ್ತು ಪ್ರಕೃತಿ ವಿಕೋಪಗಳಿಂದ ಅಲ್ಲೋಲ ಕಲ್ಲೋಲವಾಗುತ್ತಿದೆ ಎಲ್ಲರೂ ಜಗೃತರಾಗಿ ವನಮಹೋತ್ಸವ ಪ್ರತಿಯೊಬ್ಬರ ಮನೆಯಲ್ಲಿ ಹಬ್ಬವಾಗಬೇಕು ಅಂದಾಗ ಮಾತ್ರ ಪ್ರಕೃತಿ ನಮಗೆ ಪ್ರತಿಕೂಲವಾಗುತ್ತದೆ ಎಂದು ನವೋದಯ ಗ್ರಾಮ ವಿಕಾಸ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್‌ ಅಧ್ಯಕ್ಷ ಸುಜಾತಾ ಕಲ್ಕಟ್ಟಿ ಹೇಳಿದರು.
ತಾಲೂಕಿನ ಚಂದಾಪೂರ ಗ್ರಾಮದಲ್ಲಿ ನವೋದಯ ಗ್ರಾಮ ವಿಕಾಸ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ, ಕನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಚಂದಾಪುರ, ಹಿರಿಯ ಪ್ರಾಥಮಿಕ ಶಾಲೆ, ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ದಿ ಸಂಸ್ಥೆ, ನೀಡ್‌ ಸಂಸ್ಥೆ ರಾಣೆಬೆನ್ನೂರ, ಹಾಗೂ ಗ್ರಾಮಸ್ತರ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಸಸಿ ನೆಡುವುದು ಹಾಗೂ ಪಾಲನೆ ಪೋಷಣೆಗೆ ಕಡ್ಡಾಯ ಕಾನೂನು ರೂಪಿಸಬೇಕು. ಸಕಾರಿ ಸೌಲಭ್ಯಗಳು, ಪಡಿತರ ವ್ಯವಸ್ತೆ ಸಸಿ ನೆಟ್ಟವರಿಗೆ ಮಾತ್ರ ದೊರಕುವಂತಾಗಬೇಕು ಅಂದಾಗ ಮಾತ್ರ ಗಿಡ, ಮರಗಳು ಹೆಚ್ಚಾಗಿ ಪರಿಸರ ನಮಗೆ ಪ್ರತಿಕೂಲವಾಗುತ್ತದೆ. ಸರ್ಕಾರ ಇಗಾಗಲೆ ಕೃಷಿ ಅರಣ್ಯಿಕರಣಕ್ಕೆ ಪ್ರೋತ್ಸಾಹದನ ನೀಡುತ್ತದೆ ಎಲ್ಲರೂ ತಮ್ಮ ಹೊಲಗಳಲ್ಲಿ ಸಸಿ ನೆಟ್ಟು ಸರ್ಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಕರಿಬಸಪ್ಪ ಜಟ್ಟೆಪ್ಪನವರ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟನೆಯನ್ನು ತಾಪಂ ಸದಸ್ಯ ಶಾಮತಮ್ಮ ಹಿರೇಮಠ ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಯ ಎಸ್‌.ಬಿ.ಬೆಳಗಲಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೆ ಮೊದಲು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಹಸಿರು ಸೇನೆ ಅಧ್ಯಕ್ಷರು ಪದಾಧಿಕಾರಿಗಳು, ಗ್ರಾಮದಲ್ಲಿ ಜಾಥಾ ಮೂಲಕ ಸರ್ಕಾರಿ ಆಸ್ಪತ್ರೆ, ಶಾಲಾ ಮತ್ತು ಪಂಚಾಯತಿ ಆವರಣಗಳಲ್ಲಿ ಸಸಿ ನೆಟ್ಟರು.
ಪರಶುರಾಮ ಜಟ್ಟೆಪ್ಪನವರ, ಕನಾಟಕರಾಜ್ಯ ರೈತ ಸಂಘ ಹಸಿರುಸೇನೆ ತಾಲೂಕ ಅಧ್ಯಕ್ಷ ಮುತ್ತು ಗುಡಗೇರಿ, ಜಿಲ್ಲಾ ಸಂಚಾಲಕ ಪಂಚಯ್ಯ ಹಿರೇಮಠ, ಶಿವು ಗುಡ್ಡಣ್ಣವರ, ನವೋದಯ ಗ್ರಾಮ ವಿಕಾಸ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಉಪಾಧ್ಯಕ್ಷ ನಿಂಬವ್ವ ಗೋಣೆಪ್ಪನವರ, ಸದಸ್ಯರಾದ ಯಲ್ಲವ್ವ ಡಾವಣಗೇರಿ, ಶೋಭಾ ಶಾಬಣ್ಣವರ, ಪಂಚಾಯತ ಅಭಿವೃದ್ದಿ ಅಧಿಕಾರಿ ವಿರೇಶ ಆವಾರಿ, ನಿಸಾರಮ್ಮದ ಮುಳಕೇರಿ, ಮಾರ್ತಂಡಪ್ಪ ಲಕ್ಕಿಕೊಪ್ಪ, ಚನ್ನಬಸಪ್ಪ ಚಕ್ರಸಾಲಿ, ಶಿವಾನಂದ ಮನ್ನಂಗಿ, ಜಗದೀಶ ಕೋಟಿ, ಬಿ.ಎಸ್‌.ಬೂವಣ್ಣವರ, ರೇಣುಕಗೌಡ ಪಾಟೀಲ, ಬ್ಯಾಂಕ್‌ ಸಿ.ಇ.ಒ ಗಂಗಮ್ಮ ಬಾಡದ, ಯೋಜನಾಧಿಕಾರಿ ಗುಡ್ಡಪ್ಪ ಮರಾಠೆ, ವ್ಯವಸ್ಥಾಪಕ ಕರಬಸಪ್ಪ ದೇವಗಿರಿ, ಸಿಬ್ಬಂದಿಗಳು, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

loading...