ವಿದ್ಯಾರ್ಥಿಗಳಿಂದ ಅಭಿವೃದ್ಧಿ ಶುಲ್ಕ ವಸೂಲಿ: ಖಂಡನೆ

0
17
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ; ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕಾಲೇಜು ಅಭಿವೃದ್ಧಿ ಸಮಿತಿಯ ಒಪ್ಪಿಗೆ ಪಡೆಯದೇ ಯಾವುದೇ ರೀತಿಯ ಪ್ರೋಸಿಡಿಂಗ್‌ ಮಾಡದೇ ಪ್ರತಿ ವಿದ್ಯಾರ್ಥಿಗಳಿಂದ 300 ರೂಪಾಯಿಯಂತೆ ಆಭಿವೃದ್ಧಿ ಶುಲ್ಕ ವಸೂಲಿ ಮಾಡಿದ ಘಟನೆ ಜರುಗಿದೆ.
ಇದರ ಬಗ್ಗೆ ಸೋಮವಾರ ಕಾಲೇಜಿಗೆ ಭೇಟಿ ನೀಡಿದ ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಪಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಾಗರಾಜ ಲಕ್ಕುಂಡಿ, ರಾಜೀವ ಶಿರಹಟ್ಟಿ, ಮುತ್ತಿರಾಜ ಭಾವಿಮನಿ, ಸುದೀರ ಜಮಖಂಡಿ, ಅನೀಲ ಮಾನೆ, ಸರಕಾರಿ ಕಾಲೇಜಿಗೆ ಹೆಚ್ಚನ ಸಂಖ್ಯೆಯಲ್ಲಿ ರೈತರ, ಬಡ ಜನರ ಮಕ್ಕಳು ಪ್ರವೇಶ ಪಡೆಯತ್ತಿದ್ದು ಕಳೆದ ನಾಲ್ಕೈದು ವರ್ಷಗಳಿಂದ ತಾಲೂಕಿನಾದ್ಯಂತ ಬರಗಾಲ ಆವರಿಸಿದ್ದು ಇಂತಹದರಲ್ಲಿ ಪ್ರತಿ ವಿದ್ಯಾರ್ಥಿಯಿಂದ 300 ರೂಪಾಯಿ ಅಭಿವೃದ್ಧಿ ಶುಲ್ಕ ಪಡೆದಿರುವುದು ಖಂಡನೀಯವಾಗಿದ್ದು ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಇಲ್ಲದಿದ್ದರೇ ಗದಗ ಪದವಿ ಪೂರ್ವ ಕಾಲೇಜ ಉಪನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ತ್ವರಿತವಾಗಿ ನೂತನ ಕಟ್ಟಡ ಕಾಮಗಾರಿ ಮುಗಿಸಿ ಕಳೆದ ಮೂರಾನ್ಕು ವರ್ಷಗಳಿಂದ ಪಟ್ಟಣದ ಹೊರವಲಯದಲ್ಲಿ ನಿರ್ಮಿಸುತ್ತಿರುವ ಸರಕಾರಿ ಪದವಿ ಪೂರ್ವ ಕಾಲೇಜಿ ಕಟ್ಟಡದ ಮೂರಾನಾಲ್ಕು ಕೊಠಡಿಗಳ ಕಾಮಗಾರಿಯನ್ನು ತವರಿತವಾಗಿ ಮುಗಿಸುವಂತೆ ಸಂಬಂದಿಸಿದ ನಿರ್ಮಿತಿ ಕೇಂದ್ರದ, ಹಾಗೂ ಪಂಚಾಯತ ರಾಜ ಇಂಜನಿಯರಿಂಗ ಅಭಿಯಂತರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಈಗ ಕಾಲೇಜು ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾತಮಿಕ ಶಾಲೆಯಲ್ಲಿ ನಡೆಯುತ್ತಿದ್ದು. ಅಲ್ಲಿ ಸರಿಯಾದ ಸೌಲಭ್ಯವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ ಆದಷ್ಟು ತ್ವರಿತವಾಗಿ ಕಾಮಗಾರಿಗಳನ್ನು ಮುಗಿಸುವಂತೆ ಹೇಳಿದರು.

loading...