ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹ

0
20
loading...

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹ

ಕನ್ನಡಮ್ಮ ಸುದ್ದಿ ಬೆಳಗಾವಿ: ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಅಖಿಲ ಕರ್ನಾಟಕದ ಸ್ವಯಂ ಪ್ರೇರಿತ ಶಾಲಾ ಮತ್ತು ಕಾಲೇಜ ವತಿಯಿಂದ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸ್ಥಳೀಯ ರಾಣಿ ಚನ್ಮಮ್ಮಾ ವೃತದ ಬಳಿ ಎಲ್ಲಾ ಶಾಲಾ ವಿದ್ಯಾರ್ಥಿಗಳು ಮಾನವ ಸರಪಳಿ ಕೈಗೊಂಡು ಪ್ರತಿಭಟನೆ ನಡೆಸಿ ಮನವಿ ಮಾಡಿಕೊಂಡರು.
ಹಿಂದಿನ ಸರಕಾರ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್ ನೀಡಿ ಅನುಕೂಲ ಮಾಡಿತ್ತು.ಆದರೆ ಸಮ್ಮಿಶ್ರ ಸರಕಾರದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಕಡೆಗಣಿಸುತ್ತಿದೆ. ಶಾಲೆ ಪ್ರಾರಂಭವಾಗಿ ಎರಡು ತಿಂಗಳಾದರೂ ರಾಜ್ಯ ಸರಕಾರ ಬಡ ವಿದ್ಯಾರ್ಥಿಗಳ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ.
ಕೊನೆ ಪಕ್ಷ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಗೆ ಮಾತ್ರ ಉಚಿತ ಪಾಸ್ ಕೋಡಬೇಕು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹತ್ತಾರೂ ಸಲ ಮನವಿ ಸಲ್ಲಿಸಲಾಗಿದೆ ಯಾವ ಅಧಿಕಾರಗಳು ನಮಗೆ ಸ್ಪಂದಿಸುತ್ತಲ್ಲ.
ವಿದ್ಯಾರ್ಥಿಗಳ ಮಾತನ್ನು ನಿರ್ಲಕ್ಷ್ಯಸಿದರೆ ಮತ್ತೆ ಉಗ್ರ ಹೋರಾಟ ಮಾಡಿ ಸಮ್ಮಿಶ್ರ ಸರ್ಕಾರಕ್ಕೆ ತಕ್ಕ ಪಾಠ ಕಳಿಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿ ದರು.

loading...