ವಿದ್ಯಾರ್ಥಿಗಳಿಗೆ ಕೈಗಾರಿಕೆಗಳ ತರಬೇತಿ ಅವಶ್ಯ

0
4
loading...

ಕನ್ನಡಮ್ಮ ಸುದ್ದಿ-ಧಾರವಾಡ: ಕಾಲೇಜುಗಳಲ್ಲಿ ಕಲಿಯುವ ಶಿಕ್ಷಣ ಜೀವನ ಸಾಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಲ್ಲಿ ತರಬೇತಿ ಅವಶ್ಯ ಎಂದು ಜೆ.ಎಸ್.ಎಸ್ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಹೇಳಿದರು.
ಜೆ.ಎಸ್.ಎಸ್ ಮಂಜುನಾಥೇಶ್ವರ ಐ.ಟಿ.ಐ ಹಾಗೂ ಹುಬ್ಬಳ್ಳಿಯ ಪಾಟೀಲ್ ಇಲೆಕ್ಟ್ರಿಕ್ ವಕ್ರ್ಸ ಪ್ರೈ. ಲಿ ಜಂಟಿಯಾಗಿ ಉದ್ಯೋಗ ಹಾಗೂ ತರಬೇತಿಗಾಗಿ ಮಾಡಿಕೊಂಡ ಒಪ್ಪಂದಕ್ಕೆ ಸಹಿ ಮಾಡಿ ಮಾತನಾಡಿದರು. ತಾಂತ್ರಿಕ ಜ್ಞಾನ ವಿದ್ಯಾರ್ಥಿಗಳಿಗೆ ದೊರೆಯಬೇಕಾದರೆ. ಪಠ್ಯದ ಜೊತೆಗೆ ದೈನಂದಿನ ತಾಂತ್ರಿಕ ಬೆಳವಣಿಗೆಯ ಜ್ಞಾನ ಅತಿ ಅವಶ್ಯ. ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಯ ದಲ್ಲಿ ವಿದ್ಯುತ್ ವಿಭಾಗದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಓದಿನ ನಂತರ ಪಾಟೀಲ್ ಇಲೆಕ್ಟ್ರಿಕಲ್ಸ್‍ನಲ್ಲಿ 1 ವರ್ಷ ಇಂಟರ್ನ್‍ಶಿಪ್ ತರಬೇತಿ ಕಡ್ಡಾಯವಾಗಿರುತ್ತದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ದೊರೆಯುತ್ತದೆ ಎಂದರು. ಇಲೆಕ್ಟ್ರಿಕಲ್ ವಕ್ರ್ಸ ಪ್ರೈ.ಲಿ ನ ನಿರ್ದೇಶಕ ಪ್ರಸಾದ ಪಾಟೀಲ್ ಮಾತನಾಡಿ, ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸಲು ಕುಶಲಕರ್ಮಿಗಳು ಸಿಗುತ್ತಿಲ್ಲ ಈ ನಿಟ್ಟಿನಲ್ಲಿ ಕೈಗಾರಿಕೆಗಳು ಕಾಲೇಜುಗಳ ಜೊತೆ ಒಡಂಬಡಿಕೆ ಮಾಡಿಕೊಂಡಾಗ ಈ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.
ವಿಕಾಸ ಪುರೋಹಿತ್, ಮಹಾವೀರ ಉಪಾದ್ಯೆ, ಶೋಭಾ ಕಮ್ಮಾರ, ವಿದ್ಯಾ ಹಿರೇಮಠ ಉಪಸ್ಥಿತರಿದ್ದರು.

loading...