ವಿದ್ಯಾರ್ಥಿಗಳಿಗೆ ಶಿಸ್ತಿನ ವಿದ್ಯಾಭ್ಯಾಸ ಅವಶ್ಯ: ಸಿಇಒ

0
12
loading...

ಬೆಳಗಾವಿ: ವಿದ್ಯಾರ್ಥಿಗಳು ಪರಿಪೂರ್ಣ ಭವಿಷ್ಯಕ್ಕಾಗಿ ಶಿಸ್ತಿನ ವಿದ್ಯಾಭ್ಯಸ ಅವಶ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಗರದ ಪೀರನ್ವಾಡಿ ಕೀಲೋಸ್ ಪಬ್ಲಿಕ್ ಶಾಲೆಯಲ್ಲಿ `ಕೆಎಲ್‌ಎಸ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಸತ್ ರಚಿಸಿ ಪದವಿ ಪ್ರದಾನ ಮಾಡಿ ಮಾತನಾಡಿದವರು, ಇಂದಿನ ವಿದ್ಯಾರ್ಥಿಗಳು ನಮ್ಮ ನಾಳಿನ ಭವಿಷ್ಯದ ನಾಯಕರು ಆದರಿಂದ ವಿದ್ಯಾರ್ಥಿಗಳು ಒಂದು ನಿಧಿಷ್ಟ ಗುರಿಗಳನ್ನು ಇಟ್ಟಿಕೊಂಡು ಆ ಗುರಿ ಮಟ್ಟುವರಿಗೂ ಸತತವಾಗಿ ಪ್ರಯತ್ನ ಮಾಡಬೇಕು ಎಂದರು.
ಶಾಸಕ ಅಭಯ್ ಪಾಟೀಲ್ ಮಾತನಾಡಿದರು.
ತವಿಶಾ ಜೈಸ್ವಾಲ್ ಉತ್ತಮ ನಾಳೆ ಒಂದು ನಿರ್ದಿಷ್ಟ ಬದಲಾವಣೆಗೆ ಭರವಸೆ ನೀಡಿ ಇದರ ನಂತರ ಇಡೀ ಕೌನ್ಸಿಲ್ ಪ್ರಾಮಾಣಿಕತೆಯೊಂದಿಗೆ ತಮ್ಮ ಕರ್ತವ್ಯಗಳನ್ನು ಮಾಡುವುದಾಗಿ ಪ್ರತಿಜ್ಞೆ ಮಾಡಿ ಪ್ರತಿಯೊಬ್ಬರ ನಿರೀಕ್ಷೆಗಳನ್ನು ಪೂರ್ಣಗೊಳ್ಳಿಸುತ್ತವೆ ಎಂದರು.
ಅಧ್ಯಕ್ಷ ಪಿ.ಜೋಷಿ ವಿದ್ಯಾರ್ಥಿ ಪ್ರಧಾನ ಮಂತ್ರಿ ಶಾಲಿನಿ ಸಂಕ್ರೋನಿ, ಪೋಷಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

loading...