ವಿದ್ಯಾರ್ಥಿಗಳು ತಂತ್ರಜ್ಞಾನಕ್ಕೆ ತಕ್ಕಂತೆ ಬೆಳೆಯಬೇಕು : ಹಿರೇಮಠ

0
21
loading...

ವಿದ್ಯಾರ್ಥಿಗಳು ತಂತ್ರಜ್ಞಾನಕ್ಕೆ ತಕ್ಕಂತೆ ಬೆಳೆಯಬೇಕು : ಹಿರೇಮಠ

ಕನ್ನಡಮ್ಮ ಸುದ್ದಿ-ಬೆಳಗಾವಿ: ವಿದ್ಯಾರ್ಥಿಗಳು ಈಗಿನ ತಂತ್ರಜ್ಞಾನ ತಕ್ಕಂತೆ ಬೆಳೆಯಲು ಒಳ್ಳೆಯ ಕೋರ್ಸ’ಗಳನ್ನು ಆಯ್ಕೆ ಮಾಡಿಕೊಂಡು, ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಮಾಡಿಕೊಂಡು ಕಾಲಕ್ಕೆ ತಕ್ಕಂತೆ ಎಸ್.ಪಿ ಹಿರೇಮಠ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಸ್ಥಳೀಯ ಶಿವಬಸವ ನಗರದ ಆರ್ ಎನ್ ಶೇಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಸಭಾ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ಪಾಲಕರ ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಾಲ ತಕ್ಕಂತೆ ಬದಲಾಗಿ ತಮ್ಮ ಜೀವನದಲ್ಲಿ ಗುರಿಯನ್ನು ಮುಟ್ಟಬೇಕೆಂದು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಮಂಜುಳಾ ಅವರು ಮಾತನಾಡಿ ಒಬ್ಬ ವಿದ್ಯಾರ್ಥಿ ತಂದೆ-ತಾಯಿಗಳಿಗೆ ಎಷ್ಟೋ ಗೌರವ ಕೊಡುತ್ತಾರೆ ಅದೇ ರೀತಿ ಗೌರವ ಕಲಿಸಿದ ಗುರುಗಳಿಗೆ ಕೊಡಬೇಕು. ಗುರುಗಳು ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಮಹತ್ವ ಪಾತ್ರ ವಹಿಸಿರುತ್ತಾರೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಪಿಸಿ ಹಲಗೇಕರ, ಪ್ರಮೋದ ಉಳಾಗಡ್ಡಿ, ಹಾಗೂ ಉಪಸ್ಥಿತರಿದ್ದರು. ಯಮುನಾ ಸಾಗರ ಸ್ವಾಗತಿಸಿದರು. ಗಣೇಶ ಚಿತ್ತಾನಿಶ್ ನಿರೂಪಿಸಿ ವಂದಿಸಿದರು.

loading...