ವಿದ್ಯಾರ್ಥಿಗಳು ಸವಾಲು ಎದುರಿಸಲು ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು: ನಾಯ್ಕ

0
9
loading...

ಕನ್ನಡಮ್ಮ ಸುದ್ದಿ-ಕುಮಟಾ: ಶಾಲೆಯಲ್ಲಿ ಫೇಲಾದರೆ ಅದು ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರೇರಣ ನೀಡುವ ಬದಲು ಆತ್ಮ ಸ್ಥೈರ್ಯ ಬೆಳೆಸಿಕೊಳ್ಳಲು ಮೂಲವಾಗಬೇಕು ಎಂದು ಪತ್ರಕರರ್ತ ಎಂ ಜಿ ನಾಯ್ಕ ಹೇಳಿದರು.
ಅವರು ಗುರುವಾರ ಪಟ್ಟಣದ ಗಿಬ್‌ ಬಾಲಕೀಯರ ಪ್ರೌಢ ಶಾಲೆಯ ವಿದ್ಯಾರ್ಥಿಗಳ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿ, ನಿಸ್ವಾರ್ಥ ಗುಣ ಹಾಗೂ ಸರಳತೆಯೇ ಮಾಹಾತ್ಮಾ ಗಾಂಧೀಜಿ ಅವರು ರಾಷ್ಟ್ರಪಿತನ ಸ್ಥಾನಕ್ಕೇರಲು ಕಾರಣವಾಯಿತು. ಶುಚಿತ್ವ, ಸರಳತೆ, ಗ್ರಾಮಾಭಿವೃದ್ಧಿ, ಮಹಿಳಾ ಸ್ವಾತಂತ್ರ್ಯಕ್ಕೆ ಗಾಂಧೀಜಿ ಆಗಲೇ ಆದ್ಯತೆ ನೀಡಿದರು. ಹಾಗಾಗಿ ಅವರ ನಿಲುವು, ತತ್ವಗಳು ಎಲ್ಲ ಕಾಲಕ್ಕೂ ಪ್ರಸ್ತುತ. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಇಲ್ಲದಿದ್ದರೆ ಕಠಿಣ ಸವಾಲುಗಳನ್ನು ಎದುರಿಸಿ ಎತ್ತರಕ್ಕೇರಲು ಸಾಧ್ಯವಾಗದು. ತಾವು ಕಲಿತ ಶಾಲೆಯ ಇತಿಹಾಸ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಗೊತ್ತಿರಬೇಕು ಎಂದರು.
ಶಾಲೆಯ ಮುಖ್ಯಾಧ್ಯಾಪಕಿ ನೀರಜಾ ನಾಯಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಕನ್ನಡ, ಇಂಗ್ಲೀಷ್‌, ಹಿಂದಿ, ವಿಜ್ಞಾನ, ಸಾಂಸ್ಕೃತಿಕ ಹಾಗೂ ಗಣಿತ ಸಂಘಗಳು ವಿದ್ಯಾರ್ಥಿಗಳು ಆಯಾ ವಿಷಯಗಳಲ್ಲಿ ಪ್ರಾವಿಣ್ಯತೆ ಪಡೆಯಲು ನೆರವಾಗುತ್ತದೆ. ಯಾವುದೇ ಭಾಷೆ ಸಂವಹನ ಕೌಶಲ್ಯದಿಂದ ಮುಂದೆ ಶೈಕ್ಷಣಿಕ ಸವಾಲು ಎದುರಿಸಲು ಅನಕೂಲವಾಗುತ್ತದೆ ಎಂದರು.
ಶಾಲೆಯ ಕನ್ನಡ ಸಂಘದ ಪವಿತ್ರಾ ಹೆಗಡೆ, ಇಂಗ್ಲೀಷ್‌ ಸಂಘದ ಲೀನಾ ಪಟಗಾರ, ಹಿಂದಿ ಸಂಘದ ಮಂದಾರ ಗುನಗನಕೊಪ್ಪ, ಗಣಿತ ಸಂಘದ ಚೇತನಾ ಭಟ್‌, ವಿಜ್ಞಾನ ಸಂಘದ ಸಿಮ್ನಾನ್‌ ಬೇಗ್‌, ಸಮಾಜ ವಿಜ್ಞಾನ ಸಂಘದ ಹರ್ಷಿತಾ ಪಟಗಾರ, ಕ್ರೀಡಾ ಸಂಘದ ತಾರಾ ಮುಕ್ರಿ, ಕರಕುಶಲ ಸಂಘದ ಯೋಗಿತಾ ನಾಯ್ಕ ಹಾಗೂ ಪರಿಸರ ಸಂಘದ ಹರ್ಷಿತಾ ಗೌಡ ಮಾತನಾಡಿದರು. ಶಿಕ್ಷಕರಾದ ಗೀತಾ ಪೈ ಸ್ವಾಗತಿಸಿದರು. ಉದಯ ನಾಯ್ಕ ನಿರೂಪಿಸಿದರು. ಪಾಂಡುರಂಗ ವಾಗ್ರೇಕರ್‌ ವಂದಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ತಯಾರಿಸಿದ್ದ ಕರಕುಶಲ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

loading...