ವಿದ್ಯುತ್‌ ತಗುಲಿ ರೈತ ಸಾವು

0
6
loading...

ಹಾನಗಲ್ಲ: ಜಮೀನಿನಲ್ಲಿನ ಕೊಳವೆ ಬಾವಿ ಚಾಲು ಮಾಡಲು ಹೋದಾಗ ಸ್ಟಾರ್ಟರ್‌ನಲ್ಲಿ ಆಕಸ್ಮಿಕವಾಗಿ ವಿದ್ಯುತ್‌ ಪ್ರವಹಿಸಿ ರೈತನೋರ್ವ ಸ್ಥಳದಲ್ಲಿಯೇ ಮೃತÀಪಟ್ಟಿದ್ದಾನೆ.
ಹಾನಗಲ್ಲ ಪಟ್ಟಣದ ವಿವೇಕಾನಂದನಗರದ ನಿವಾಸಿ ಗುರುರಾಜ ಡಿ.ಬೆಟಗೇರಿ ಮೃತ ದುರ್ದೈವಿ. ರವಿವಾರ ಬೆಳಗ್ಗೆ 8.40 ಗಂಟೆ ಸುಮಾರಿಗೆ ಪಟ್ಟಣದ ಹೊರವಲಯದ ಹಳೆಕೋಟಿ ಸಮೀಪದ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ. ಗುರುರಾಜ ಬೆಟಗೇರಿ ರಾಘವೇಂದ್ರ ಆಗ್ರೋ ಟ್ರೇಡರ್ಸ್‌ ಮಾಲೀಕನಾಗಿದ್ದಾನೆ. ಮೃತನ ಪತ್ನಿ ರೇಷ್ಮಾ ಆರ್‌.ಬೆಟಗೇರಿ ದೂರು ನೀಡಿದ್ದು, ಹಾನಗಲ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...