ವಿಧಾನಸೌಧಕ್ಕೆ ಮಠ ಬರುತ್ತೆ,ಮಠಕ್ಕೆ ವಿಧಾನಸೌಧ ಹೋಗುತ್ತೆ.. ಟೈಮ್ ಬಂದಾಗ ಮಾತನಾಡುವೆ

0
17
loading...

ಬೆಂಗಳೂರು:ಇಂದಿನ ರಾಜಕೀಯ ಬೆಳವಣಿಗೆ ಬಗ್ಗೆ ಏನೂ ಮಾತನಾಡಬಾರದೆಂದು ತೀರ್ಮಾನಕ್ಕೆ ಬಂದಿದ್ದೆÃನೆ. ಹಾಗಂತ ರಾಜಕೀಯ ನಿವೃತ್ತಿ ನಿರ್ಧಾರಕ್ಕೆ ಬಂದಿಲ್ಲ. ಈ ಸನ್ನಿವೇಶದಲ್ಲಿ ರಾಜಕೀಯ ಮಾತನಾಡಬಾರದೆಂದು ನಿರ್ಧರಿಸಿದ್ದೆÃನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಮಾರ್ಮಿಕವಾಗಿ ಹೇಳಿದರು.
ಪ್ರೆಸ್ ಕ್ಲಬ್ ಆಫ್ ಬೆಂಗಳೂರು ವತಿಯಿಂದ ಇಂದು ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಂಭ್ರಮ ವಿಚಾರಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ದೇವೇಗೌಡರು, ನಾನು ಸದ್ಯ ಯಾವುದೇ ರಾಜಕೀಯ ವಿಷಯ ಕುರಿತು ಮಾತನಾಡಲ್ಲ. ಸಂದರ್ಭ ಬಂದಾಗ ಮೌನ ಮುರಿಯುತ್ತೆÃನೆ ಎಂದರು. ಈ ಸಂದರ್ಭದಲ್ಲಿ ಕೂತು ಮಾತನಾಡಿ ಎಂದಿದ್ದಕ್ಕೆ ನಿಂತುಕೊಳ್ಳುವ ಶಕ್ತಿ ಇದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ನಿರ್ಭಯವಾಗಿ ಪತ್ರಿಕಾರಂಗದಲ್ಲಿ ಕೆಲಸ ಮಾಡುವುದು ಕಷ್ಟ ಅಂತ ಹೇಳುತ್ತಾರೆ.ಕೆಲವೊಮ್ಮೆ ಪತ್ರಕರ್ತರು ಏಟು ತಿಂದಿದ್ದು ಇದೆ. ನನಗೆ ರಾಜ್ಯ ಹಾಗೂ ದೆಹಲಿ ಅನುಭವವೂ ಇದೆ. ೧೯೬೨ ರಲ್ಲಿ ವಿಧಾನಸಭೆಗೆ ಪ್ರವೇಶ ಮಾಡಿದ್ದೆ. ಯಾವ ದಿನ ನನ್ನ ನೋವು ಮರೆಯುತ್ತೆÃನೆ ಅನ್ನೊÃದನ್ನು ನಿಮಗೆ ತಿಳಿಸಿ ಅಂದು ಮಾತನಾಡುತ್ತೆÃನೆ. ಆದರೆ ಈ ಸಂದರ್ಭದಲ್ಲಿ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.
ಯಾವ್ಯಾವ ಪತ್ರಿಕೆ, ಮಾಧ್ಯಮಗಳ ಮೇಲೆ ದಾಳಿ ಆಗಿದೆ ಅನ್ನೊÃದರ ಬಗ್ಗೆ, ಯಾರ್ಯಾರು ಜೈಲಿಗೆ ಹೋಗಿದ್ದಾರೆ ಅನ್ನುವುದರ ಬಗ್ಗೆ ಮಾತನಾಡುವುದು ಬೇಡ.ಮತ್ತೆ ನಿಮ್ಮ ಮುಂದೆ ಬರುತ್ತೆÃನೆ.ನನ್ನ ನೋವನ್ನು ಮರೆಯುವ ದಿನ ಬರುತ್ತದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿಇಂದಿನ ಪತ್ರಿಕೋದ್ಯಮ ಸಂಕಷ್ಟ ಸಾಧ್ಯತೆ, ಸವಾಲು ಕುರಿತು ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು, ಮಾತಿಗಾಗಿ ಕಾಯುವ ನೇತಾರರು ಇವತ್ತು ಹೆಚ್ಚಾಗಿದ್ದಾರೆ. ಆದರೆ ಇವತ್ತು ದೇವೇಗೌಡರು ಮಾತನಾಡಲಿಲ್ಲ.ದೇವೇಗೌಡರು ಯಾವಾಗಲು ರಾಜಕೀಯ ಕುರಿತು ಚಿಂತನೆ ಮಾಡುತ್ತಾ ಇರುತ್ತಾ ರೆಂದು ಹೇಳುತ್ತಾರೆ.ಆದರೆ, ಇವತ್ತು ಅವರು ಮಾತನಾಡದೇ ಇರುವುದರಿಂದ ಸಾಕಷ್ಟು ವಿಷಯ ಅವರ ಮೌನವೇ ತಿಳಿಸುತ್ತದೆ ಎಂದರು.

loading...