ವಿಮೆ ಕಂಪನಿ ಅಧಿಕಾರಿಗಳಿಂದ ರೈತರಿಗೆ ಮೋಸ: ಆರೋಪ

0
10
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ತಾಲೂಕಿನ ನೀರಾವರಿ ಬೆಳೆಗಳಾದ ಮುಸುಕಿನಜೋಳ ಸೂರ್ಯಕಾಂತಿ ನೀರಾವರಿ ಬೆಳೆಯಾಗಿದ್ದು ಮಳೆಯಾಶ್ರಿತ ಬೆಳೆ ಎಂದು ವಿಮೆ ತುಂಬಲು ಸೂಚಿಸಲಾಗಿದೆ ಇದು ಅವೈಜ್ಞಾನಿಕವಾಗಿದ್ದು ಮುಂಗಾರು ಬೆಳೆಗೆ ನೀರು ಬೇಕಾಗುತ್ತದೆ, ಈ ಬೆಳೆಗೆ ವಿಮೆ ಕಂತು ತುಂಬುವದರಿಂದ ರೈತರಿಗೆ ಲಾಭವಾಗುವದಿಲ್ಲ. ವಿಮೆ ಕಂಪನಿ ಅಧಿಕಾರಿಗಳು ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್‌.ಗೌಡರ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆ ಸರಕಾರ ನಿರ್ದೇಶಿತ ಮುಂಗಾರು ಬೆಳೆಗೆ ವಿಮೆ ಮಾಡಿಸಲು ಸರಕಾರ ಪ್ರಕಟಿಸಿದೆ, ಆದರೆ ಡಂಬಳ ಮುಂಡರಗಿ ಹೋಬಳಿಯ ಆಯಾ ಗ್ರಾಮಗಳಲ್ಲಿ ನಿರ್ದೇಶಿದ ಮಳೆಯಾಶ್ರಿತ ಸೂರ್ಯಕಾಂತಿ, ಮುಸುಕಿನಜೋಳ ಬೆಳೆಗೆ ವಿಮಾ ಹಣ ತುಂಬಲು ಘೋಷಣೆ ಮಾಡಿದ್ದು ಇದು ಅವೈಜ್ಞಾನಿಕವಾಗಿದೆ ಎಂದು ಹೇಳಿದರು ಮುಂಡರಗಿ ಹೋಬಳಿ ಮತ್ತು ಡಂಬಳ ಹೋಬಳಿ ಗ್ರಾಮವಾರು ಮುಸುಕಿನಜೋಳ ಸೂರ್ಯಕಾಂತಿ ಯಾವ ಆಧಾರದ ಮೇಲೆ ವಿಮೆ ಮಾಡಿಸಲು ಸೂಚಿಸಲಾಗಿದೆ ಎಂಬುದನ್ನು ಕೃಷಿ ಮತ್ತು ಕಂದಾಯ, ವಿಮಾ ಕಂಪನಿ ಸ್ಪಷ್ಟಪಡಿಸಬೇಕು, ಕಾರಣ ಈ ಭಾಗದಲ್ಲಿ ಮಳೆಯಾಶ್ರಿತ ಬೆಳೆಗಳು ಎಂದು ರೈತರ ಗೇಣಿ ಮತ್ತು ಪಹಣಿ ಪತ್ರಿಕೆಯಲ್ಲೂ ಕೂಡಾ ದಾಖಲಾಗಿಲ್ಲ, ಆದರೆ ಮಳೆಯಾಶ್ರಿತ ಹೆಸರು, ಎಳ್ಳು, ಶೆಂಗಾ ಸಜ್ಜಿ ಬೆಳೆಯನ್ನು ರೈತರು ಹೆಚ್ಚು ಪ್ರಮಾಣದಲ್ಲಿ ಬಿತ್ತುತ್ತಾರೆ. ಈಗ ಹೆಸರು ಬಿತ್ತಿ ಮಳೆ ಇಲ್ಲದ ಕಾರಣ ಬೆಳೆಗಳೆಲ್ಲ ಒಣಗುತ್ತಿವೆ ಸಾಲ ಮಾಡಿ ರೈತರು ಕೈಸುಟ್ಟುಕೊಂಡಿದ್ದಾರೆ, ಹೆಸರು ಬೆಳೆ ಬರದೆ ಇದ್ದರೆ ಇದಕ್ಕೆ ವಿಮೆ ಪಾವತಿಸಬೇಕಾಗುತ್ತದೆ ಈ ಹೆಸರು ಬೆಳೆಗೆ ಮಳೆಯಾಶ್ರಿತ ಎಂದು ನಿರ್ದೇಶಿಸುವ ಬದಲು ಮುಸುಕಿನಜೋಳ ಸೂಂiÀiರ್ಕಾಂತಿ ಬೆಳೆಗೆ ರೈತರಿಂದ ಸುಮ್ಮನೆ ಹಣ ತುಂಬಿಸಿಕೊಂಡಂತಾಗುತ್ತದೆ. ಇನ್ನು ವಿಮೆ ಪಾವತಿಸಲು ಜುಲೈ 31 ದಿನಾಂಕ ನಿಗದಿಗೊಳಿಸಿದ್ದು ಮುಂದಿನ ಹಿಂಗಾರು ಬೆಳಗೆ ರೈತರು ಜಮೀನು ಸಿದ್ದಪಡಿಸುವ ಕಾರಣ ನಾಶ ಹೊಂದಿದ ಹೆಸರು ಹರಗುವ ಸ್ಥಿತಿ ಬರುತ್ತದೆ ವಿಮೆಗಾಗಿ ಜಿಪಿಎಸ್‌ ಮಾಡುವ ಕಾರಣ ಜಮೀನಿನಲ್ಲಿ ಹೆಸರು ಬೆಳೆ ಇರುವದಿಲ್ಲ ಹೀಗಾಗಿ ಸಮಿಕ್ಷೆ ವೈಜ್ಞಾನಿಕವಾಗಿರುವದಿಲ್ಲ, ಜಮೀನಿನಲ್ಲಿ ಏನು ಇಲ್ಲ ಎಂಬುದು ನಮೂದಾಗಿ ರೈತರ ಬೆಳೆಗಳಿಗೆ ವಿಮೆ ಮಂಜೂರಾಗುವದಿಲ್ಲ, ಅಧಿಕಾರಿಗಳು ನಂತರ ವಿಮೆ ಬಂದಿಲ್ಲ, ಆನ್‌ ಲೈನ್‌ ಸಮಸ್ಯೆ ಇತರ ಸಬೂಬು ಹೇಳಿ ರೈತರಿಗೆ ಅನ್ಯಾಯ ಮಾಡಲಾಗುತ್ತದೆ, ವಾಸ್ತವ ಬೆಳೆಗಳ ಸಮಿಕ್ಷೆ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗೌಡರ ಯಾವ ಬೆಳೆ ಹೆಚ್ಚು ಬಿತ್ತನೆಯಾಗಿರುತ್ತದೆಯೋ ಆ ಬೆಳೆ ಬಿಟ್ಟು ಕಡಿಮೆ ಬಿತ್ತನೆ ಮಾಡಿದ ಬೆಳೆಗೆ ವಿಮೆ ಮಂಜೂರಾಗುತ್ತದೆ ಹೀಗಾಗಿ ಇದೊಂದು ಒಳಒಪ್ಪಂದದ ಸರಕಾರ ಕೃಪಾಪೋಷಿತ ಮಟ್ಕಾ ಉದ್ಯೋಗ ಎಂಬಂತಾಗಿದೆ ಎಂದು ಆರೋಪಿಸಿ ಸರಕಾರ ಹೀಗಾಗದಂತೆ ನ್ಯಾಯಯುತ ಬೆಳೆ ವಿಮೆ ಮಂಜೂರು ಮತ್ತು ಸೂಕ್ತ ಸಮಿಕ್ಷೆ ಮಾಡಬೇಕು ಎಂದು ಆಗ್ರಹಿಸಿದರು.

loading...