ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

0
6
loading...

ಕನ್ನಡಮ್ಮ ಸುದ್ದಿ-ನರಗುಂದ: ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಅಂಗನಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಮತ್ತು ಅಂಗನವಾಡಿ ಮೇಲ್ವಿಚಾರಕಿ ಎಸ್‌.ಬಿ. ಮುದರಡ್ಡಿಯವರಿಗೆ ಮನವಿ ಸಲ್ಲಿಸಿದರು.
ಅಂಗನವಾಡಿ ತಾಲೂಕು ಸಂಘದ ಅಧ್ಯಕ್ಷೆ ಶಾರದಾ ಹಳೇಮನಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಪ್ಯಾಕೇಜ್‌ ಸಿಸ್ಟಂ ಹಾಗೂ ಆಹಾರ ವಿತರಣೆ ಮತ್ತು ನಗದು ವರ್ಗಾವಣೆಯನ್ನು ಕೈಬಿಡಬೇಕು. ಎಸಿಡಿಎಸ್‌ಗೆ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸುವುದನ್ನು ಹಿಂತೆಗೆದುಕೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ಒದಗಿಸಬೇಕು. ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಟ ವೇತನ 18000 ರೂಗಳನ್ನು ಎಲ್ಲ ಅಂಗನವಾಡಿ ಕಾರ್ಯಕತೆÀರ್ಯರಿಗೆ ಜಾರಿಗೆ ಮಾಡಿ ಅವರು ಕಾರ್ಮಿಕರೆಂದು ಪರಿಗಣಿಸಬೇಕು. ಎಲ್ಲ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಮತ್ತು ಸಹಾಯಕಿಯರನ್ನು ಖಾಯಂಗೊಳಿಸುವುದಾಗಿ ಹಾಗೂ 10,500 ಕನಿಷ್ಟ ವೇತನ ಮತ್ತು 6 ಸಾವಿರ ನಿವೃತ್ತಿ ವೇತನ ನೀಡುವುದಾಗಿ ಮುಖ್ಯಮಂತ್ರಿಗಳು ಈ ಹಿಂದೆ ನೀಡಿದ್ದ ಇನ್ನಿತರ ಭರವಸೆಯನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರರು ನಿಮ್ಮ ಮನವಿಯನ್ನು ತಕ್ಷಣ ಮೇಲಾಧಿಕಾರಿಗಳಿಗೆ ತಲುಪಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಮತ್ತು ಸಹಾಯಕಿಯರಾದ ಎಸ್‌.ಬಿ. ರೋಣದ, ರೇಣುಕಾ ಹುಜರತ್ತಿ, ಚಾಂದಬೀಬಿ ಮುಲ್ಲಾನವರ, ಎಸ್‌.ಜೆ. ಬಾಗಲಕೋಟಿ, ಬಸಮ್ಮ ಗುಡಿಕಾರ, ಶಿವಲೀಲಾ ಹಿರೇಮಠ, ಪ್ರತಿಭಾ ಕುರಂದ್ವಾಡ, ಎಸ್‌.ವ್ಹಿ. ಜಗಳೂರ, ಪಿ.ಐ. ಹುಯಿಲ್‌ಗೋಳ, ಪ್ರೇಮಾ ಉಳ್ಳಾಗಡ್ಡಿ. ಅಂಗಡಿ, ಪಿ.ಬಿ. ಪೂಜಾರ, ದೇವಕ್ಕ ಮಾಮನಿ, ಗೀತಾ ದ್ಯಾವನಗೌಡ್ರ, ಬೇಬಿ ದೊಡಮನಿ, ಕಮಲಾ ದೊಡಮನಿ, ಬಸಮ್ಮ ಕೊಡ್ಲಿವಾಡ, ಸುಶೀಲಾ ನಾಗರಹಳ್ಳಿ, ಕೆ.ಎಂ. ಹಿರೇಮಠ ಉಪಸ್ಥಿತರಿದ್ದರು.

loading...